ಬೆಂಗಳೂರು: ಪಬ್ನಲ್ಲಿ ಕಿರಿಕ್ ಕೀರ್ತಿ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ರಾಜಧಾನಿಯ ಉತ್ತರ ವಿಭಾಗದ ಸದಾಶಿವನಗರ ಪೊಲೀಸರು ಅನಿಲ್, ವಿಜಯ್, ಅಜಯ್, ಸೇರಿದಂತೆ ಐವರ ಆರೋಪಿಗಳನ್ನು ಬಂಧಿಸಿದ್ದಾರೆ. ಕಿರಿಕ್ ಕೀರ್ತಿ ಮೇಲೆ ಬಿಯರ್ ಬಾಟಲ್ ನಿಂದ ಹಲ್ಲೆ ಮಾಡಿದ್ದ ಪ್ರಕರಣ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಇದೇ ತಿಂಗಳ 3 ರಂದು ಪ್ರಕರಣ ದಾಖಲಾಗಿತ್ತು.
ಕೀರ್ತಿ ಮಾತನಾಡಿಸಲು ಹೋದಾಗ ಕಿರಿಕ್:
ಡಿಸೆಂಬರ್ 2 ರ ಮಧ್ಯರಾತ್ರಿ ಮೇಕ್ರಿ ಸರ್ಕಲ್ ಬಳಿಯ ಸದಾಶಿವನಗರದ ಹ್ಯಾಮರ್ಡ್ ಪಬ್ನಲ್ಲಿ ಕಿರಿಕ್ ಕೀರ್ತಿ ಕುಳಿತ ಪಕ್ಕದ ಟೇಬಲ್ನಲ್ಲಿ, ಅನಿಲ್, ವಿಜಯ್, ಅಜಯ್ ಹಾಗೂ ಸ್ನೇಹಿತರು ಇದ್ದರು. ಈ ವೇಳೆ ಅನಿಲ್ ಕಿರಿಕ್ ಕೀರ್ತಿ ನನಗೆ ಪರಿಚಯ ಎಂದು ಹೇಳಿಕೊಂಡಿದ್ದಾನೆ. ಜೊತೆಯಲ್ಲಿದ್ದವರು ಹಾಗಿದ್ದರೆ ಹೋಗಿ ಮಾತನಾಡಿಸು ಎಂದಿದ್ದಾರೆ. ಈ ವೇಳೆ ಕಿರಿಕ್ ಕೀರ್ತಿ ಬಳಿ ಬಂದು ನಾನ್ಯಾರು ಗೊತ್ತಾಯ್ತಾ ಎಂದು ಅನಿಲ್ ಕೇಳಿದ್ದಾನೆ, ಕೀರ್ತಿ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾನೆ.
ಈ ಸಮಯದಲ್ಲಿ ಸ್ನೇಹಿತರು ವಿಡಿಯೋ ಮಾಡಿಕೊಳ್ಳಲು ಮುಂದಾಗಿದ್ದಾರೆ, ವಿಡಿಯೋ ಯಾಕೆ ಮಾಡ್ಕೊಳ್ಳುತ್ತಿದ್ದೀರಿ ಎಂದು ಕೀರ್ತಿ ಕೇಳಿದ್ದಾನೆ. ನಂತರ ಮಾತಿಗೆ ಮಾತು ಬೆಳೆದು ಆರೋಪಿಗಳು ಬಿಯರ್ ಬಾಟಲಿಯಿಂದ ಕಿರಿಕ್ ಕೀರ್ತಿ ಮೇಲೆ ಹಲ್ಲೆ ನೆಡೆಸಿ ಎಸ್ಕೇಪ್ ಆಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಪಬ್ನಲ್ಲಿ ಕಿರಿಕ್ ಕೀರ್ತಿ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ