ETV Bharat / state

ಲಾಕ್‌ಡೌನ್ ಬಳಿಕ ಹೆಚ್ಚಾದ ಸರಗಳ್ಳತನ: ಖದೀಮರಿಗೆ ಒಂಟಿ ಮಹಿಳೆಯರೇ ಟಾರ್ಗೆಟ್

ಚಿನ್ನದ ಬೆಲೆ ಗಗನಕ್ಕೇರುತ್ತಿದಂತೆ ಸರಗಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಖದೀಮರು ಬಲೆ ಬೀಸುತ್ತಿದ್ದಾರೆ. ಲಾಕ್​ಡೌನ್​​ ಬಳಿಕ ಈ ಕೃತ್ಯಗಳು ಜಾಸ್ತಿಯಾಗಿವೆ.

the menace of Chain Snatching
ಲಾಕ್‌ಡೌನ್ ಬಳಿಕ ಹೆಚ್ಚಾದ ಸರಗಳ್ಳತನ
author img

By

Published : Oct 30, 2020, 4:55 PM IST

ಬೆಂಗಳೂರು: ಕೊರೊನಾ ಬಂದ ಬಳಿಕ ಕೊಲೆ, ಕಳ್ಳತನ, ಸರಗಳ್ಳತನ, ದರೋಡೆ, ಬೈಕ್ ಕಳ್ಳತನ ಸೇರಿದಂತೆ ಅನೇಕ ಅಪರಾಧಗಳು ಹೆಚ್ಚಾಗುತ್ತಿದ್ದು, ತಮ್ಮದೇ ಒಂದು ಗ್ಯಾಂಗ್ ಮಾಡಿಕೊಂಡು ಅಪರಾಧ ಕೃತ್ಯಗಳಲ್ಲಿ ಅನೇಕರು ಭಾಗಿಯಾಗ್ತಿದ್ದಾರೆ. ಅದರಲ್ಲಿ ಮುಖ್ಯವಾಗಿ ಸರಗಳ್ಳತನ ಜಾಸ್ತಿಯಾಗ್ತಿದ್ದು, ಮನೆ ಮುಂದೆ ರಂಗೋಲಿ ಹಾಕುವವರು, ಮುಂಜಾನೆ ವಾಕಿಂಗ್ ಹೋಗುವವರು ಹಾಗೂ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ, ಕ್ಷಣಾರ್ಧದಲ್ಲಿ ಸರಗಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದಾರೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಸರಗಳ್ಳತನ ಪ್ರಕರಣಗಳು ಹೆಚ್ಚಾಗಿ ದಾಖಲಾಗ್ತಿವೆ. ರಾಜಾರೋಷವಾಗಿ ಮಾರಕಾಸ್ತ್ರಗಳನ್ನು ಕೈಯಲ್ಲಿ ಹಿಡಿದು, ಸಾರ್ವಜನಿಕರಿಗೆ ಬೆದರಿಸಿ ಹಣ ವಸೂಲಿ ಮಾಡುತ್ತಿರುವುದು ಕಂಡು ಬರುತ್ತಿದೆ. ಹಾಗಾಗಿ ಖಾಕಿ ಫುಲ್ ಅಲರ್ಟ್ ಆಗಿದ್ದು, ವಿಶೇಷ ತಂಡ ರಚನೆ ಮಾಡಿ ಆರೋಪಿಗಳ ಮಟ್ಟ ಹಾಕಲಾಗುತ್ತಿದೆ. ಇನ್ನು ವರ್ಷ ಸಿಲಿಕಾನ್ ಸಿಟಿಯಲ್ಲಿ 225 ಸರಗಳ್ಳತನದ ಪ್ರಕರಣಗಳು ದಾಖಲಾಗಿದ್ದು, 193 ಜನರನ್ನು ಬಂಧಿಸಲಾಗಿದೆ.

ಲಾಕ್‌ಡೌನ್ ಬಳಿಕ ಹೆಚ್ಚಾದ ಸರಗಳ್ಳತನ

ತುಮಕೂರು ಜಿಲ್ಲೆಯಲ್ಲಿ ಮಾರ್ಚ್ ತಿಂಗಳಿನಿಂದ ಇದುವರೆಗೂ ಒಟ್ಟು 14 ಸರಗಳ್ಳತನ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ತುಮಕೂರು ತಾಲೂಕಿನಲ್ಲಿ 6, ಕುಣಿಗಲ್ ತಾಲೂಕಿನಲ್ಲಿ 4 ಹಾಗೂ ಶಿರಾ ಮತ್ತು ಪಾವಗಡ ತಾಲೂಕಿನಲ್ಲಿ ತಲಾ ಎರಡು ಸರಗಳ್ಳತನ ಪ್ರಕರಣಗಳು ದಾಖಲಾಗಿವೆ. ಇದುವರೆಗೂ 7 ಆರೋಪಿಗಳನ್ನು ಬಂಧಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಗಳ್ಳತನ ಪ್ರಕರಣ ನಿಯಂತ್ರಣದಲ್ಲಿದೆ. ಜಿಲ್ಲೆಯಲ್ಲಿ ಎರಡು ಸರಗಳ್ಳತನ ಪ್ರಕರಣಗಳು ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.

ಲಾಕ್​​​​ಡೌನ್ ಸಂದರ್ಭದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿದ್ದವು. ಹಾಗೂ ಕೊರೊನಾ ಭೀತಿಯಿಂದ ಆರೋಪಿಗಳನ್ನು ಮಟ್ಟ ಹಾಕಲು ಖಾಕಿ ಹಿಂದೇಟು ಹಾಕ್ತಿತ್ತು. ಇದೀಗ ಸಹಜಸ್ಥಿತಿಯತ್ತ ಜೀವನ ಸಾಗುತ್ತಿದ್ದು, ಮತ್ತೆ ಕ್ರೈಂ ಅನ್ನು ಕಂಟ್ರೋಲ್‌ ಮಾಡಲು ಖಾಕಿ ಮುಂದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.