ETV Bharat / state

ಡಿಕೆಶಿ ಹೆಸರು ಹೇಳ್ಕೊಂಡು ಚುನಾವಣೆ ಮಾಡುವ ಸ್ಥಿತಿ ನಮಗಿಲ್ಲ: ಸಚಿವ ಆರ್‌ ಅಶೋಕ್ - ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ

ಕೊರೊನಾ ಅವ್ಯವಹಾರ ಮರೆಮಾಚಲು ಸಿಬಿಐ ದಾಳಿ ನಡೆಸಲಾಗಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಶಿರಾ ಮತ್ತು ಆರ್‌ಆರ್‌ನಗರ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ..

Minister R Ashok reaction about CBI Ride
ಸಚಿವ ಆರ್​ .ಆಶೋಕ್
author img

By

Published : Oct 6, 2020, 3:29 PM IST

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಅವರ ಹೆಸರನ್ನ ಬಳಸಿಕೊಂಡು ಉಪಚುನಾವಣೆ ಗೆಲ್ಲುವ ಪರಿಸ್ಥಿತಿ ನಮಗೆ ಬಂದಿಲ್ಲ ಎಂದು ಕಂದಾಯ ಸಚಿವ ಆರ್​ ಅಶೋಕ್​ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿಬಿಐ ಸ್ವತಂತ್ರ ಸಂಸ್ಥೆಯಾಗಿದೆ. ಡಿ ಕೆ ಶಿವಕುಮಾರ್​ ಮೇಲೆ 2017 ಮತ್ತು 18ರಲ್ಲೇ ದಾಖಲಾದ ಪ್ರಕರಣಗಳಿಗೆ ಸಂಬಂಧಪಟ್ಟಂತೆ ದಾಳಿ ನಡೆದಿದೆ. ಈ ಹಿಂದೆ ಕೂಡ ಜನಾರ್ದನ ರೆಡ್ಡಿ ಮತ್ತು ಯಡಿಯೂರಪ್ಪನವರ ನಿವಾಸಗಳ ಮೇಲೆ ಸಿಬಿಐ ದಾಳಿ ನಡೆದಿತ್ತು.

ಆಗ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಹಾಗಾದರೆ, ಅದನ್ನು ಕಾಂಗ್ರೆಸ್​ನವರು ಮಾಡಿಸಿದ್ದು ಎಂದು ಹೇಳಿದ್ರೆ ಒಪ್ಪಿಕೊಳ್ಳುತ್ತಾರಾ? ಎಂದು ಪ್ರಶ್ನಿಸಿದರು. ಸಿಬಿಐ ತನ್ನ ಕೆಲಸ ಮಾಡುತ್ತಿದೆ ಎಂದರು.

ಡಿಕೆಶಿ ಅವರ ಮನೆ ಮೇಲೆ ಸಿಬಿಐ ರೇಡ್‌ಗೆ ಸಂಬಂಧಿಸಿದಂತೆ ಸಚಿವ ಆರ್​ ಆಶೋಕ್ ಪ್ರತಿಕ್ರಿಯೆ

ಕುಮಾರಸ್ವಾಮಿಯವರಿಗೆ ಶೋಭೆ ತರಲ್ಲ : ನಿನ್ನೆ ಶಿರಾದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು ಮಾತನಾಡುವಾಗ, ಆರೆಸ್ಸೆಸ್​ನವರು ಉಪಚುನಾವಣೆಗೆ ₹50 ಕೋಟಿ ಖರ್ಚು ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದವರು, ಈ ರೀತಿ ಮಾತನಾಡಬಾರದು. ಇದು ಅವರಿಗೆ ಶೋಭೆ ತರುವುದಿಲ್ಲ ಎಂದು ಸಚಿವ ಆಶೋಕ್ ಹೇಳಿದರು.

ರಾಜರಾಜೇಶ್ವರಿ ನಗರದಲ್ಲಿ ಮುನಿರತ್ನ ನಾಯ್ಡುಗೆ ಟಿಕೆಟ್ ನೀಡುವ ಬಗ್ಗೆ ಪ್ರತಿಕ್ರಿಯಿಸಿ, ಅದನ್ನು ಪಕ್ಷ ನೋಡಿಕೊಳ್ಳುತ್ತದೆ. ಸರ್ಕಾರ ರಚನೆಗೆ ಸಹಾಯ ಮಾಡಿದವರನ್ನು ಕೈಬಿಡುವುದಿಲ್ಲ. ಯಾರಿಗೆ ಟಿಕೆಟ್ ಕೊಡಬೇಕೆಂಬುದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.

ಕೊರೊನಾ ವೈದ್ಯಕೀಯ ಉಪಕರಣ ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಅದರ ಲೆಕ್ಕ ಯಾವಾಗ ಬೇಕಾದ್ರೂ ಕೊಡುತ್ತೇವೆ. ವಿಧಾನಸಭೆಯಲ್ಲಿ ಈಗಾಗಲೇ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಲೆಕ್ಕ ಕೊಟ್ಟಿದ್ದಾರೆ.

ಕೊರೊನಾ ಅವ್ಯವಹಾರ ಮರೆಮಾಚಲು ಸಿಬಿಐ ದಾಳಿ ನಡೆಸಲಾಗಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದರು. ಶಿರಾ ಮತ್ತು ಆರ್‌ಆರ್‌ನಗರ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.