ETV Bharat / state

ತಾಯಿಯಿಂದ ಬೇರ್ಪಟ್ಟ ಮರಿ ಆನೆ... ಒಂದುಗೂಡಿಸಲು ಸಚಿವರ ನೇತೃತ್ವದಲ್ಲಿ ಪ್ರಯತ್ನ - aby elephant in the woods

ತಪ್ಪಿಸಿಕೊಂಡಿದ್ದ ಮರಿ ಆನೆಯನ್ನು ತಾಯಿ ಆನೆ ಮಡಿಲಿಗೆ ಸೇರಿಸಲು ಖುದ್ದು ಅರಣ್ಯ ಸಚಿವರೇ ಜವಾಬ್ದಾರಿ ತೆಗೆದುಕೊಂಡಿದ್ದಾರೆ.

Forest officials' attempt to leave a baby elephant in the woods
ಮರಿ ಆನೆ
author img

By

Published : Mar 8, 2020, 6:23 AM IST

ಆನೇಕಲ್: ಇತ್ತೀಚೆಗೆ ಆನೆ ದಂಡಿನಿಂದ ತಪ್ಪಿಸಿಕೊಂಡಿದ್ದ ಮರಿ ಆನೆಯನ್ನು ತಾಯಿ ಆನೆ ಮಡಿಲಿಗೆ ಸೇರಿಸಲು ಖುದ್ದು ಅರಣ್ಯ ಸಚಿವರೇ ಜವಾಬ್ದಾರಿ ತೆಗೆದುಕೊಂಡಿದ್ದಾರೆ.

ಮರಿ ಆನೆಯನ್ನು ತಾಯಿ ಆನೆಯ ಜೊತೆ ಸೇರಿಸಲು ಪ್ರಯತ್ನ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಅಧಿಕಾರಿಗಳು, ಮರಿ ಆನೆಯನ್ನು ತಾಯಿ ಆನೆ ಹಿಂಡಿಗೆ ಸೇರಿಸಲು ಹಲವು ಪ್ರಯತ್ನಗಳನ್ನು ಮುಂದುವರೆಸಿದ್ದಾರೆ. ಸದ್ಯ ಮರಿ ಆನೆಗೆ ಜೈವಿಕ ಉದ್ಯಾನ ಮೃಗಾಲಯದ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಚೇತರಿಕೆ ಕಾಣುತ್ತಿದ್ದು, ಏಳೆಂಟು ದಿನದ ಹೆಣ್ಣು ಆನೆಮರಿ ಇದಾಗಿದೆ. ಅರಣ್ಯ ಸಚಿವರು ಆನೆ ಮರಿಯನ್ನು ಕಾಡಿಗೆ ಬಿಡಲು ಅರಣ್ಯಾಧಿಕಾರಿಗಳೊಂದಿಗೆ ಮೊಕ್ಕಾಂ ಹೂಡಿದ್ದಾರೆ.

ಮರಿ ಆನೆ ಒಮ್ಮೆ ಬೇರ್ಪಟ್ಟರೆ ಮತ್ತೆ ತಾಯಿ ಹಿಂಡು ಅದನ್ನು ಸೇರಿಸಿಕೊಳ್ಳುವುದು ತುಂಬಾ ಕಡಿಮೆ. ಆನೆಗಳ ದಾಳಿಯೂ ಈ ಮರಿಯ ಮೇಲಾಗಬಹುದು. ಹೀಗಾಗಿ ಕಾಡಿಗೆ ಮರಿಯನ್ನು ಬಿಟ್ಟರೆ ಅದು ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ಅರಣ್ಯ ಅಧಿಕಾರಿಗಳು ವಿವರಿಸಿದರು.

ಕಾಡಿನಲ್ಲಿ ಮರಿಗೆ ಆನೆ ಕ್ರಾಲ್(ತೊಟ್ಟಿಲು) ನಿರ್ಮಿಸಿ ಇಡೀ ಅರಣ್ಯ ಇಲಾಖೆ ಆನೆಗಳ ಹಿಂಡು ಆಗಮಿಸುವುದನ್ನು ಕಾದು ಕುಳಿತಿತ್ತು. ಬಂದ ಆನೆಗಳು ಮರಿ ಆನೆಯನ್ನು ಒಪ್ಪಿಕೊಳ್ಳುವ ಲಕ್ಷಣಗಳು ಕಾಣಲಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.