ಬೆಂಗಳೂರು: ರಾಜ್ಯದಲ್ಲಿ ಆಗಸ್ಟ್ ತಿಂಗಳಲ್ಲಿ ಕೊರೊನಾ ತೀವ್ರ ರೀತಿಯಲ್ಲಿ ಏರಿಕೆ ಆಗಲಿದೆ ಅಂತ ತಜ್ಞರು ಅಭಿಪ್ರಾಯ ಪಟ್ಟಿದ್ದರು. ಅದರಂತೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇಂದು ಒಂದೇ ದಿನ 8,818 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ.
ಸದ್ಯ ರಾಜ್ಯದಲ್ಲಿ 2,19,926 ಖಚಿತ ಪ್ರಕರಣಗಳಿವೆ. ಇಂದು 54,806 ಮಂದಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, ರಾಜ್ಯದಲ್ಲಿ ಈವರೆಗೆ 19,93,760 ಮಂದಿ ಪರೀಕ್ಷೆಗೆ ಒಳಗಾಗಿದ್ದಾರೆ.
ಇವತ್ತು ಕೂಡ 114 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಈ ಮೂಲಕ 3,831 ಮೃತಪಟ್ಟಿದ್ದು, ಶೇ. 1.74ರಷ್ಟು ಮರಣ ಪ್ರಮಾಣವಿದೆ. ಈವರೆಗೆ 1,33,128 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಶೇ.60.53 ರಷ್ಟು ಚೇತರಿಕೆ ಪ್ರಮಾಣ ದಾಖಲಾಗಿದೆ. ಇನ್ನು 82,958 ಸಕ್ರಿಯ ಪ್ರಕರಣಗಳು ಬಾಕಿ ಉಳಿದಿವೆ.
ಆಗಸ್ಟ್ನಲ್ಲಿ ದಾಖಲಾದ ಪ್ರಕರಣಗಳು:
- ಆಗಸ್ಟ್ 04-6,259
- ಆಗಸ್ಟ್ 06-6,805
- ಆಗಸ್ಡ್ 07-6,670
- ಆಗಸ್ಟ್ 08-7,178
- ಆಗಸ್ಡ್ 11-6,257
- ಆಗಸ್ಟ್ 12-7,883
- ಆಗಸ್ಟ್ 13-6,706
- ಆಗಸ್ಟ್ 14-7,908
- ಆಗಸ್ಟ್ 15-8,818