ದೊಡ್ಡಬಳ್ಳಾಪುರ : ಕಟ್ಟಡದಿಂದ ಬಿದ್ದ ಪರಿಣಾಮ ಬೆನ್ನುಮೂಳೆ ಮುರಿದುಕೊಂಡ ಯುವಕನಿಗೆ ಕಳೆದ ಐದು ವರ್ಷದಿಂದ ಹಾಸಿಗೆಯಲ್ಲೇ ಜೀವನ ಕಳೆಯುತ್ತಿದ್ದಾನೆ. ಪ್ರತಿಯೊಂದಕ್ಕೂ ಬೇರೆಯವರನ್ನ ಅವಲಂಬಿಸಿರುವ ಆತನಿಗೆ ಗುಣಮುಖನಾಗಿ ತನ್ನ ಹೆತ್ತವರನ್ನ ಸಾಕಬೇಕೆನ್ನುವ ಆಸೆಯಿದೆ. ಇದರ ಮಧ್ಯೆ ಮಗನನ್ನ ಉಳಿಸಿಕೊಳ್ಳಲು ಆತನ ತಾಯಿ ಬೇರೆಯವರ ಸಹಾಯ ಬೇಡುತ್ತಿದ್ದಾಳೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ ರಾಜೀವ್ ಗಾಂಧಿ ಬಡವಾವಣೆಯ ನಿವಾಸಿ ಶಿವಾಜಿ ರಾಂಗೆ ಸದ್ಯ 29 ವರ್ಷ. ಇವರನ್ನ ಎಳೆಯ ಮಕ್ಕಳಂತೆ ನೋಡಿಕೊಳ್ಳಬೇಕಿದೆ. ಬೆನ್ನುಮೂಳೆ ಮುರಿತರಿಂದ ದೇಹದ ಸ್ವಾಧಿನ ಕಳೆದುಕೊಂಡಿದ್ದು ಪ್ರತಿಯೊಂದಕ್ಕೂ ಬೇರೆಯವರನ್ನ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಐದು ವರ್ಷಗಳಿಂದ ಹಾಸಿಗೆಯಲ್ಲಿಯೇ ಮಲ ಮೂತ್ರ ವಿಸರ್ಜನೆ ಮಾಡಬೇಕು. ಆತನ ಅಣ್ಣ ಮತ್ತು ತಾಯಿ ಚಿಕ್ಕ ಮಗುವಿನ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದಾರೆ.
ಕಟ್ಟಡದ ಮೇಲಿಂದ ಬಿದ್ದು ಬೆನ್ನುಮೂಳೆ ಮುರಿತ
ಶಿವಾಜಿ ರಾಮ್ ಫ್ಲಬಿಂಗ್ ಕೆಲಸ ಮಾಡುತ್ತಿದ್ದ, ಮನೆಯೊಂದರ ಮೇಲೆ ಸಿಂಟೆಕ್ಸ್ ಟ್ಯಾಂಕ್ ಅಳವಡಿಸಲು ಹೋಗಿದ್ದಾಗ. ಸಿಂಟೆಕ್ಸ್ ಭಾರಕ್ಕೆ ಕಬ್ಬಿಣದ ರಾಡ್ ಮುರಿದ ಪರಿಣಾಮ ಕಬ್ಬಿಣದ ರಾಡ್ ಮೇಲೆ ನಿಂತ್ತಿದ್ದ ಶಿವಾಜಿ ಅಲ್ಲಿಂದ ಕೆಳಗೆ ಬಿದ್ದಿದ್ದಾನೆ. ಮೇಲಿಂದ ನೇರವಾಗಿ ನೀರು ಕಾಯಿಸುವ ಓಲೆ ಮೇಲೆ ಬಿದ್ದಿದರಿಂದ ಆತನ ಬೆನ್ನುಮೂಳೆ ಮುರಿದು ಸ್ವಾಧೀನ ಕಳೆದುಕೊಂಡಿದೆ.
ಐದು ವರ್ಷಗಳಿಂದ ಹಾಸಿಗೆ ಹಿಡಿದಿರುವ ಶಿವಾಜಿಗೆ ದೇಹದ ಹಿಂಭಾಗ ಕೊಳೆಯಲು ಶುರುವಾಗಿದೆ. ಪ್ರತಿದಿನ ಕೊಳೆತ್ತಿರುವ ಜಾಗವನ್ನು ಸ್ವಚ್ಛ ಮಾಡಿ ಡ್ರೆಸಿಂಗ್ ಮಾಡುವುದು ಆತನ ತಾಯಿ ಮತ್ತು ಅಣ್ಣ. ನಿಜಕ್ಕೂ ಈ ಕೆಲಸ ನರಕ ದರ್ಶನ ಮೂಡಿಸುತ್ತದೆ. ದೇಹ ಕೊಳೆತ್ತಿರುವ ಜಾಗದಲ್ಲಿ ಇಡೀ ಕೈ ಒಳಗೆ ಹೋಗಿ ಬರುತ್ತೆ. ಮಗನ ಸ್ಥಿತಿ ನೋಡಲಾರದೆ ನೋವಿನಲ್ಲಿ ಆತನ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಅವನಿಗೆ ಅಸರೆಯಾಗಿರೋದು ಸುಗುಣಬಾಯಿ ಮತ್ತು ಆತನ ಅಣ್ಣ.
ಬರುವ ಪಿಂಚಣಿ ಹಣದಲ್ಲಿ ಸಂಸಾರ ನಿರ್ವಹಣೆ ನಡೆಯುತ್ತಿದೆ. ಇದರ ಜೊತೆಯಲ್ಲಿ ಶಿವಾಜಿ ಚಿಕಿತ್ಸೆಗಾಗಿ ಲಕ್ಷ ಲಕ್ಷ ಹಣ ಖರ್ಚು ಮಾಡಿದ್ದಾರೆ. ಇರುವ ಹಣ ಖಾಲಿಯಾಗಿ ಬರಿದು ಮಾಡಿಕೊಂಡಿದೆ ಕುಟುಂಬ. ಆರ್ಯುವೇದ ಚಿಕಿತ್ಸೆಯಲ್ಲಿ ಗುಣಮುಖನಾಗುತ್ತಿರುವ ಶಿವಾಜಿಗೆ ಸದ್ಯ ಹಣಕಾಸಿನ ಸಮಸ್ಯೆ ಇದೆ. ಮಗನ ಚಿಕಿತ್ಸೆಗಾಗಿ ಆಕೆ ದಾನಿಗಳನ್ನ ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ.
ಮನೆಗೆ ಆಧಾರವಾಗಿದ್ದ ಮಗನನ್ನ ಮೊದಲಿನಂತೆ ಮಾಡಲು ಆತನ ಸ್ನೇಹಿತರ ಬಳಗ ಮತ್ತು ಕುಟುಂಬ ಶ್ರಮಿಸುತ್ತಿದೆ. ಅದರೆ ಚಿಕಿತ್ಸೆ ಕೊಡಿಸುವಷ್ಟು ಹಣ ಅವರಲಿಲ್ಲ. ಈ ಕುಟುಂಬದವರ ಮೂಖದಲ್ಲಿ ಸಂತೋಷ ಮೂಡ ಬೇಕಾದರೆ ದಾನಿಗಳು ತಮ್ಮ ಉದಾರ ಮನಸ್ಸಿನಿಂದ ದಾನ ಬೇಕಿದೆ.
ಸಹಾಯ ಮಾಡಲಿಚ್ಚಿಸುವರು ಈ ಕೆಳಗಿನ ಅಕೌಂಟ್ ಗೆ ಹಣ ಕಳಿಸಬಹುದು
Name : SUGUNABAI
A/C NO- 3826101005920
IFSC CODE -CNRB0003826
CANARA BANK BRANCH- PALANAJOGAHALLI
MOBILE- 98442266871