ಬೆಂಗಳೂರು: ರಾಜ್ಯದಲ್ಲಿಂದು 4,553 ಜನರಿಗೆ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 10,15,155 ಕ್ಕೆ ಏರಿಕೆ ಆಗಿದೆ.
15 ಸೋಂಕಿತರು ಸಾವನ್ನಪ್ಪಿದ್ದು, ಮೃತರ ಸಂಖ್ಯೆಯು 12,625 ಕ್ಕೆ ಏರಿದೆ. ಇಂದು 2,060 ಮಂದಿ ಗುಣಮುಖರಾಗಿದ್ದರೆ, ಈವರೆಗೆ 9,63,419 ಮಂದಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇತ್ತ ಮತ್ತೆ ಸಕ್ರಿಯ ಪ್ರಕರಣಗಳು 39,092 ಕ್ಕೆ ಏರಿದ್ದು, 331 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಂಕಿತರ ಪ್ರಕರಣಗಳ ಶೇ. 3.79 ರಷ್ಟು ಇದ್ದರೆ ಮೃತಪಟ್ಟವರ ಪ್ರಮಾಣ ಶೇ. 0.32 ರಷ್ಟಿದೆ.