ಬೆಂಗಳೂರು : 77ನೇ ಸ್ವಾತಂತ್ರೋತ್ಸವದ ಅಂಗವಾಗಿ ವಿಧಾನಸೌಧದ ಬೆಳಕಿನ ಅಲಂಕಾರ ನೋಡಲು ಬರುವ ಸಾರ್ವಜನಿಕರಿಗೆ ಬೆಂಗಳೂರು ಸಂಚಾರಿ ಪೊಲೀಸರು ಕೆಲವು ಸೂಚನೆಗಳನ್ನು ನೀಡಿದ್ದಾರೆ. ಇಂದು ರಾತ್ರಿ ಶಕ್ತಿಸೌಧ ವಿಶೇಷ ಬೆಳಕಿನ ಅಲಂಕಾರದಲ್ಲಿ ಜಗಮಗಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆ ಇದೆ. ಹೀಗಾಗಿ, ಸಂಚಾರಿ ಪೊಲೀಸರು ಕೆಲವು ಬದಲಾವಣೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಇಲ್ಲಿ ವಾಹನಗಳ ನಿಲುಗಡೆ ಮಾಡಿ: ಹೈಕೋರ್ಟ್ ಪಾರ್ಕಿಂಗ್ ಆವರಣ (ಹಳೇ ಕೆಜಿಐಡಿ ಬಿಲ್ಡಿಂಗ್ ಕಡೆಗೆ), ಕಿಂಗ್ಸ್ ರಸ್ತೆ, ಎಂ.ಎಸ್. ಬಿಲ್ಡಿಂಗ್ನ ಒಳಭಾಗ.
ವಾಹನ ನಿಲುಗಡೆ ನಿಷೇಧ: ವಿಧಾನಸೌಧದ ಮುಂಭಾಗದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯ (ಬಾಳೇಕುಂದ್ರಿ ಸರ್ಕಲ್ ನಿಂದ ಕೆ.ಆರ್.ಸರ್ಕಲ್ ವರೆಗೆ) ಎರಡೂ ಕಡೆ ಪಾರ್ಕಿಂಗ್ ನಿಷೇಧಿಸಲಾಗಿದೆ.
ವಿಧಾನಸೌಧದ ಮುಂಭಾಗ ಸಂಚಾರ ದಟ್ಟಣೆ ಹೆಚ್ಚಾದಲ್ಲಿ ಸುಗಮ ಸಂಚಾರದ ಸಲುವಾಗಿ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿ (ಬಾಳೇಕುಂದ್ರಿ ಸರ್ಕಲ್‌ನಿಂದ ಕೆ.ಆರ್.ಸರ್ಕಲ್‌ವರೆಗೆ ಎರಡೂ ಕಡೆಗೆ ಸೇರಿದಂತೆ) ಮಾರ್ಗ ಬದಲಾವಣೆ ಮಾಡಲಾಗುತ್ತಿದೆ. ಸಾರ್ವಜನಿಕರು ಬದಲಿ ಮಾರ್ಗದಲ್ಲಿ ಸಂಚರಿಸಬೇಕಿದೆ. ಸಾಧ್ಯವಾದಷ್ಟು ಸಮೂಹ ಸಾರಿಗೆ ವಾಹನಗಳಾದ ಬಿಎಂಟಿಸಿ ಬಸ್‌ಗಳು, ಮೆಟ್ರೋ, ಕ್ಯಾಬ್‌ಗಳನ್ನು ಬಳಸುವಂತೆ ತಿಳಿಸಲಾಗಿದೆ.
ಇದನ್ನೂ ಓದಿ : 77th Independence Day: ಕೋಮು ಶಕ್ತಿಗಳ ವಿರುದ್ಧ ಇಂದಿನ ಸ್ವಾತಂತ್ರ್ಯ ಸಂಗ್ರಾಮ ನಡೆಯಬೇಕು: ಡಿಸಿಎಂ ಡಿಕೆಶಿ