ಬೆಂಗಳೂರು : ಈ ಬಾರಿಯ ಸ್ವಾತಂತ್ರ್ಯ ದಿನದ ಅಂಗವಾಗಿ ಲಾಲ್ ಬಾಗ್ನಲ್ಲಿ ನಡೆಯುವ ಫಲಪುಷ್ಟ ಪ್ರದರ್ಶನದಲ್ಲಿ ಮೈಸೂರಿನ ಜಯಚಾಮರಾಜೇಂದ್ರ ಒಡೆಯರ್ ಅವರ ಜೀವನ ಚರಿತ್ರೆ ಅನಾವರಣಗೊಳ್ಳಲಿದೆ.
ವರ್ಷದಲ್ಲಿ ಎರಡು ಬಾರಿ ನಡೆಯುವ ಫಲಪುಷ್ಪ ಪ್ರದರ್ಶನದಲ್ಲಿ ಮುಖ್ಯ ಆಕರ್ಷಣೆಯೇ ಹೂಗಳಿಂದ ಮಾಡಿದ ಕಲಾಕೃತಿಗಳು. ಈ ಬಾರಿ ಹೂಗಳಿಂದ ಒಡೆಯರ್ ಅವರ ಜೀವನ ಚರಿತ್ರೆ ತೆರೆಯಲಿದ್ದು ಪ್ರವಾಸಿಗರು ಹೂದೋಟ ನೋಡಲು ಕುತೂಹಲದಿಂದ ಕಾಯುತ್ತಿದ್ದಾರೆ.
ಮೊದಲು ಫಲಪುಷ್ಟ ಪ್ರದರ್ಶನಕ್ಕೆ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯ ಥೀಮ್ ಆಯ್ಕೆ ಮಾಡಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಜಯಚಾಮರಾಜೇಂದ್ರ ಒಡೆಯರ್ ಥೀಮ್ ನೊಂದಿಗೆ ಫಲಪುಷ್ಪ ಆಯೋಜಿಸಲು ತೀರ್ಮಾನ ಮಾಡಲಾಗಿದೆ.
ಒಡೆಯರ್ ಅವರ ಶತಮಾನೋತ್ಸವ ಅಂಗವಾಗಿ ಅವರ ಬಾಲ್ಯ, ಶಿಕ್ಷಣ ಮತ್ತು ಆಡಳಿತದಲ್ಲಿ ರಾಜ್ಯಕ್ಕೆ ಸಲ್ಲಿಸಿದ ಸೇವೆ ಕುರಿತು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ತೋಟಗಾರಿಕೆ ಇಲಾಖೆ ಈ ನಿರ್ಧಾರ ಮಾಡಿದೆ.
ಏನೇನಿರುತ್ತೆ ಫಲಪುಷ್ಟ ಪ್ರದರ್ಶನದಲ್ಲಿ
ಮೈಸೂರು ದಸರಾ ಮಹೋತ್ಸವದಲ್ಲಿ ನಡೆಯುವ ಜಂಬೂ ಸವಾರಿ, ಚಿನ್ನದ ಸಿಂಹಾಸನ, ಪುಷ್ಪಗಳ ಮೂಲಕ ಅನಾವರಣಗೊಳ್ಳಲಿದೆ. ಆಗಸ್ಟ್ 9 ರಿಂದ ಹತ್ತು ದಿನಗಳ ಕಾಲ ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ಪುಷ್ಪಲೋಕ ಅನಾವರಣಗೊಳ್ಳಲಿದೆ.