ಬೆಂಗಳೂರು: ನನಗೇನು ಸಿಎಂ ಆಗೋಕೆ ಅರ್ಜೆಂಟ್ ಇಲ್ಲ. ನಾನೇನು ಸಿಎಂ ಆಗಬೇಕು ಅಂತ ಹೇಳಿದ್ದೀನಾ. ಕಾಂಗ್ರೆಸ್ ಅಧಿಕಾರಕ್ಕೆ ತರಲು ಚಪ್ಪಡಿ ಆಗುತ್ತೇನೆ ಎಂದು ಹೇಳಿದ್ದೇನಷ್ಟೇ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ಬಿಜೆಪಿ ಸಮಸ್ಯೆಗೂ ಕಾಂಗ್ರೆಸ್ ಸಮಸ್ಯೆಗೂ ಸಾಕಷ್ಟು ವ್ಯತ್ಯಾಸ ಇದೆ. ನಮ್ಮಲ್ಲಿ ಯಾವುದೇ ಖುರ್ಚಿ ಖಾಲಿ ಇಲ್ಲ. ಪಕ್ಷ ಅಧಿಕಾರಕ್ಕೆ ತರುವ ವಿಚಾರಕ್ಕೆ ನಾವು ನಮ್ಮ ಸಮಯ ಮೀಸಲಿಡಬೇಕು ಎಂದು ಪಕ್ಷದ ಶಾಸಕರಿಗೆ ಕರೆ ಕೊಟ್ಟಿದ್ದಾರೆ. ನಾವೆಲ್ಲ ಸೇರಿ ಮೊದಲು ಬಿಜೆಪಿ ಸೋಲಿಸಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರೋಕೆ ಏನು ಮಾಡಬೇಕು. ಅದನ್ನು ಎಲ್ಲರೂ ಸೇರಿ ಮಾಡೋಣ ಎಂದಿದ್ದಾರೆ.
ಪ್ರತಿಯೊಬ್ಬ ನಾಗರಿಕರು ರಾಜ್ಯದಲ್ಲಿ ಬದಲಾವಣೆಯಾಗಬೇಕು ಎಂದು ನಿರೀಕ್ಷಿಸುತ್ತಿದ್ದಾರೆ. ಅದಕ್ಕೆ ನಾವು ಒಂದಾಗಿ ಕೆಲಸ ಮಾಡಬೇಕು. ಸಿಎಂ ವಿಚಾರವಾಗಿ ನಡೆಯುತ್ತಿರುವ ಚರ್ಚೆಯನ್ನು ಶಾಸಕಾಂಗ ಪಕ್ಷದ ನಾಯಕರು ನೋಡಿಕೊಳ್ಳುತ್ತಾರೆ ಎಂದು ಡಿಕೆಶಿ ಪ್ರತಿಕ್ರಿಯಿಸಿದ್ದಾರೆ.
ಓದಿ:ಡೆಲ್ಟಾ+ ವೈರಸ್ ಪತ್ತೆ ಬಗ್ಗೆ ಸಿಎಂ ಬಿಎಸ್ವೈಗೆ ಮಾಹಿತಿಯೇ ಇಲ್ಲವಂತೆ