ಬೆಂಗಳೂರು: ಆಚಾರ್ಯ ಮಹಾಪ್ರಾಗ್ಯ ಜನ್ಮದಿನೋತ್ಸವ ಹಿನ್ನೆಲೆ ಬೆಂಗಳೂರು ಉತ್ತರ ತಾಲೂಕಿನ ಅಡಕಮಾರನಹಳ್ಳಿಯ ಜೈನ್ ಮಂದಿರದಲ್ಲಿ ಅದ್ಧೂರಿ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಹಾಗೂ ರಾಜ್ಯದ ವಿವಿಧೆಡೆ ನೆಲೆಸಿರುವ ಜೈನ ಸಮುದಾಯದ ಸಾವಿರಾರು ಮಂದಿ ಭಾಗಿಯಾಗಿದ್ದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ, ವಜುಬಾಯಿ ವಾಲಾ ಭಾರತದ ಸಂಸ್ಕೃತಿ ಸತ್ಯ ನಿಷ್ಟೆ ಪ್ರಾಮಾಣಿಕತೆಯಿಂದ ಕೂಡಿದೆ. ಮಹಾವೀರ ಜೈನರು ನಮಗೆಲ್ಲ ಉತ್ತಮ ಮಾರ್ಗಗಳನ್ನು ಹಾಕಿಕೊಟ್ಟಿದ್ದಾರೆ. ನಾವು ಆ ಮಾರ್ಗದಲ್ಲೇ ನಡೆಯುವುದು ಸೂಕ್ತ ಎಂದು ಕಿವಿಮಾತು ಹೇಳಿದರು.
ಎಷ್ಟೆ ಜ್ಞಾನವನ್ನು ಹೊಂದಿದ್ದರು, ಆ ಜ್ಞಾನ ಕೆಲಸಕ್ಕೆ ಬರಲಿಲ್ಲವೆಂದರೆ ಅದು ವ್ಯರ್ಥ. ವೈಭೋಗದ ಜೀವನ ಅರ್ಥವಿಲ್ಲದ ಬದುಕು ಎಂದು ಜೀವನದ ಸಾರಾಂಶ ತಿಳಿಸಿದರು.