ಬೆಂಗಳೂರು: ಕಬ್ಬನ್ ಪಾರ್ಕ್ ಬೆಂಗಳೂರಿಗರ ಫೇವರೆಟ್ ಪ್ಲೇಸ್ ಎಂದರೆ ತಪ್ಪಾಗಲ್ಲ. ನಿತ್ಯ ಬೆಳಗಿನಜಾವ ವಾಕಿಂಗ್, ಜಾಗಿಂಗ್ನಿಂದ ಹಿಡಿದು ಮೋಜು ಮಸ್ತಿಯ ಜೊತೆಗೆ ಮನಸ್ಸಿನ ನೆಮ್ಮದಿಗೂ ನಗರದ ಜನತೆ ಕಬ್ಬನ್ ಪಾರ್ಕ್ಗೆ ತೆರಳುತ್ತಾರೆ.
ಹೌದು, ಅಲ್ಲಿ ಇರುವ ಹಚ್ಚ ಹಸಿರು- ಸ್ವಚ್ಛ ವಾತಾವರಣ ನೋಡಲು ಅದೆಷ್ಟೋ ಜನರು ಹೊರ ರಾಜ್ಯ ಮಾತ್ರವಲ್ಲದೇ ಹೊರ ದೇಶಗಳಿಂದಲೂ ನಿತ್ಯ ಇಲ್ಲಿಗೆ ಸಾವಿರಾರು ಜನರು ಆಗಮಿಸುತ್ತಾರೆ .
ಅಂದಹಾಗೇ ಸಾಕಷ್ಟು ಅಭಿವೃದ್ಧಿ ಕೆಲಸದಲ್ಲಿ ತೊಡಗಿರೋ ತೋಟಗಾರಿಕೆ ಇಲಾಖೆ ಪ್ರವಾಸಿಗರನ್ನು ಸೆಳೆಯಲು ಈಗ ಉದ್ಯಾನದ ಒಳಗೆ ಬಟರ್ ಫ್ಲೈ ಗಾರ್ಡನ್ ನಿರ್ಮಿಸಲು ಮುಂದಾಗಿದೆ. ಇದಕ್ಕಾಗಿ ಉದ್ಯಾನವನದಲ್ಲಿ ಎರಡು ಓಪನ್ ಪ್ಲೇಸ್ ಗುರುತಿಸಿದ್ದು, ಚಿಟ್ಟೆಯನ್ನು ಆಕರ್ಷಿಸಲು ಬೇಕಾದ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.
ಪರಿಸರ ವಾದಿ ಯಲ್ಲಪ್ಪ ರೆಡ್ಡಿ ನೇತೃತ್ವದಲ್ಲಿ ಯೋಜನೆ ಮಾಡಲಾಗಿದೆ. ಗಾರ್ಡನ್ಗೆ ₹ 1 ಲಕ್ಷ ವೆಚ್ಚ ತಗುಲಲಿದ್ದು, ಇನ್ನು ಒಂದು ತಿಂಗಳೊಳಗಾಗಿ ಗಾರ್ಡನ್ ನಿರ್ಮಾಣವಾಗಲಿದೆ. ಈ ಮೂಲಕ ಬರುವ ಪ್ರವಾಸಿಗರು ನಾನಾ ತರಹದ ಚಿಟ್ಟೆಗಳನ್ನು ನೋಡಬಹುದಾಗಿದೆ.