ETV Bharat / state

ಸಾಂದರ್ಭಿಕವಾಗಿ ಪೆನ್ ಡ್ರೈವ್ ವಿಷಯ ಪ್ರಸ್ತಾಪಿಸಿದ್ದೆ: ನನ್ನ ಹೆಸರು ತಳುಕು ಹಾಕಬೇಡಿ ಎಂದ ನಿರಾಣಿ

ಕೊರೊನಾ ಸಂಬಂಧಿತ ವೈದ್ಯಕೀಯ ಉಪಕರಣಗಳ ಖರೀದಿಯ ಅಕ್ರಮದ ಬಗ್ಗೆ ಶಾಸಕ ಮುರುಗೇಶ್​ ನಿರಾಣಿ ಬಳಿ ಪೆನ್​ ಡ್ರೈವ್​ ಇದೆ ಎಂಬ ವಿಷಯ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಆದ್ರೆ ಈ ವಿಷಯವನ್ನು ಸಾಂದರ್ಭಿಕವಾಗಿ ಹೇಳಿದ್ದು ಅಷ್ಟೇ, ದಯವಿಟ್ಟು ಈ ವಿಚಾರದಲ್ಲಿ ನನ್ನ ಹೆಸರನ್ನು ತಳಕು ಹಾಕಬೇಡಿ ಎಂದು ಅವರು ಪ್ರತಿಪಕ್ಷ ನಾಯಕರಿಗೆ ಮನವಿ ಮಾಡಿದ್ದಾರೆ.

Nirani
ಶಾಸಕ ಮುರುಗೇಶ್​ ನಿರಾಣಿ
author img

By

Published : Jul 9, 2020, 3:12 PM IST

ಬೆಂಗಳೂರು: ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಅಪರಿಚಿತ ವ್ಯಕ್ತಿ ಭೇಟಿಯಾದ ಮಾಹಿತಿ ನೀಡಿದ್ದೇನೆಯೇ ಹೊರತು ಅವ್ಯವಹಾರದ ದಾಖಲೆ ನನ್ನ ಬಳಿ ಇದೆ ಎಂದು ಹೇಳಿಲ್ಲ. ಈ ವಿಷಯದಲ್ಲಿ ಅನಗತ್ಯವಾಗಿ ನನ್ನ ಹೆಸರು ತಳುಕು ಹಾಕಬಾರದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಶಾಸಕ ಮುರುಗೇಶ್ ನಿರಾಣಿ ಮನವಿ ಮಾಡಿದ್ದಾರೆ.

ಶಾಸಕ ಮುರುಗೇಶ್​ ನಿರಾಣಿ

ಕೋವಿಡ್-19 ಗೆ ಸಂಬಂಧಿಸಿದಂತೆ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ಅಪರಿಚಿತ ವ್ಯಕ್ತಿಯೊಬ್ಬರು ನನ್ನ ಕಚೇರಿಗೆ ಬಂದು ನನಗೆ ತಿಳಿಸಿದ್ದರು. 125 ಪುಟಗಳ ದಾಖಲೆಗಳ ಪೆನ್ ಡ್ರೈವ್ ನಲ್ಲಿ ಇದೆ. ಆದರೆ ಪ್ರಿಂಟ್ ಔಟ್ ಬರುತ್ತಿಲ್ಲ ಎಂದು ನನಗೆ ಹೇಳಿದ್ದರು. ಈ ವಿಷಯವನ್ನು ನಾನು ಸಾಂದರ್ಭಿಕವಾಗಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಹೇಳಿದ್ದೆ ಅಷ್ಟೇ. ನಂತರ ಆ ವ್ಯಕ್ತಿ ನನಗೆ ಸಿಕ್ಕಿಲ್ಲ, ಆತನ ಪರಿಚಯವೂ ನನಗಿಲ್ಲ, ಇದನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದು ಬೇಡ ಹಾಗೂ ನನ್ನ ಹೆಸರನ್ನು ಅನಾವಶ್ಯಕವಾಗಿ ಎಳೆದು ತರುವುದು ಬೇಡ ಎಂದು ಶಾಸಕ ಮುರುಗೇಶ್ ನಿರಾಣಿ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

ಮಾಧ್ಯಮಗಳಲ್ಲಿ ನನ್ನ ಬಳಿ ಪೆನ್ ಡ್ರೈವ್ ಇದೆ ಎಂದು ನಿಟ್ಟಿನಲ್ಲಿ ವರದಿಗಳಿ ಬರುತ್ತಿವೆ. ನನ್ನ ಬಳಿ ಪೆನ್ ಡ್ರೈವ್ ಇದೆ ಎಂಬುದು ಸತ್ಯಕ್ಕೆ ದೂರ, ಅಂತಹ ವರದಿ ಪ್ರಕಟಿಸುವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ನನಗೆ ಸಚಿವ ಸ್ಥಾನ ಕೊಡುವುದು, ಬಿಡುವುದು ಪಕ್ಷದ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬಿಟ್ಟ ವಿಚಾರವಾಗಿದೆ. ಈ ವಿಚಾರವನ್ನು ಪೆನ್ ಡ್ರೈವ್ ವಿಷಯದ ಜೊತೆಗೆ ತಳುಕು ಹಾಕುವುದು ಬೇಡ ಎಂದು ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.