ETV Bharat / state

ನೆರೆ ಸಂತ್ರಸ್ತರಿಗೆ ಸಾರ್ವಜನಿಕರಿಂದ ಸಹಾಯ ಕೋರಿದ ಸಂಸದೆ ಶೋಭಾ ಕರಂದ್ಲಾಜೆ - flood in uttara kannada

ಸಂಸದೆ ಶೋಭಾ ಕರಂದ್ಲಾಜೆ ಉತ್ತರ ಕರ್ನಾಟಕ ನೆರೆ ಸಂತ್ರಸ್ತರು ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದು, ಅವರಿಗೆ ಬಟ್ಟೆ, ಬೆಡ್​ಶೀಟ್​ ಹೀಗೆ ತುರ್ತು ಅಗತ್ಯ ವಸ್ತುಗಳನ್ನು ಅಂಗಡಿಗಳಿಂದ ಸಂಗ್ರಹಿಸಿದರು.

ಸಂಸದೆ ಶೋಭಾ ಕರಂದ್ಲಾಜೆ
author img

By

Published : Aug 10, 2019, 4:54 PM IST

ಬೆಂಗಳೂರು: ಸರ್ಕಾರ ಊಟ, ಜಾಗದ ವ್ಯವಸ್ಥೆ ಮಾಡಿದೆ. ಆದರೆ, ನೆರೆ ಸಂತ್ರಸ್ತರು ತಮ್ಮೆಲ್ಲ ವಸ್ತುಗಳನ್ನು ಕಳೆದುಕೊಂಡಿದ್ದರಿಂದ ಬಟ್ಟೆ, ಕಂಬಳಿ, ಬೆಡ್​ಶೀಟ್​, ಪಾತ್ರೆಗಳು ಹಾಗೂ ಮಕ್ಕಳಿಗೆ ಅಗತ್ಯವಿರುವ ವಸ್ತುಗಳನ್ನು ಸಾರ್ವಜನಿಕರಿಂದ ಸಂಗ್ರಹಿಸಲಾಗುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ನೆರೆ ಸಂತ್ರಸ್ತರ ಅಗತ್ಯ ವಸ್ತುಗಳಿಗಾಗಿ ಸಾರ್ವಜನಿಕರ ಮೊರೆ ಹೋದ ಸಂಸದೆ ಶೋಭಾ ಕರಂದ್ಲಾಜೆ

ನಗರದ ಚಿಕ್ಕಪೇಟೆ, ಮಾಮೂಲ್​ ಪೇಟೆ ಹಾಗೂ ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿನ ಅಂಗಡಿಗಳಿಗೆ ಭೇಟಿ ನೀಡಿ, ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಸಹಾಯಹಸ್ತ ನೀಡುವಂತೆ ಮನವಿ ಮಾಡಿದರು.

ನಾಡಿನ ಜನರು ಈ ಹಿಂದೆ ಕೇರಳ, ಕೊಡಗಿನಲ್ಲಿ ಪ್ರವಾಹ ಸಂಭವಿಸಿದಾಗ ಇದೆ ರೀತಿ ಸಹಾಯ ಮಾಡಿದ್ದಾರೆ. ಇವುಗಳ ಜತೆಗೆ ಹಣ ನೀಡುವವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಚೆಕ್​ ಅಥವಾ ಡಿಡಿ ಮೂಲಕ ನೀಡಬಹುದು ಎಂದರು.

ಪ್ರವಾಹ ತಗ್ಗಿದ ನಂತರ ಅವರ ಮನೆ ನಿರ್ಮಿಸಿ ಕೊಡುವ ಹಾಗೂ ಸ್ವಚ್ಛಗೊಳಿಸಿ ಅವರಿಗೆ ಪುನಃ ಬದುಕು ಕಟ್ಟಿಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

Intro:Fund rise by ShobaBody:ಉತ್ತರ ಕರ್ನಾಟಕ ನೆರೆ ಹಿನ್ನೆಲೆ ಇಂದು ಪ್ರವಾಹ ಪೀಡಿತರಿಗೆ ನೆರವು ನೀಡಲು ಮುಂದಾದ ಸಂಸದೆ ಶೋಭಾ ಕರಂದ್ಲಾಜೆ.

ನಗರದ ಚಿಕ್ಕಪೇಟೆ, ಮಾಮುಲ್ ಪೇಟೆ, ಬಿವಿಕೆ ಅಯ್ಯಂಗಾರ್ ರಸ್ತೆಯ ಪ್ರತಿಯೊಂದು ಅಂಗಡಿ ಮುಂಗಟ್ಟುಗಳಿಗೆ ಭೇಟಿ ನೀಡಿ ಸಹಾಯ ಹಸ್ತ ನೀಡುವಂತೆ ಮನವಿ ಮಾಡಿದರು, ಇನ್ನೂ ಕೆಲ ಅಂಗಡಿಯವರು ಬಟ್ಟೆ ಬೆಡ್ ಶೀಟ್ ಮತ್ತು ಸಿಎಂ ಪರಿಹಾರ ನಿಧಿಗೆ ಧನ ಸಹಾಯ ಮಾಡಿದರು

ಶೋಭಾ ಕರಂದ್ಲಾಜೆ ಮಾತನಾಡಿ,
ಸಂತ್ರಸ್ತರಿಗೆ ಸರ್ಕಾರ ಅನ್ನ ಆಹಾರ ನೀಡ್ತಿದೆ.ಆದ್ರೆ ಬಟ್ಟೆ, ಮತ್ತಿತರ ವಸ್ತುಗಳು ಬೇಕಿದೆ.ಹೀಗಾಗಿ ಸಾರ್ವಜನಿಕರ ಮೊರೆ ಬಂದಿದ್ದೆವೆ,
ಎಂದರು,ಬಟ್ಟಬರೆಗಳ ಸಂಗ್ರಹಕ್ಕೆ ಮುಂದಾಗಿರುವ ಶೋಭಾ ಕರಂದ್ಲಾಜೆಗೆ ಸಂಸದ ಪಿ ಸಿ ಮೋಹನ್ ಸಾಥ್ ನೀಡಿದರುConclusion:Video sent from mojo plz add this
ETV Bharat Logo

Copyright © 2025 Ushodaya Enterprises Pvt. Ltd., All Rights Reserved.