ETV Bharat / state

New Cars to Ministers: ರಾಜ್ಯ ಸರ್ಕಾರದಿಂದ ಸಚಿವರಿಗೆ ಹೊಸ ಕಾರು ಭಾಗ್ಯ! - ಕರ್ನಾಟಕ ಸಚಿವರಿಗೆ ಹೊಸ ಕಾರು ಖರೀದಿ

New Cars to Ministers: ರಾಜ್ಯ ಸರ್ಕಾರ ತನ್ನ ಎಲ್ಲ ಸಚಿವರಿಗೆ ಹೊಸ ಕಾರು ಖರೀದಿಗೆ ಮುಂದಾಗಿದೆ. ಇದಕ್ಕಾಗಿ 9.9 ಕೋಟಿ ರೂ ಅನುದಾನ ನೀಡಲಾಗಿದೆ.

New cars to ministers
ಸಚಿವರಿಗೆ ಹೊಸ ಕಾರು
author img

By ETV Bharat Karnataka Team

Published : Sep 2, 2023, 7:39 AM IST

ಬೆಂಗಳೂರು: ಕಾಂಗ್ರೆಸ್ ಸರ್ಕಾರ ತನ್ನ ಎಲ್ಲ ಸಚಿವರಿಗೆ ಹೊಸ ಇನ್ನೊವಾ ಕ್ರಸ್ಟಾ ಕಾರು ಖರೀದಿಸಲು ಮುಂದಾಗಿದೆ. 33 ಹೊಸ ಇನ್ನೊವಾ ಕ್ರಸ್ಟಾ ಹೈ ಎಂಡ್ ಕಾರನ್ನು ಖರೀದಿಸಲು ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್ ನೀಡಿದ್ದು, ಇದಕ್ಕಾಗಿ ಸುಮಾರು 9.9 ಕೋಟಿ ರೂ.‌ ಅನುದಾನ ನೀಡಲಾಗಿದೆ‌. ಟೆಂಡರ್ ಕರೆಯದೇ ನೇರವಾಗಿ 33 ಸಚಿವರಿಗೆ ಹೊಸ ಕಾರು ಖರೀದಿ ಮಾಡಲು ಕೆಟಿಪಿಪಿ ಕಾಯ್ದೆಯಡಿ 4ಜಿ ವಿನಾಯಿತಿ ನೀಡಲಾಗಿದೆ.‌ ಒಂದು ಇನ್ನೊವಾ ಹೈಬ್ರಿಡ್ ಎಸ್ ಯುವಿ ಕಾರಿಗೆ ಸುಮಾರು 30 ಲಕ್ಷ ರೂ. ವೆಚ್ಚವಾಗಲಿದೆ.‌

ಹಳೆ ಕಾರುಗಳ ಗರಿಷ್ಠ ಮಿತಿಯಾದ 1 ಲಕ್ಷ ಕಿಮೀಗೂ ಅಧಿಕ ದೂರ ಕ್ರಮಿಸಿರುವುದರಿಂದ ನಿಯಮದ ಪ್ರಕಾರ ಹೊಸ ಕಾರು ಖರೀದಿಸಬೇಕಾಗಿದೆ. ನಿಯಮದಂತೆ 1 ಲಕ್ಷ ಕಿಮೀ ಓಡಾಟ ಅಥವಾ 3 ವರ್ಷ ಬಳಕೆಯಲ್ಲಿ ಯಾವುದು ಮೊದಲು ಅದರನ್ವಯ ಹೊಸ ಕಾರು ಖರೀದಿಸಬೇಕು. ಸಚಿವರ ಸುರಕ್ಷತೆಯ ದೃಷ್ಟಿಯಿಂದ ಹೊಸ ಕಾರು ಖರೀದಿ ಅನಿವಾರ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸಕ್ತ ಸಚಿವರ ಕಾರುಗಳನ್ನು 2020ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ ಖರೀದಿಸಲಾಗಿತ್ತು. ಬಳಿಕ ಹೊಸ ಕಾರನ್ನು ಖರೀದಿಸಿಲ್ಲ‌.‌ ಕೆಲ ಕಾರುಗಳು 2 ಲಕ್ಷ ಕಿಮೀ ಮೀರಿ ಓಡಾಡಿವೆ. ಹೀಗಾಗಿ ಹೊಸ ಕಾರನ್ನು ಖರೀದಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯರಿಗೆ ಹೊಸ ಕಾರನ್ನು ಖರೀದಿಸಲಾಗಿದೆ.

ಬರದ ಛಾಯೆ, ಅನುದಾನದ ಕೊರತೆ ಮಧ್ಯೆ ಕಾರು ಖರೀದಿ: ಈಗಾಗಲೇ ರಾಜ್ಯ ಬರದ ಛಾಯೆಯನ್ನು ಎದುರಿಸುತ್ತಿದೆ. ಮಳೆ ಕೊರತೆಯ ಹಿನ್ನೆಲೆ ರಾಜ್ಯ ತೀವ್ರ ಬರಗಾಲದ ಅಂಚಿನಲ್ಲಿದೆ. ಸುಮಾರು 170 ಕ್ಕೂ ಅಧಿಕ ತಾಲೂಕುಗಳಲ್ಲಿ ಬರದ ಆತಂಕ ಮನೆ ಮಾಡಿದೆ. ಈ ಪರಿಸ್ಥಿತಿಯಲ್ಲಿ ಸಚಿವರಿಗೆ ಹೊಸ ಹೈ ಎಂಡ್ ಕಾರು ಖರೀದಿ ಅಗತ್ಯವೇ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಮೂಡಿದೆ.

ಇನ್ನು ಪಂಚ ಗ್ಯಾರಂಟಿ ಅನುಷ್ಠಾನಕ್ಕಾಗಿ ಬೃಹತ್ ಪ್ರಮಾಣದ ಅನುದಾನದ ಅವಶ್ಯಕತೆ ಇದೆ. ಅದಕ್ಕಾಗಿ ಹಣ ಹೊಂದಿಸಲು ಸರ್ಕಾರ ಇತರೆ ಇಲಾಖೆಗಳ ಅನುದಾನ ಕಡಿತಗೊಳಿಸಿ, ಶಾಸಕರಿಗೆ ವಿಶೇಷ ಅನುದಾನ ನೀಡಲು ನಿರಾಕರಿಸುತ್ತಿದೆ. ಅಭಿವೃದ್ಧಿಗೂ ಹಣದ ಕೊರತೆ ಎದುರಾಗುವ ಆತಂಕ ವ್ಯಕ್ತವಾಗಿರುವ ಈ ಸಂದರ್ಭದಲ್ಲಿ ಸಚಿವರಿಗೆ ದುಬಾರಿ ಕಾರು ಖರೀಸುವ ಅಗತ್ಯವಿತ್ತೇ ಎಂಬ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ: ಸರ್ಕಾರಿ ನೌಕರರ ವರ್ಗಾವಣಾ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.