ETV Bharat / state

ದೇವೇಗೌಡರನ್ನೇ ಮಣಿಸಿದ ಸಿದ್ದರಾಮಯ್ಯ ಡಿಕೆಶಿಯನ್ನು ಬಿಡುತ್ತಾರಾ? ಸಿದ್ದು ಅಧಿಕಾರ ಬಿಟ್ಟುಕೊಡಲ್ಲ, ಡಿಕೆಶಿ ಸಿಎಂ ಆಗಲ್ಲ: ಆರ್ ಅಶೋಕ್ - ಡಿಕೆಶಿ ಸಿಎಂ

ದೇವೇಗೌಡರನ್ನೇ ಮಣಿಸಿದ ಸಿದ್ದರಾಮಯ್ಯ ಈಗ ಡಿಕೆ ಶಿವಕುಮಾರ್ ಅವರನ್ನು ಮಣಿಸದೇ ಬಿಡಲ್ಲ. ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುವುದಾಗಿ ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಆರ್ ಅಶೋಕ್​ ವ್ಯಂಗ್ಯವಾಡಿದ್ದಾರೆ.

former-dcm-r-ashok-slams-siddaramaih-and-dk-shivakumar
ದೇವೇಗೌಡರನ್ನೇ ಮಣಿಸಿದ ಸಿದ್ದರಾಮಯ್ಯ ಡಿಕೆಶಿಯನ್ನು ಬಿಡುತ್ತಾರಾ? ಸಿದ್ದು ಅಧಿಕಾರ ಬಿಟ್ಟುಕೊಡಲ್ಲ, ಡಿಕೆಶಿ ಸಿಎಂ ಆಗಲ್ಲ:ಆರ್.ಅಶೋಕ್
author img

By

Published : Jun 19, 2023, 2:31 PM IST

ಬೆಂಗಳೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನದ ಕುರಿತು ಹೈಕಮಾಂಡ್ ಮಟ್ಟದಲ್ಲಿ ನಡೆದಿರುವ ಮಾತುಕತೆಯನ್ನು ಸಿದ್ದರಾಮಯ್ಯ ಧೈರ್ಯವಾಗಿ ಬಹಿರಂಗಪಡಿಸಲಿ. ಎಲ್ಲರನ್ನೂ ಆಡಿಸಿದ ದೇವೇಗೌಡರನ್ನೇ ಮಣಿಸಿದ ಸಿದ್ದರಾಮಯ್ಯ ಈಗ ಡಿಕೆ ಶಿವಕುಮಾರ್ ಅವರನ್ನು ಮಣಿಸದೇ ಬಿಡಲ್ಲ. ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುವುದಾಗಿ ತಿರುಕನ ಕನಸು ಕಾಣುತ್ತಿದ್ದಾರಷ್ಟೇ. ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನಕ್ಕಾಗಿ ಬೀದಿ ರಂಪಾಟ ಆಗೋದು ಪಕ್ಕಾ ಎಂದು ಮಾಜಿ ಡಿಸಿಎಂ ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ.

ಜಾಲಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದೇವಪ್ಪ ಸತ್ಯದ ಮಾತು ಆಡಿದ್ದಾರೆ. ಅದಕ್ಕೆ ಪೂರಕವಾಗಿ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ. ಕೃಷ್ಣ ಭೈರೇಗೌಡ ಕೂಡ ಇದೇ ಮಾತು ಹೇಳಿದ್ದಾರೆ. ಸಚಿವ ಜಮೀರ್ ಅಹಮದ್ ಕೂಡ ಈಗಾಗಲೇ ಡಂಗೂರ ಬಾರಿಸಿದ್ದಾರೆ. ಎಲ್ಲೆಲ್ಲಿ ಬೇರೆ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆಯೋ ಅಲ್ಲೂ ಇದೇ ರೀತಿಯ ಗೊಂದಲಗಳು ಆಗಿವೆ. ಡಿಸಿಎಂ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತೇನೆ ಎನ್ನುವ ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಒಬ್ಬ ಬಹಳ ಚಾಣಕ್ಯ ರಾಜಕಾರಣಿ. ದೇವೇಗೌಡರು ಅಂದರೆ ಎಲ್ಲರೂ ಹೆದರುತ್ತಾರೆ, ಆದರೆ ಸಿದ್ದರಾಮಯ್ಯ ಅವರನ್ನೂ ಬಿಟ್ಟಿಲ್ಲ. ದೇವೇಗೌಡ ಅವರನ್ನೇ ಸಿದ್ದರಾಮಯ್ಯ ಆಟ ಆಡಿಸಿದವರು, ಇನ್ನು ಶಿವಕುಮಾರ್ ಅವರನ್ನು ಬಿಡುತ್ತಾರಾ.?. ಅವರನ್ನು ಸಿದ್ದರಾಮಯ್ಯ ಮಣಿಸೋದು ಶತಃಸಿದ್ದ. ಇವರಿಬ್ಬರ ಕಿತ್ತಾಟ ಮುಂದೆ ಬೀದಿ ರಂಪಾಟ ಆಗುವುದು ಸತ್ಯ. ಸಿದ್ದರಾಮಯ್ಯಗೆ ನಾನು ಓಪನ್ ಚಾಲೆಂಜ್ ಹಾಕುತ್ತೇನೆ. ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡುವ ಬಗ್ಗೆ ಹೇಳಲಿ, ನಾನು ಎರಡೂವರೆ ವರ್ಷ, ಡಿಕೆ ಶಿವಕುಮಾರ್ ಎರಡೂವರೆ ವರ್ಷ ಎಂದು ಅವರು ಹೇಳಿಲ್ಲ. ಅಂದರೆ ಅವರೇ ಮುಖ್ಯಮಂತ್ರಿಯಾಗಿ ಐದು ವರ್ಷಕ್ಕೂ ಮುಂದುವರೆಯುತ್ತಾರೆ ಎಂದು ಅರ್ಥ. ನಿಮಗೆ ಧೈರ್ಯ ಇದ್ದರೆ ಹೇಳಿ, ನಾನೇ 5 ವರ್ಷ ಸಿಎಂ ಆಗಿರುತ್ತೇನೆ ಎಂದು. ಕಾಂಗ್ರೆಸ್‌ 5 ಗ್ಯಾರಂಟಿ ಇತ್ತಲ್ಲ, ಆರನೇ ಗ್ಯಾರಂಟಿ ಸಿದ್ದರಾಮಯ್ಯ ಸಿಎಂ ಆಗಿ 5 ವರ್ಷ ತಾನೇ ಇರುತ್ತಾರಾ ಅನ್ನುವುದನ್ನು ಹೇಳಲಿ ಎಂದು ಸವಾಲು ಹಾಕಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಓವರ್ ಟೇಕ್ ಮಾಡುತ್ತಿದ್ದಾರೆ. ಶಿವಕುಮಾರ್ ವರ್ತನೆಗೆ ಸಿದ್ದರಾಮಯ್ಯರ ಕೋಪ ಯಾವಾಗ ಸ್ಫೋಟ ಆಗುತ್ತದೆಯೋ ಗೊತ್ತಿಲ್ಲ. ಹನಿಮೂನ್ ಅವಧಿ ಮುಗಿದ ಕೂಡಲೇ ಸರ್ಕಾರದ ಒಡಕು ಹೊರಗೆ ಬರೋದು ಸತ್ಯ. ಸಿದ್ದರಾಮಯ್ಯ ಬಣದಿಂದ ಯಾವಾಗ ಸಿಎಂ ಬಗ್ಗೆ ಮಾತುಕತೆ ಮಾತಾಡೋಕೆ ಶುರು ಮಾಡಿದರೋ ಹಾಗೇ ಶಿವಕುಮಾರ್ ಬಣದವರು ಕೂಡ ಸಿಎಂ ಬಗ್ಗೆ ಮಾತನಾಡುತ್ತಿದ್ದಾರೆ. ಇವರಿಬ್ಬರ ಬಣದ ಕಚ್ಚಾಟದಿಂದ ಮುಂದೆ ಸರ್ಕಾರ ಏನು ಆಗುತ್ತೋ ಏನೋ ಗೊತ್ತಿಲ್ಲ. ಲೋಕಸಭೆ ಚುನಾವಣೆ ಬಳಿಕ ಈ ಸರ್ಕಾರದ ಪರಿಸ್ಥಿತಿ ಏನಾಗಿರುತ್ತದೆಯೋ? ಎಂದು ಟೀಕಿಸಿದರು.

ಸಂಸದ ಡಿಕೆ ಸುರೇಶ್ ರಾಜಕೀಯದಿಂದ ವೈರಾಗ್ಯದ ಹೇಳಿಕೆ‌ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅಶೋಕ್, ನನಗೆ ಡಿ.ಕೆ ಸುರೇಶ್ ಬಗ್ಗೆ ಸಿಂಪತಿ‌ ಇದೆ. ಈಗಾಗಲೇ ರಾಜಸ್ಥಾನದಲ್ಲಿನ ಕಾಂಗ್ರೆಸ್ ರಾಜಕೀಯ ನೋಡಿದ್ದಾರೆ. ಮುಂದೆ ನಮ್ಮ ಅಣ್ಣನಿಗೆ ಅದೇ ಪರಿಸ್ಥಿತಿ ಬರಬಹುದು. ನಮ್ಮಣ್ಣ ಸಿಎಂ ಆಗೋದಿಲ್ಲ ಅನ್ನೋ ಬೇಸರ ಇದೆ. ಇದೇ ಕಾರಣಕ್ಕಾಗಿ ಅವರು ಬೇಸರದ ಮಾತು ಆಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಕೇಂದ್ರ ಸರ್ಕಾರ ಪಡಿತರ ಅಕ್ಕಿ ಮಾರಾಟದ ವಿಚಾರದಲ್ಲಿ ತಾರತಮ್ಯ ಮಾಡುತ್ತಿದೆ ಎಂಬ ಕಾಂಗ್ರೆಸ್ ಆರೋಪದ ಕುರಿತು ಪ್ರತಿಕ್ರಿಯಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆ ರೀತಿ ಹೇಳಿಕೆ ನೀಡುವ ನೈತಿಕತೆ ಇಲ್ಲ. ನಿಜವಾಗಲೂ ಅವರಿಗೆ ಗ್ಯಾರಂಟಿಯಂತೆ 10 ಕೆಜಿ ಅಕ್ಕಿ ಕೊಡಬೇಕಾದ‌ ಕಾಳಜಿ ಇರಬೇಕಿತ್ತು. ಇಷ್ಟು ದೊಡ್ಡ ಯೋಜನೆಗೆ ತಯಾರಿಯೇ ಇಲ್ಲ. ಮೊದಲು ನೀವು ಕೊಡೋ ಅಕ್ಕಿ 5 ಕೆಜಿಯೋ ಅಥವಾ 10 ಕೆಜಿಯೋ ಅದನ್ನು ಸರಿಯಾಗಿ‌‌ ಹೇಳಿ. ಇದಕ್ಕೆ ನಿಮ್ಮಲ್ಲಿ‌ ಇರೋ ಡಿಕೆ ಶಿವಕುಮಾರ್ ಅವರನ್ನೇ‌ ಬ್ರಾಂಡ್‌ ಅಂಬಾಸಿಡರ್ ಆಗಿ ಅಕ್ಕಿ ಖರೀದಿಗೆ ಕಳುಹಿಸಿಕೊಡಲಿ ಎಂದರು. ಹೊರ ರಾಜ್ಯದಿಂದಲೇ ಅಕ್ಕಿ ಖರೀದಿಗೆ ಹೊರಟಿದ್ದಾರೆ. ದುಡ್ಡು ಹೊಡೆಯೋಕೆ ಅಂತಾನೆ ಹೊರ ರಾಜ್ಯದಿಂದ ಅಕ್ಕಿ‌ ಖರೀದಿಗೆ ಹೋಗುತ್ತಿದಾರೆ. ಹೊರ ರಾಜ್ಯಕ್ಕೆ ಹೋಗುವ ಬದಲು ಇಲ್ಲಿಯೇ ಟೆಂಡರ್ ಕರೆಯಲಿ ರಾಜ್ಯದಲ್ಲೇ‌‌‌ ಖರೀದಿ ನಡೆಯಲಿ ಎಂದು ಆಗ್ರಹಿಸಿದರು.

ರಾಜ್ಯದ ಮಹಿಳೆಯರಿಗೆ ಹೇಳುತ್ತೇನೆ. ಬಸ್‌ ಫ್ರೀ ಹೆಚ್ಚು ದಿನ ಇರೋದಿಲ್ಲ. ಬೇಗ ಬೇಗ ಎಲ್ಲೆಲ್ಲಿ ಟೂರ್ ಹೋಗಬೇಕು‌ ಅಂದುಕೊಂಡಿದ್ದೀರೋ ಹೋಗಿ ಆಮೇಲೆ ನಿಮಗೆ ಅವಕಾಶ ಸಿಗಲ್ಲ ಬೇಗ ಯೂಸ್‌ ಮಾಡ್ಕೊಳ್ಳಿ. ಇನ್ನೊಂದು ವರ್ಷದಲ್ಲಿ ರಾಜ್ಯ ದಿವಾಳಿಯಾಗುತ್ತದೆ. ಎಲ್ಲಾ ಯೋಜನೆಗಳನ್ನು ವಾಪಸ್ ಪಡೆಯುತ್ತಾರೆ. ಮುಂದೆ ಖಜಾನೆ ಖಾಲಿಯಾಗುತ್ತದೆ. ಈಗಲೇ ಎಲ್ಲಾ ಅರಕೆ ತೀರಿಸಿಕೊಳ್ಳಿ ಎಂದು ಹೇಳಿದರು.

ಇದನ್ನೂ ಓದಿ : ರಾಜ್ಯಕ್ಕೆ ಆಹಾರ ಧಾನ್ಯ ಪೂರೈಕೆ ಮಾಡದಿರುವುದು ರಾಜಕೀಯ ಪ್ರೇರಿತ: ಸಚಿವ ಎನ್ ಎಸ್ ಬೋಸರಾಜ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.