ETV Bharat / state

ನಕಲಿ ದಾಖಲಾತಿ ಸೃಷ್ಟಿಸಿ ಬೈಕ್ ಕದಿಯುತ್ತಿದ್ದ ಗ್ಯಾಂಗ್​ ಅರೆಸ್ಟ್​..​ OLX ನಲ್ಲಿ ವಾಹನಗಳ ದಾಖಲೆ ಪೋಸ್ಟ್ ಮಾಡುವ ಮುನ್ನ ಹುಷಾರ್!​​ - ಕಾಮಾಕ್ಷಿ ಪೊಲೀಸರ ಕಾರ್ಯಾಚರಣೆ

ರಾಜಸ್ಥಾನದಿಂದ ಬಂದು ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದ ಕೆಲ ಖದೀಮರು, OLX ನಲ್ಲಿ ಪೋಸ್ಟ್ ಮಾಡಿದ್ದ ದಾಖಲಾತಿಗಳನ್ನು ಬಳಸಿ ಕದ್ದ ಬೈಕ್​ಗಳನ್ನೇ ಮಾರಾಟ ಮಾಡುತ್ತಿದ್ದ ಅಂತಾರಾಜ್ಯ ಖದೀಮರನ್ನು ಕಾಮಾಕ್ಷಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

Kamakshi police arrest interstate bike thieves at Bangalore
ಕಲಿ ದಾಖಲಾತಿ ಸೃಷ್ಟಿಸಿ ಬೈಕ್ ಕಳ್ಳತನ ಮಾಡ್ತಿದ್ದ ಗ್ಯಾಂಗ್​ ಅಂದರ್​
author img

By

Published : Jul 29, 2021, 4:07 PM IST

Updated : Jul 29, 2021, 4:17 PM IST

ಬೆಂಗಳೂರು: ದುಬಾರಿ ಮೌಲ್ಯದ ಬೈಕ್ ಕದ್ದು ನಕಲಿ ದಾಖಲಾತಿ ಸೃಷ್ಟಿಸಿ ರಾಜಸ್ಥಾನಕ್ಕೆ ಸಾಗಿಸಿ ಮಾರಾಟ ಮಾಡುತ್ತಿದ್ದ ಮೂವರು ಅಂತಾರಾಜ್ಯ ಬೈಕ್ ಖದೀಮರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ನಕಲಿ ದಾಖಲಾತಿ ಸೃಷ್ಟಿಸಿ ಬೈಕ್ ಕಳ್ಳತನ ಮಾಡ್ತಿದ್ದ ಗ್ಯಾಂಗ್​ ಅಂದರ್​

ರಾಜಸ್ಥಾನ ಮೂಲದ ವಿಕಾಸ್ ಕುಮಾರ್, ದವಲ್ ದಾಸ್, ದಶರತ್ ಬಂಧಿತ ಅರೋಪಿಗಳು. ಖದೀಮರಿಂದ ವಿವಿಧ ಕಂಪನಿಯ 33 ಲಕ್ಷ ಬೆಲೆಬಾಳುವ ಸುಮಾರು 26 ಬೈಕ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳು ಮೆಕ್ಯಾನಿಕ್ ಹಾಗೂ ಹಾರ್ಡ್​​ವೇರ್ ಶಾಪ್​​ಗಳಲ್ಲಿ ಕೆಲಸ ಮಾಡುತ್ತಿದ್ದು, ಸುಲಭವಾಗಿ ಹಣ ಸಂಪಾದನೆ ಮಾಡಲೆಂದು ಬೈಕ್ ಕಳ್ಳತನಕ್ಕೆ ಇಳಿದಿದ್ದರು‌‌. ಬೆಳಗ್ಗೆ ಮನೆ ಮುಂದೆ ಆಥವಾ ಸಾರ್ವಜನಿಕ ಪ್ರದೇಶಗಳಲ್ಲಿ‌‌ ನಿಲ್ಲಿಸುತ್ತಿದ್ದ ಬೈಕ್​​​ಗಳ ಹ್ಯಾಂಡಲ್‌ ಮುರಿದು ಕದಿಯುತ್ತಿದ್ದ ಆರೋಪಿಗಳು ಕದ್ದ ವಾಹನಗಳನ್ನು ಆಂಧ್ರಹಳ್ಳಿಯ ಖಾಲಿ ನಿವೇಶನಗಳಲ್ಲಿ ನಿಲ್ಲಿಸುತ್ತಿದ್ದರು‌. ಕೆಲ ದಿನಗಳ ಬಳಿಕ ಬೇರೆಯವರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಿ ರಾಜಸ್ಥಾನಕ್ಕೆ ತೆರಳುತ್ತಿದ್ದರು.

ರಾಜಸ್ಥಾನದಿಂದ ನಗರಕ್ಕೆ ಫ್ಲೈಟ್​​​ನಲ್ಲಿ ಬರುತ್ತಿದ್ದ ಖದೀಮರು:

ಬೈಕ್ ಮಾರಾಟದಿಂದ ಬಂದ ಹಣ ಖರ್ಚಾದ ಬಳಿಕ ಮತ್ತೆ ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗಲು ರಾಜಸ್ಥಾನದಿಂದ ಬೆಂಗಳೂರಿಗೆ ವಿಮಾನ ಮಾರ್ಗವಾಗಿ ಬರುತ್ತಿದ್ದರು. ಚಂದ್ರಲೇಔಟ್, ಜ್ಞಾನಭಾರತಿ, ಅನ್ನಪೂರ್ಣೇಶ್ವರಿ ನಗರ, ಕಾಮಾಕ್ಷಿಪಾಳ್ಯ ಸೇರಿದಂತೆ ವಿವಿಧ ಕಡೆಗಳಲ್ಲಿದ್ದ ಬೈಕ್​ಗಳನ್ನು ಕಳ್ಳತನ ಮಾಡುತ್ತಿದ್ದರು ಎನ್ನಲಾಗುತ್ತಿದೆ.

ಬೈಕ್​​​ಗಳ‌ ದಾಖಲಾತಿಗಾಗಿ OLX ದುರ್ಬಳಕೆ:

ಆರೋಪಿಗಳು ವಾಹನ ಮಾರಾಟ ಮಾಡಲು ಗ್ರಾಹಕರು OLX ನಲ್ಲಿ ಹಾಕುತ್ತಿದ್ದ ವಾಹನಗಳ ದಾಖಲಾತಿಗಳನ್ನು ಜೆರಾಕ್ಸ್ ತೆಗೆದುಕೊಳ್ಳುತ್ತಿದ್ದರು‌. ನಕಲಿ ಆರ್​​​ಸಿ ಬುಕ್ ಸೇರಿದಂತೆ‌ ಇನ್ನಿತರ ದಾಖಲಾತಿ ಸೃಷ್ಟಿಸಿ ಬೈಕ್​​​ಗಳನ್ನು‌ OLX ಮುಖಾಂತರ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು. ದುಬಾರಿ ಬೆಲೆಯ ಬೈಕ್​​​ಗಳನ್ನು ರಾಜಸ್ಥಾನದಲ್ಲಿ‌ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕದ್ದ ಬೈಕ್​​​ಗಳಿಗೆ ಪೊಲೀಸ್ ಎಂದು ಬರೆಸುತ್ತಿದ್ದ ಕಳ್ಳರು:

ಕಳ್ಳತನ ಮಾಡಿದ ಬೈಕ್​​​ಗಳನ್ನು ಸುಲಭವಾಗಿ ಒಂದು ಕಡೆಯಿಂದ ಇನ್ನೊಂದು ಕಡೆ ಸಾಗಿಸಲು ಬೈಕ್​​​ಗಳಿಗೆ ಪೊಲೀಸರ ಹೆಸರು ಬಳಸಿಕೊಳ್ಳುತ್ತಿದ್ದರು‌.‌ ಅಲ್ಲದೆ‌ ರಾಯಲ್ ಎನ್ ಫೀಲ್ಡ್ ಬೈಕಿಗೆ ಸಬ್ ಇನ್​​​ಸ್ಪೆಕ್ಟರ್ ಎಂದು ಹೆಸರು ಹಾಕಿಸಿ ಪೊಲೀಸ್ ಮಾದರಿ ಸೈರನ್ ಲೈಟು ಹಾಕಿಸಿಕೊಂಡಿದ್ದರು. ಬೈಕ್‌ ಸಾಗಣೆ ವೇಳೆ ಲಾಕ್ ಡೌನ್ ಜಾರಿಯಲ್ಲಿ ಇದ್ದಿದ್ದರಿಂದ ವಾಹನ ತಪಾಸಣೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಈ ಐಡಿಯಾ ಬಳಸುತ್ತಿದ್ದರು ಎಂದ ಹೇಳಲಾಗುತ್ತಿದೆ‌.

ಓದಿ: ಲಿವಿಂಗ್ ಟುಗೆದರ್‌ನಲ್ಲಿದ್ದ ಯುವತಿಯನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ಟೆಕ್ಕಿ!

Last Updated : Jul 29, 2021, 4:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.