ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮನೆಗೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ದಿಢೀರ್ ಭೇಟಿ ನೀಡಿದ್ದರು. ಸದ್ಯ ಲಾಕ್ಡೌನ್ಯಿಂದಾಗಿ ಮನೆಯಲ್ಲಿರುವ ಶಿವರಾಜ್ ಕುಮಾರ್ಗೆ ಅಚ್ವರಿ ಹುಟ್ಟಿಸಿದೆ. ಮಾನ್ಯತಾ ಟೆಕ್‍ಪಾರ್ಕ್ ಬಳಿ ಇರುವ ಶಿವಣ್ಣನ ಮನೆಗೆ ತೆರಳಿದ ಡಿ.ಕೆ ಶಿವಕುಮಾರ್ ಸಡನ್ ಭೇಟಿ ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ. ಆದರೆ ಈ ಭೇಟಿ ಕೇವಲ ಔಪಚಾರಿಕ ಎಂದು ಶಿವರಾಜ್ ಕುಮಾರ್ ಮೂಲಗಳು ತಿಳಿಸಿವೆ.

ಕೊರೊನಾದಿಂದಾಗಿ ಸಿನಿಮಾ ಇಂಡಸ್ಟ್ರಿ ಮೇಲೆ ಆಗಿರುವ ಪರಿಣಾಮ ಹಾಗೂ ಸೋಂಕಿತ ಪ್ರಕರಣ ಹೆಚ್ಚಾಗುತ್ತಿರುವ ಬಗ್ಗೆ ಶಿವರಾಜ್ ಕುಮಾರ್ ಹಾಗೂ ಡಿ.ಕೆ ಶಿವಕುಮಾರ್ ಮಧ್ಯೆ ಚರ್ಚೆ ಆಗಿದೆ ಎನ್ನಲಾಗಿದೆ.
ಹಾಗೇ ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಡಿಕೆಶಿ ಅಡ್ವಾನ್ಸ್ ವಿಶ್ ಮಾಡಿದ್ದು, ಕುಶಲೋಪರಿ ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ ಪತ್ನಿ ಗೀತಾ ಹಾಗೂ ಟಗರು ಸಿನಿಮಾದ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಕೂಡ ಉಪಸ್ಥಿತರಿದ್ದು, ಕೆಲಹೊತ್ತಿನ ಚರ್ಚೆಯ ಬಳಿಕ ಡಿಕೆಶಿ ವಾಪಸಾಗಿದ್ದಾರೆ.