ETV Bharat / state

ಲೋಕಾಯುಕ್ತ ದಾಳಿ: ಭ್ರಷ್ಟ ಅಧಿಕಾರಿಗಳ ಬಳಿ ದೊರೆತ ಸಂಪತ್ತು ಎಷ್ಟು ಗೊತ್ತೇ? - ಸರ್ಕಾರಿ ಅಧಿಕಾರಿಗಳ ನಿವಾಸ

ಬುಧವಾರ ರಾಜ್ಯಾದ್ಯಂತ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಭ್ರಷ್ಟ ಅಧಿಕಾರಿಗಳು ಹಾಗೂ ಅವರು ಆದಾಯ ಮೀರಿ ಸಂಪಾದಿಸಿದ ಆಸ್ತಿ ವಿವರ ಇಲ್ಲಿದೆ.

Statewide Lokayukta raid
ರಾಜ್ಯಾದ್ಯಂತ ಲೋಕಾಯುಕ್ತ ದಾಳಿ
author img

By

Published : Jun 1, 2023, 12:15 PM IST

Updated : Jun 5, 2023, 1:38 PM IST

ಬೆಂಗಳೂರು: ರಾಜ್ಯಾದ್ಯಂತ ನಿನ್ನೆ (ಬುಧವಾರ) ಲೋಕಾಯುಕ್ತ ಅಧಿಕಾರಿಗಳು ಕೆಲವು ಭ್ರಷ್ಟ ಸರ್ಕಾರಿ ಅಧಿಕಾರಿಗಳ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಿ ವ್ಯಾಪಕ ಶೋಧ ನಡೆಸಿದ್ದರು. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು, ಕೊಪ್ಪಳ, ಮಂಗಳೂರು, ಹಾವೇರಿ, ಉಡುಪಿ ಸೇರಿದಂತೆ ಒಟ್ಟು 57 ಕಡೆ ನಡೆದ ಕಾರ್ಯಾಚರಣೆಯಲ್ಲಿ ಅಧಿಕಾರಿಗಳ ಕೋಟಿ ಕೋಟಿ ಮೌಲ್ಯದ ಅಕ್ರಮ ಸಂಪತ್ತು ಪತ್ತೆಯಾಗಿದೆ.

ಅಧಿಕಾರಿಗಳು, ಅಕ್ರಮ ಸಂಪತ್ತು:

  • ಬೆಸ್ಕಾಂ ಚೀಫ್​ ಇಂಜಿನಿಯರ್​ ಎಚ್.ಜೆ. ರಮೇಶ್ - ನಾಲ್ಕು ಕಡೆ ಪರಿಶೀಲನೆ. ಒಟ್ಟು 5.6 ಕೋಟಿ ರೂ ಮೌಲ್ಯದ ಆಸ್ತಿ ಪತ್ತೆ
  • ಟಿ.ಬಿ. ನಾರಾಯಣಪ್ಪ, ಡೆಪ್ಯೂಟಿ ಡೈರೆಕ್ಟರ್ ಆಫ್ ಫ್ಯಾಕ್ಟರೀಸ್, ಕಾರ್ಮಿಕ ಭವನ - ಹತ್ತು ಸ್ಥಳಗಳಲ್ಲಿ ದಾಳಿ. ಒಟ್ಟು ₹2.5 ಕೋಟಿಯಷ್ಟು ಆಸ್ತಿ ಪತ್ತೆ
  • ಎಸ್.ಡಿ. ರಂಗಸ್ವಾಮಿ, ಪಿಡಿಒ, ಕಿತ್ತನಹಳ್ಳಿ ಗ್ರಾಮ ಪಂಚಾಯಿತಿ - ಮೂರು ಕಡೆ ದಾಳಿ, ಒಟ್ಟು ₹ 2.5 ಕೋಟಿ ಆಸ್ತಿ ಪತ್ತೆ.
  • ಎನ್.ಜಿ. ಪ್ರಮೋದ್ ಕುಮಾರ್, ಎಕ್ಸಿಕ್ಯೂಟಿವ್ ಇಂಜಿನಿಯರ್, ಬಿಬಿಎಂಪಿ - 5 ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ, ಒಟ್ಟು ₹ 8 ಕೋಟಿ ಮೌಲ್ಯದ ಆಸ್ತಿ ಪತ್ತೆ.
  • ಎನ್. ಮುತ್ತು, ಚೀಫ್ ಅಕೌಂಟ್ ಆಫೀಸರ್, ಮೈಸೂರು ಅರ್ಬನ್ ಡೆವಲಪ್ಮೆಂಟ್ ಅಥಾರಿಟಿ - ಮೂರು ಕಡೆ ದಾಳಿ, ₹2.70 ಕೋಟಿ ಮೌಲ್ಯದ ಆಸ್ತಿ ಪತ್ತೆ
  • ಜೆ. ಮಹೇಶ್, ಸೂಪರಿಂಟೆಂಡೆಂಟ್ ಇಂಜಿನಿಯರ್, ಡೆಪ್ಯೂಟಿ ಕಮಿಷನರ್ ಆಫೀಸ್, ಮೈಸೂರು - ಮೂರು ಕಡೆ ದಾಳಿ, ₹2.5 ಕೋಟಿ ಮೌಲ್ಯದ ಆಸ್ತಿ ಪತ್ತೆ.
  • ಎ.ಎನ್. ನಾಗೇಶ್, ಎಇಇ ಮೈಸೂರು ಅರ್ಬನ್ ಡೆವಲಪ್ಮೆಂಟ್ ಅಥಾರಿಟಿ - ಮೂರು ಕಡೆ ದಾಳಿ, ₹2.30 ಕೋಟಿ ಆಸ್ತಿ ಪತ್ತೆ
  • ಎನ್. ಶಂಕರಮೂರ್ತಿ, ಸೀನಿಯರ್ ಸಬ್ ರಿಜಿಸ್ಟರ್, ನಂಜನಗೂಡು. ಮೂರು ಕಡೆ ದಾಳಿ, ಒಟ್ಟು ₹2.63 ಕೋಟಿ ಆಸ್ತಿ ಪತ್ತೆ
  • ಶಂಕರ್ ನಾಯಕ್, ಜ್ಯೂನಿಯರ್ ಇಂಜಿನಿಯರ್, ಆರ್ ಡಿ ಪಿಆರ್, ಶಿಕಾರಿಪುರ - ಲೋಕಾಯುಕ್ತ ಅಧಿಕಾರಿಗಳಿಂದ ಮುಂದುವರೆದ ದಾಳಿ.
  • ಕೆ.ಪ್ರಶಾಂತ್, ಸೂಪರಿಂಟೆಂಡೆಂಟ್ ನೀರಾವರಿ ನಿಗಮ, ಶಿವಮೊಗ್ಗ - ಐದು ಕಡೆ ದಾಳಿ, ₹3.20 ಕೋಟಿ ಮೌಲ್ಯದ ಆಸ್ತಿ ಪತ್ತೆ
  • ಡಿ.ಆರ್.ಕುಮಾರ್, ಲೇಬರ್ ಆಫೀಸರ್ ಮಣಿಪಾಲ್ - ಎರಡು ಕಡೆ ದಾಳಿ, ₹ 1.40 ಕೋಟಿ ಮೌಲ್ಯದ ಆಸ್ತಿ ಪತ್ತೆ
  • ಎ.ಎಂ. ನಿರಂಜನ್, ಸೀನಿಯರ್ ಭೂ ಗರ್ಭಶಾಸ್ತ್ರಜ್ಞ - ಎರಡು ಕಡೆ ದಾಳಿ, ಒಟ್ಟು ₹3.66 ಕೋಟಿ ಮೌಲ್ಯದ ಆಸ್ತಿ ಪತ್ತೆ.
  • ವಾಗೀಶ್ ಬಸವಾನಂದ ಶೆಟ್ಟರ್, ಪ್ರಾಜೆಕ್ಟ್ ಇಂಜಿನಿಯರ್, ನಿರ್ಮಿತಿ ಕೇಂದ್ರ ಹಾವೇರಿ - ಮೂರು ಕಡೆ ದಾಳಿ, ಒಟ್ಟು ₹ 4.75 ಕೋಟಿ ಮೌಲ್ಯದ ಆಸ್ತಿ ಪತ್ತೆ.
  • ಜರನಪ್ಪ ಎಂ. ಚಿಂಚಿಲೀಕರ್, ಎಕ್ಸಿಕ್ಯುಟಿವ್ ಇಂಜಿನಿಯರ್, ಕೆಆರ್ ಐಡಿಎಲ್, ಕೊಪ್ಪಳ - ಐದು ಕಡೆ ದಾಳಿ, ಒಟ್ಟು ₹ 3.5 ಕೋಟಿ ಮೌಲ್ಯದ ಆಸ್ತಿ ಪತ್ತೆ
  • ಸಿ.ಎನ್. ಮೂರ್ತಿ, ಎಕ್ಸಿಕ್ಯುಟಿವ್ ಇಂಜಿನಿಯರ್, ಕೆಐಎಡಿಬಿ ಮೈಸೂರು - ನಾಲ್ಕು ಕಡೆ ದಾಳಿ, ಒಟ್ಟು ₹3.5 ಕೋಟಿ ಮೌಲ್ಯದ ಆಸ್ತಿ ಪತ್ತೆ

ಉಳಿದಂತೆ, ಆರೋಪಿತರ ವಿರುದ್ಧ ವಿಚಾರಣೆ ಮುಂದುವರೆದಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: ವರ್ಗಾವಣೆ ಪತ್ರ ನೀಡಲು ಲಂಚ ಕೇಳಿದ ಪ್ರಾಚಾರ್ಯ ಬಲೆಗೆ

Last Updated : Jun 5, 2023, 1:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.