ETV Bharat / state

ವಂಚನೆ ತಡೆಗೆ ಆಸ್ತಿಗಳ ಡಿಜಿಟಲ್​ ಖಾತೆ: ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್​

ಬಿಬಿಎಂಪಿಯ ಖಾತೆ ನೋಂದಣಿ, ವರ್ಗಾವಣೆ, ವಿಭಜನೆ, ಒಂದುಗೂಡಿಸುವಿಕೆ ಇನ್ಮುಂದೆ ಸಂಪೂರ್ಣವಾಗಿ ಡಿಜಿಟಲ್ ‌ಆಗಲಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

Manjunath-prasad
ಆಯುಕ್ತ ಮಂಜುನಾಥ್ ಪ್ರಸಾದ್
author img

By

Published : Nov 13, 2020, 4:53 PM IST

ಬೆಂಗಳೂರು: ಬಿಬಿಎಂಪಿಯ ಖಾತೆ ನೋಂದಣೆ, ವರ್ಗಾವಣೆ, ವಿಭಜನೆ, ಒಂದುಗೂಡಿಸುವಿಕೆ ಇನ್ಮುಂದೆ ಸಂಪೂರ್ಣವಾಗಿ ಡಿಜಿಟಲ್ ‌ಆಗಲಿದೆ. ಇದರಿಂದ ನಕಲಿ ದಾಖಲೆ, ಆಸ್ತಿಗೆ ಸಂಬಂಧಿಸಿದ ವಂಚನೆ ಪ್ರಕರಣಗಳು ನಿಲ್ಲಲಿವೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

ಬಿಬಿಎಂಪಿಯಲ್ಲಿ ಈವರೆಗೂ ಕೈಬರಹದ ಮೂಲಕ ಖಾತೆಗಳನ್ನು ನೋಂದಣಿ ಮಾಡಿಕೊಳ್ಳಲಾಗುತ್ತಿತ್ತು. ಇದರಿಂದಾಗಿ ಸಾಕಷ್ಟು ನಕಲಿ ದಾಖಲೆ ಸೃಷ್ಟಿ ಹಾಗೂ ಆಸ್ತಿ ಮಾಲೀಕರಿಗೆ ಮೋಸಗಳಾಗುತ್ತಿತ್ತು. ಇದನ್ನು ತಡೆಯಲು ಡಿಜಿಟಲ್ ಖಾತೆ ವಿತರಣೆಗೆ ಇಂದು ಚಾಲನೆ ನೀಡಲಾಯಿತು.

ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್

ಈ ಕುರಿತು ಮಾತನಾಡಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಪ್ರಾಯೋಗಿಕವಾಗಿ ನಗರದ ಶಾಂತಲಾನಗರ, ಶಾಂತಿನಗರ ಹಾಗೂ ನೀಲಸಂದ್ರದಲ್ಲಿ ಜಾರಿ ಮಾಡುತ್ತಿದ್ದು, ಎರಡು ವಾರಗಳಲ್ಲಿ 100 ವಾರ್ಡ್​ಗಳಲ್ಲಿ ಜಾರಿಗೆ ತರಲಾಗುವುದು. ಈ ವಾರ್ಡ್​ಗಳಲ್ಲಿ ಈಗಾಗಲೇ ಗಣಕೀಕೃತ ಆಸ್ತಿ ದಾಖಲೆಗಳು ಇರುವುದರಿಂದ ಡಿಜಿಟಲ್ ಖಾತೆಗಳನ್ನು ಬೇಗ ನೀಡಬಹುದು. ನಂತರ ಬೆಂಗಳೂರಿನ ಹೊರವಲಯಗಳಲ್ಲಿ ಮುಂದಿನ ಆರು ತಿಂಗಳೊಳಗೆ ಜಾರಿಗೆ ತರಲಾಗುವುದು ಎಂದರು.

ಇದು ಪಾಲಿಕೆಯ ಕಂದಾಯ ಇಲಾಖೆಗೆ ಸಂಬಂಧಿಸಿದ ಮೈಲಿಗಲ್ಲಾಗಿದ್ದು, ಪಾಲಿಕೆಯ ಮೂರು ವಲಯಗಳಲ್ಲಿ ಖಾತೆಗಳ ನಿರ್ವಹಣೆ, ನೋಂದಣಿಯಲ್ಲಿ ಸಂಪೂರ್ಣ ಬದಲಾವಣೆ ಆಗಲಿದೆ. ಈವರೆಗೆ ಖಾತೆ ನೋಂದಣಿಯಲ್ಲಿ ಹದಿನೆಂಟು ಅಂಶಗಳ ವಿವರಗಳು ಮಾತ್ರ ಇದ್ದು, ಇನ್ಮುಂದೆ 46 ಅಂಶಗಳ ವಿವರ ಇರಲಿದೆ. ಇದರಲ್ಲಿ ಆಸ್ತಿಯ ಫೋಟೋ, ಮಾಲೀಕನ ಭಾವಚಿತ್ರ, ಅಪಾರ್ಟ್​ಮೆಂಟ್​​​ ಅಥವಾ ಆಸ್ತಿಯ ಚೆಕ್ ಬಂದಿ, ಅಡವಿಟ್ಟಿರುವ ಮಾಹಿತಿ, ಪ್ರಾಪರ್ಟಿ ಟ್ಯಾಕ್ಸ್ ಮಾಹಿತಿ ಕೂಡ ಇರಲಿದ್ದು, ಆಸ್ತಿ ಖರೀದಿಸುವವರು ಇದನ್ನು ಪರಿಶೀಲಿಸಬಹುದು ಎಂದು ಮಾಹಿತಿ ನೀಡಿದರು.

ಡಿಜಿಟಲ್ ಸರ್ಟಿಫಿಕೇಟ್, ಡಿಜಿಟಲ್ ಸಹಿ ಇರುವುದರಿಂದ ಮೋಸಗಳನ್ನು ತಡೆಯಬಹುದು. ಜೊತೆಗೆ ಇದು ಆಧಾರ್ ಜೊತೆ ಲಿಂಕ್ ಆಗಲಿದ್ದು, ಮಾಲೀಕನ
ಡಿಜಿ ಲಾಕರ್​ಗೂ ಈ ದಾಖಲೆ ಸೇರಿಕೊಳ್ಳಲಿದೆ ಎಂದು ತಿಳಿಸಿದರು.

ಒಟ್ಟು 100 ವಾರ್ಡ್​ಗಳಲ್ಲಿ 7.5 ಲಕ್ಷ ಆಸ್ತಿಗಳಿದ್ದು, ಆರಂಭದ ಮೂರು ವಾರ್ಡ್​ಗಳಲ್ಲಿ 23,000 ಆಸ್ತಿಗಳಿವೆ. ಹೀಗಾಗಿ ಆಸ್ತಿ ಮಾಲೀಕರು ಆಸ್ತಿ ತೆರಿಗೆ ಕಟ್ಟಿದ ವಿವರ ಹಾಗೂ ಇತರ 46 ಅಂಶಗಳ ವಿವರದೊಂದಿಗೆ ಪಾಲಿಕೆಯ ಕಂದಾಯ ಇಲಾಖೆಯನ್ನು ಸಂಪರ್ಕಿಸಿ ಗಣಕೀಕರಣಗೊಳಿಸಬೇಕು. ನಂತರ ಗಣಕೀಕೃತ ಡಿಜಿಟಲ್ ಎ, ಬಿ ಖಾತೆ ವಿತರಿಸಲಾಗುವುದು ಎಂದು ವಿವರಿಸಿದರು.

ಉಪಯೋಗಗಳು
-ಇ-ಆಸ್ತಿ ತಂತ್ರಾಂಶಕ್ಕೆ ಸ್ವಯಂಚಾಲಿತವಾಗಿ ಖಾತೆ ವರ್ಗಾವಣೆ ಆಗುವುದರಿಂದ ಮಾಲೀಕರು ಮತ್ತೆ ಅರ್ಜಿ ಸಲ್ಲಿಸುವ ಅಗತ್ಯ ಇಲ್ಲ.
-ಡಿಜಿಟಲ್ ಸಹಿಯ ಖಾತೆ ಪಡೆಯುವುದರಿಂದ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಸ್ವಯಂಚಾಲಿತವಾಗಿ ಮಾಹಿತಿ ರವಾನೆ ಆಗಲಿದೆ.
-ಆಸ್ತಿ ಮಾಲೀಕತ್ವದ ಹಕ್ಕು ವರ್ಗಾವಣೆ ಪ್ರಕ್ರಿಯೆಯ ಮಾಹಿತಿ ಮಾರಾಟಗಾರರು, ಖರೀದಿದಾರರಿಗೆ ಎಸ್​​ಎಂಎಸ್, ಇ-ಮೇಲ್ ಮೂಲಕ ರವಾನೆ ಆಗಲಿದೆ.
-ಖರೀದಿದಾರರು ಮೋಸ ಹೋಗಲಾರರು.
-ಡಿಜಿಟಲ್ ಸಹಿಯ ಬಾರ್ ಕೋಡ್ ಇರುವುದರಿಂದ ನಕಲಿ ದಾಖಲೆ ಸೃಷ್ಟಿಸಿದರೆ ಸುಲಭವಾಗಿ ಗುರುತಿಸಬಹುದು.

-ಸಾರ್ವಜನಿಕರ ವೀಕ್ಷಣೆಗೆ ಇ-ಆಸ್ತಿ ಜಾಲತಾಣದಲ್ಲಿ ಅವಕಾಶ ಕಲ್ಪಿಸಲಾಗಿದೆ.
- ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆ ನಿರ್ಮಾಣ ತಡೆಗಟ್ಟಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.