ETV Bharat / state

ನೀವು ಹೋಂ ಐಸೋಲೇಷನ್​ನಲ್ಲಿ ಇರಬೇಕಿದ್ರೆ, ಈ ಸೌಲಭ್ಯಗಳು ನಿಮ್ಮಲ್ಲಿ ಇರಲೇಬೇಕು..

ನೀವೇನಾದ್ರೂ ಹೋಮ್ ಐಸೋಲೇಷನ್ ಆಯ್ಕೆ ಮಾಡಿಕೊಳ್ಳುವ ಯೋಚನೆಯಲ್ಲಿದ್ದೀರಾ.. ಹಾಗಾದ್ರೆ ನೀವು ಕುಟುಂಬ ಕಲ್ಯಾಣ ಇಲಾಖೆಯು ಬಿಡುಗಡೆ ಮಾಡಿದ ಹೋಂ ಐಸೋಲೇಷನ್​ ಗೈಡ್​ಲೈನ್​ಗಳನ್ನು ಪಾಲನೆ ಮಾಡಲೇಬೇಕು. ಆ ಸೂಚನೆಗಳು ಇಂತಿವೆ..

Home isolation
ಹೋಂ ಐಸೋಲೇಷನ್
author img

By

Published : Jul 12, 2020, 5:13 PM IST

ಬೆಂಗಳೂರು: ಕೊರೊನಾ ಸೋಂಕು ಗಲ್ಲಿಗಲ್ಲಿಯಲ್ಲೂ ಹೊಕ್ಕು ಎಲ್ಲರಿಗೂ ಹರಡುತ್ತಿದೆ. ಇತ್ತ ದಿನೇದಿನೆ ಏರುತ್ತಿರುವ ಸೋಂಕಿತರ ಸಂಖ್ಯೆಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಫುಲ್ ಆಗಿರೋದು ಗೊತ್ತಿರುವ ವಿಷಯ.

‌ಹೀಗಾಗಿ ರೋಗ ಲಕ್ಷಣಗಳು ಇಲ್ಲದವರಿಗೆ ಹೋಂ ಐಸೋಲೇಷನ್​ಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ.‌ ಅಂದಹಾಗೇ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹೋಂ ಐಸೋಲೇಷನ್​ಗೆ ಹೊಸ ಗೈಡ್​ಲೈನ್ ರಿಲೀಸ್ ಮಾಡಿದೆ.

Home isolation guidelines
ಹೋಂ ಐಸೋಲೇಷನ್​ ಗೈಡ್​ಲೈನ್ಸ್

ನೀವೇನಾದ್ರೂ ಹೋಂ ಐಸೋಲೇಷನ್ ಆಯ್ಕೆ ಮಾಡಿಕೊಂಡ್ರೆ ನಿಮ್ಗೆ ಈ ಷರತ್ತುಗಳು ಕಡ್ಡಾಯವಾಗಿ ಇರಲಿವೆ. ಅವುಗಳು ಇಂತಿವೆ..

  • ಸೋಂಕು ತಗುಲಿದ ವ್ಯಕ್ತಿಗೆ ಸುಸಜ್ಜಿತ ಕೋಣೆ ಇರಬೇಕು.
  • ಗಾಳಿ ಬೆಳಕು ಬರುವ ಜಾಗವಾಗಿರಬೇಕು.
  • ಪ್ರತ್ಯೇಕ ಶೌಚಾಲಯ ಇರುವುದು ಕಡ್ಡಾಯ.
  • ಸೋಂಕಿತ ವ್ಯಕ್ತಿಯ ಬಳಿ ಹಿರಿಯರು, ಮಕ್ಕಳು, ಅನಾರೋಗ್ಯ ಸಮಸ್ಯೆ ಉಳ್ಳವರು ಹೋಗುವಂತಿಲ್ಲ.
  • ಸೋಂಕಿತರಿಂದ ಎಲ್ಲರೂ ಅಂತರ ಕಾಯ್ದುಕೊಳ್ಳಬೇಕು.‌
  • ಮನೆ ಮುಂದೆ ಕೋವಿಡ್ ಇರುವುದಾಗಿ ದೊಡ್ಡ ಪೋಸ್ಟರ್ ಹಾಕಲಾಗುತ್ತೆ.
  • 17 ದಿನಗಳ ಕಾಲ ಹೋಮ್ ಐಸೋಲೇಷನ್ ಸೀಲ್ ಹಾಕಲಾಗುತ್ತೆ..
  • ಐಸೋಲೇಷನ್ ಕ್ರಮ ಉಲ್ಲಂಘನೆ ಮಾಡಿದ್ರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತೆ‌‌.
  • ಹೋಂ ಐಸೋಲೋಷನ್​ಗೆ ಸರಿಯಾದ ಸ್ಥಳವಿಲ್ಲದೇ ಇದ್ದರೆ ಕೋವಿಡ್ ಕೇರ್ ಸೆಂಟರ್‌ಗೆ ಶಿಫ್ಟ್ ಮಾಡಲಾಗುತ್ತೆ.‌
  • ಟೆಲಿ ಮಾನಿಟರ್ ಮಾಡಲಾಗುತ್ತೆ.
  • ಸೋಂಕಿತ ಬಳಸಿದ ಮಾಸ್ಕ್, ಹ್ಯಾಂಡ್ ಗ್ಲೌಸ್ ಇತರೆ ವಸ್ತುಗಳನ್ನು 1 ಶೇ. ಸೋಡಿಯಂ ಹೈಪೋ ಕ್ಲೋರೈಡ್ ಮೂಲಕ 30 ನಿಮಿಷ ನೆನೆಯಲು ಪ್ರತ್ಯೇಕವಾಗಿಡಬೇಕು.

ಈ ಎಲ್ಲಾ ಷರತ್ತುಗಳು ಕಡ್ಡಾಯವಾಗಿ ಪಾಲಿಸಿ ಹೋಂ ಐಸೋಲೇಷನ್​ನಲ್ಲಿ ಇರಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.