ETV Bharat / state

ಪರ್ಮಿಟ್ ಇಲ್ಲದೆ ಸಂಚರಿಸುತ್ತಿದ್ದ 4 ಅಂತರ್​​​ ರಾಜ್ಯ ಬಸ್​​ಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು

ನಾಗಾಲ್ಯಾಂಡ್‌ ಹಾಗೂ ಅರುಣಾಚಲ‌ ಪ್ರದೇಶದ ಪರ್ಮಿಟ್ ಹೊಂದಿರದ ಬಸ್‌ಗಳು ರಾಜ್ಯದಲ್ಲಿ ಸಂಚಾರ ನಡೆಸುತ್ತಿದ್ದನ್ನು ಗಮನಿಸಲಾಗಿದೆ. ರಾಜ್ಯದ ಪರ್ಮಿಟ್ ಪಡೆಯದೆ, ತೆರಿಗೆ ಕಟ್ಟದೆ ಇರುವುದು ಕಂಡು ಬಂದಿದೆ. ಈ ನಿಟ್ಟಿನಲ್ಲಿ ಬಸ್​​ಗಳನ್ನು ವಶಕ್ಕೆ ಪಡೆದಿದ್ದು, ದಾಖಲಾತಿಗಳನ್ನು ಹಾಜರುಪಡಿಸುವಂತೆ ಬಸ್‌ ಮಾಲೀಕರುಗಳಿಗೆ ನೋಟಿಸ್‌ ನೀಡಲಾಗಿದೆ.

Interstate buses Roam without permit
ಪರ್ಮಿಟ್ ಇಲ್ಲದೆ ಸಂಚರಿಸುತ್ತಿದ್ದ ಅಂತರಾಜ್ಯ ಬಸ್​​ಗಳು ವಶಕ್ಕೆ
author img

By

Published : Oct 6, 2020, 9:14 AM IST

ಬೆಂಗಳೂರು: ಪರ್ಮಿಟ್‌ ಇಲ್ಲದೆ ರಾಜ್ಯದಲ್ಲಿ ಸಂಚರಿಸುತ್ತಿದ್ದ 4 ಅಂತಾರಾಜ್ಯ ಬಸ್‌ಗಳನ್ನು ವಿಶೇಷ ಕಾರ್ಯಾಚರಣೆ ನಡೆಸಿ ಯಲಹಂಕ ಪ್ರಾದೇಶಿಕ ಸಾರಿಗೆ ಕಚೇರಿಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಯಲಹಂಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಾಶ್‌ ನೇತೃತ್ವದಲ್ಲಿ ಹೈದರಾಬಾದ್‌ ರಸ್ತೆಯಲ್ಲಿ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು.

ಇದೇ ವೇಳೆ ನಾಗಾಲ್ಯಾಂಡ್‌ ಹಾಗೂ ಅರುಣಾಚಲ‌ ಪ್ರದೇಶದ ಪರ್ಮಿಟ್ ಹೊಂದಿರದ ಬಸ್‌ಗಳು ರಾಜ್ಯದಲ್ಲಿ ಸಂಚಾರ ನಡೆಸುತ್ತಿದ್ದನ್ನು ಗಮನಿಸಲಾಗಿದೆ. ರಾಜ್ಯದ ಪರ್ಮಿಟ್ ಪಡೆಯದೆ, ತೆರಿಗೆ ಕಟ್ಟದೆ ಇರುವುದು ಕಂಡು ಬಂದಿದೆ. ಈ ನಿಟ್ಟಿನಲ್ಲಿ ಬಸ್​​ಗಳನ್ನು ವಶಕ್ಕೆ ಪಡೆದಿದ್ದು, ದಾಖಲಾತಿಗಳನ್ನು ಹಾಜರುಪಡಿಸುವಂತೆ ಬಸ್‌ ಮಾಲೀಕರುಗಳಿಗೆ ನೋಟಿಸ್‌ ನೀಡಲಾಗಿದೆ. ಅವರು ದಾಖಲಾತಿಗಳನ್ನು ನೀಡಿದ ನಂತರ ಖಚಿತವಾದ ದಂಡದ ಮೊತ್ತದ ತಿಳಿದು ಬರಲಿದೆ ಎಂದು ಯಲಹಂಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಾಶ್‌ ಮಾಹಿತಿ ನೀಡಿದ್ದಾರೆ.

ಯಲಹಂಕ ಸಾರಿಗೆ ಕಚೇರಿಯ ಹಿರಿಯ ಮೋಟಾರ್‌ ವಾಹನ ನಿರೀಕ್ಷಕ ರಾಜ್‌ಕುಮಾರ್‌ ಹಾಗೂ ನಿರೀಕ್ಷಕಿ ಲಕ್ಷ್ಮೀ ಅವರ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.