ETV Bharat / state

ಏರೋಸ್ಪೇಸ್ ವಲಯದಲ್ಲಿ ಕರ್ನಾಟಕ ನಂಬರ್ ಒನ್ ಆಗಲು ಅರ್ಹ: ಸಿಎಂ ಬಸವರಾಜ ಬೊಮ್ಮಾಯಿ - ETV Bharat Karnataka

ಏರೋ ಇಂಡಿಯಾ ಶೋ 2023- ಕರ್ನಾಟಕ ನಂಬರ್ ಒನ್ ಸ್ಥಾನಕ್ಕೇರಲು ಎಲ್ಲ ಅರ್ಹತೆ ಹೊಂದಿದೆ- ಸಿಎಂ ಬೊಮ್ಮಾಯಿ ಅಭಿಮತ

Chief Minister Basavaraja Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
author img

By

Published : Feb 15, 2023, 7:06 AM IST

ಬೆಂಗಳೂರು : ಏರೋಸ್ಪೇಸ್ ವಲಯದಲ್ಲಿ ಲಂಡನ್ ಮತ್ತು ಸಿಂಗಾಪುರದ ನಂತರ ಕರ್ನಾಟಕ ರಾಜ್ಯವಿದ್ದು, ಕರ್ನಾಟಕ ನಂಬರ್ ಒನ್ ಸ್ಥಾನಕ್ಕೇರಲು ಎಲ್ಲ ಅರ್ಹತೆ ಹೊಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವ ಏರೋ ಇಂಡಿಯಾ ಶೋ- 2023 ನಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ವಿದೇಶಿ ಗಣ್ಯರು ಹಾಗೂ ಉದ್ಯಮಿಗಳು ಆಗಮಿಸಿಸಿದ್ಧಾರೆ. ಇವರಿಗೆ ಗೌರವಾರ್ಥವಾಗಿ ಸಿಎಂ ಬೊಮ್ಮಾಯಿ ಅವರು ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಅತಿಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಹೊಸ ತಂತ್ರಜ್ಞಾನ ಸಾಕಷ್ಟು ಬದಲಾವಣೆ ತಂದಿದೆ : ಫೆ.13 ರಿಂದ 17 ರ ವರೆಗೆ ನಡೆಯುತ್ತಿರುವ ಏರ್​ ಶೋ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ. ಜೊತೆಗೆ ಸತತವಾಗಿ ಬೆಂಗಳೂರಿನಲ್ಲಿ 14 ಬಾರಿ ಏರ್ ಶೋ ಏರ್ಪಡಿಸಿದ್ದು, ದೇಶದ ಯಾವುದೇ ರಾಜ್ಯ ಇಷ್ಟೊಂದು ಏರ್ ಶೋ ಏರ್ಪಡಿಸಿಲ್ಲ. ಈ ಬಾರಿ ಹೆಚ್ಚಿನ ಉದ್ಯಮಿಗಳು ಭಾಗವಹಿಸುತ್ತಿದ್ದು, ಹೆಚ್ಚಿನ ಪ್ರದರ್ಶನಗಳು ನಡೆಯುತ್ತಿವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು. ಬೆಂಗಳೂರಿನಲ್ಲಿ ಅಪಾರ ಅವಕಾಶಗಳು ಇವೆ. ಇಂಜನಿಯರ್​ಗಳು, ತಂತ್ರಜ್ಞರ ನಿರಂತರ ಶ್ರಮದಿಂದ ಏರ್ ಶೋ ಯಶಸ್ವಿಯಾಗಿ ಜರುಗುತ್ತಿದೆ. ನಮ್ಮ ಹಿರಿಯರು 1960 ಯಲ್ಲಿ ಇಲ್ಲಿ ಬಂಡವಾಳ ಹೂಡುವಲ್ಲಿ ಯಶಸ್ವಿಯಾಗಿದ್ದಾರೆ. ಹೊಸ ತಂತ್ರಜ್ಞಾನ ಸಾಕಷ್ಟು ಬದಲಾವಣೆ ತಂದಿದೆ. ರಾಜ್ಯದ ಅಧಿಕಾರಿಗಳು ಯಶಸ್ಬಿಯಾಗಿ ಏರ್ ಶೋ ಆಯೋಜನೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿಗಳು ಅಭಿನಂದಿಸಿದರು.

At a dinner party organized by the Chief Minister
ಮುಖ್ಯಮಂತ್ರಿಗಳು ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಭಾಗವಹಿಸಿದ್ದ ಸಚಿವ ಮುರುಗೇಶ ನಿರಾಣಿ ಮತ್ತು ಅಧಿಕಾರಿಗಳು

ಏರೋಸ್ಪೇಸ್ ನೀತಿ : ನಮ್ಮ ರಾಜ್ಯ ಯುವ ಪ್ರತಿಭಾವಂತ ಉದ್ಯಮಿಗಳು ಮತ್ತು ತಂತ್ರಜ್ಞರಿಂದ ಉದ್ಯಮಗಳು ಬೆಳೆಯಲು ಕಾರಣರಾಗಿದ್ದಾರೆ. ಯುವ ಪ್ರತಿಭಾವಂತರು ಇರವುದರಿಂದ ಏರೋ ಸ್ಪೇಸ್ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ. ಏರೊಸ್ಪೇಸ್ ನೀತಿ ರಾಜ್ಯದಲ್ಲಿದ್ದು, ಸಣ್ಣ ಕೈಗಾರಿಕೆಗಳು ಹಾಗೂ ಬೃಹತ್ ಉದ್ಯಮಗಳಿಗೆ ಸೂಕ್ತ ಅವಕಾಶಗಳಿವೆ. ನಾವು ಶೇ 65% ರಷ್ಟು ರಕ್ಷಣಾ ಉತ್ಪಾದನೆ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಶೇ 70% ರಷ್ಟು ಉತ್ಪಾದನೆ ಮಾಡುತ್ತೇವೆ. ಈಗಾಗಲೇ ಅನೇಕರು ಇಲ್ಲಿ ಬಂಡವಾಳ ಹೂಡಿದ್ದಾರೆ. ಇನ್ನೂ ಅನೇಕರು ಬಂಡವಾಳ ಹೂಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಯುಎಸ್ ಕಾನ್ಸುಲೇಟ್ ಕರೆ : ಬೆಂಗಳೂರು ಏರೋ ಶೋ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಯುಎಸ್​ ಕಾನ್ಸುಲೇಟ್​ ರಾಯಭಾರಿ ಅವರು ಇಲ್ಲಿ ಉತ್ತಮ ಪರಿಸರ, ಆರ್ಥಿಕ ಪರಿಸ್ಥಿತಿಯಿದ್ದು, ನಮ್ಮ ಬೆಳವಣಿಗೆಯಲ್ಲಿ ನೀವು ಭಾಗಿದಾರರಾಗಿ ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣಾ ಉಪಸ್ಥಿತರಿದ್ದರು.

ಇದನ್ನೂ ಓದಿ :ಉತ್ಪಾದನೆ- ಕೌಶಲ್ಯಗಳ ಪ್ರದರ್ಶನಕ್ಕೆ ಏರೋ ಇಂಡಿಯಾ ಉತ್ತಮ ವೇದಿಕೆ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.