ETV Bharat / state

ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ವಿರುದ್ಧ ಎಫ್​ಐಆರ್​ ದಾಖಲು - ಅಮಿತ್ ಮಾಳವೀಯಾ

ಅವಹೇಳನಕಾರಿ ಪೋಸ್ಟ್​ಗಳ ಹಿನ್ನೆಲೆ ಕಾಂಗ್ರೆಸ್​ನ ರಮೇಶ್ ಬಾಬು ಅವರು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ವಿರುದ್ಧ ದೂರು ದಾಖಲಿಸಿದ್ದಾರೆ.

Priyank Kharge
ಪ್ರಿಯಾಂಕ್​ ಖರ್ಗೆ
author img

By

Published : Jun 28, 2023, 11:59 AM IST

Updated : Jun 28, 2023, 2:43 PM IST

ಕಾನೂನಿನ ಸಲಹೆ ಆಧರಿಸಿಯೇ ಮಾಳವೀಯ ವಿರುದ್ಧ ದೂರು ದಾಖಲಿಸಿದ್ದೇವೆ, ಇದರಲ್ಲಿ ಯಾವುದೇ ದುರುದ್ದೇಶ ಇಲ್ಲ: ಪ್ರಿಯಾಂಕ್​ ಖರ್ಗೆ

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಅವಹೇಳಕಾರಿ ಪೋಸ್ಟ್ ಹಾಗೂ ವಿಡಿಯೊ ಬಿತ್ತರಿಸುವ ಮೂಲಕ ರಾಷ್ಟ್ರೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ತೇಜೋವಧೆ ಮಾಡಿರುವುದಾಗಿ ಆರೋಪಿಸಿ ಬಿಜೆಪಿ ರಾಷ್ಟ್ರೀಯ ಐಟಿ ಸೆಲ್ ಉಸ್ತುವಾರಿ ಅಮಿತ್ ಮಾಳವಿಯ ವಿರುದ್ಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ಕೆಪಿಸಿಸಿ ಸಂವಹನ ವಿಭಾಗದ ಸಹ ಅಧ್ಯಕ್ಷ ರಮೇಶ್ ಬಾಬು ನೀಡಿದ ದೂರಿನ‌ ಮೇರೆಗೆ ಅಮಿತ್ ಮಾಳವಿಯ ವಿರುದ್ಧ ಐಪಿಸಿ 153 ಬಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ, 120ಬಿ ಒಳಸಂಚು, 505 ಬೆದರಿಕೆಯಡಿ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಕೇಸ್​ ಕೊಡಲಾಗಿದೆ. ’’ರಾಹುಲ್ ಗಾಂಧಿ ವಿದೇಶಕ್ಕೆ ಹೋದಾಗಲೆಲ್ಲಾ ದೇಶದ ಬಗ್ಗೆ ಕಳಮಟ್ಟದಲ್ಲಿ ಮಾತನಾಡುತ್ತಾರೆ ಎಂಬ ವಿಚಾರವನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಅಲ್ಲದೇ ಆಂತಕವಾದಿಗಳಿಗಿಂತಲೂ ರಾಹುಲ್ ಗಾಂಧಿ ಅಪಾಯಕಾರಿ ಎಂದು ಅಣಕಿಲಾಗಿದೆ. ಇದು ವಿವಿಧ ವರ್ಗಗಳ ಕೋಮುಭಾವನೆಗೆ ಧಕ್ಕೆ ಹಾಗೂ ಸಮಾಜದ‌ಲ್ಲಿ ಅಶಾಂತಿ ಸೃಷ್ಟಿಯಾಗುವ ರೀತಿಯಲ್ಲಿ ಐಟಿ ಸೆಲ್‌ ಉಸ್ತುವಾರಿ ಅಮಿತ್ ಮಾಳವಿಯ ಪೋಸ್ಟ್ ಮಾಡಿರುವುದು ಖಂಡನಾರ್ಹ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು‘‘ ಎಂದು ರಮೇಶ್ ಬಾಬು ದೂರು ನೀಡಿದ ಮೇರೆಗೆ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, "ಬಿಜೆಪಿ ಕಾನೂನು ಸರಿಯಾಗಿ ಪಾಲನೆ ಆದಾಗಲೆಲ್ಲ ಅಳುತ್ತದೆ. ಅವರಿಗೆ ಈ ನೆಲದ ಕಾನೂನಿನ ಬಗ್ಗೆ ಮತ್ತು ಸಂವಿಧಾನದ ಬಗ್ಗೆ ನಂಬಿಕೆ ಇಲ್ಲ. ಮಾಳವೀಯ ಅವರ ಮೇಲೆ ದಾಖಲಾದ ಎಫ್​ಐಆರ್​​ನಲ್ಲಿ ಯಾವುದನ್ನು ಬದಲಾಯಿಸಲಾಗಿದೆ ಎಂಬುದನ್ನು ಬಿಜೆಪಿಯವರು ಹೇಳಲಿ. ಅವಹೇಳನಕಾರಿ ವಿಡಿಯೋವನ್ನು ಮಾಡಿದವರು ಯಾರು, ವಿಡಿಯೋವನ್ನು ಪ್ರಚಾರ ಮಾಡಿದವರು ಯಾರು, ಯಾರು ಈ ಸುಳ್ಳುಗಳನ್ನೆಲ್ಲ ಸಾಮಾಜಿಕ ಜಾಲತಾಣದಲ್ಲಿ ಹರಡಿದವರು. ಕರ್ನಾಟಕದ ಜನತೆಗೆ ನಾನು ಹೇಳುವುದೇನೆಂದರೆ ಈ ಸುಳ್ಳು ಸುದ್ದಿಗಳೆಲ್ಲ ತೊಳೆದು ಹೋಗಲಿದೆ. ನಾವು ಈ ಪ್ರಕರಣವನ್ನು ಕಾನೂನಾತ್ಮಕ ಸಲಹೆಯಿಂದಲೇ ದಾಖಲಿಸಿದ್ದೇವೆ. ನಾವು ಈ ಪ್ರಕರಣ ದಾಖಲು ಮಾಡಲು ವಾರಗಳನ್ನು ತೆಗೆದುಕೊಂಡು, ಸಲಹೆ ಪಡೆದ ನಂತರವೇ ಈ ಕೆಲಸ ಮಾಡಿದ್ದೇವೆ. ದಾಖಲಾದ ಸೆಕ್ಷನ್​ ಯಾವುದರಲ್ಲಿ ಉದ್ದೇಶ ಪೂರಿತವಾಗಿ ಕಾಣುತ್ತಿದೆ ಎಂಬುದನ್ನು ಜನರೇ ಹೇಳಲಿ" ಎಂದಿದ್ದಾರೆ.

ಈ ವೇಳೆ, ಬಿಜೆಪಿ ಅವಧಿಯ ವಿವಿಧ ಹಗರಣಗಳ ತನಿಖೆ ಬಗ್ಗೆಯೂ ಮಾತನಾಡಿದ ಅವರು, "ಬಿಜೆಪಿ ಅವಧಿಯ ಎಲ್ಲ ಹಗರಣಗಳನ್ನು ಒಂದೇ ತನಿಖಾ ತಂಡದಿಂದ ತನಿಖೆ ನಡೆಸಲು ಸಾಧ್ಯವಿಲ್ಲ. ವಿವಿಧ ತನಿಖಾ ತಂಡಗಳಿಂದ ತನಿಖೆ ನಡೆಸಲಾಗುವುದು. ಈ ನಿರ್ಧಾರ ತೆಗೆದುಕೊಳ್ಳುವ ಇಂದಿನ ಕ್ಯಾಬಿನೆಟ್ ಅವಶ್ಯಕತೆ ಇಲ್ಲ.‌ ಹೋದ ಕ್ಯಾಬಿನೆಟ್​ನಲ್ಲೇ ಚರ್ಚೆ ಆಗಿದೆ. ಯಾವ ತಂಡ ರಚನೆ ಮಾಡಬೇಕು ಅಂತ ಈಗಾಗಲೇ ಸೂಚನೆ ನೀಡಲಾಗಿದೆ. ಸಿಎಂ ಹಾಗೂ ಡಿಸಿಎಂ ಸೇರಿದಂತೆ ಇದಕ್ಕೆ ಸಂಬಂಧಿಸಿದ ಸಚಿವರು ಚರ್ಚೆ ಮಾಡಿದ್ದಾರೆ" ಎಂದು ತಿಳಿಸಿದರು.

"ಕಳೆದ ಬಿಜೆಪಿಯಲ್ಲಿ ಬಹಳ ವಿಭಿನ್ನವಾಗಿ ಸ್ಕ್ಯಾಮ್ ಮಾಡಿದ್ದಾರೆ. ತಂತ್ರಜ್ಞಾನ ಸಂಬಂಧಿತ ಸ್ಕ್ಯಾಮ್ ಆಗಿವೆ. ಎಕನಾಮಿಕ್ ಅಪರಾಧಗಳಾಗಿವೆ. ಬಿಟ್ ಕಾಯಿನ್ ಹಗರಣದಲ್ಲಿ ನಮಗೆ ಸೈಬರ್ ಎಕ್ಸ್ ಪರ್ಟ್ ಬೇಕಾಗುತ್ತದೆ. ತಂತ್ರಜ್ಞಾನ ತಿಳಿದ ಅಧಿಕಾರಿಗಳ ಅವಶ್ಯಕತೆ ಇದೆ. ಗಂಗಾ ಕಲ್ಯಾಣ ಹಗರಣದಲ್ಲಿ ಇನ್ ಕಮ್ ಟ್ಯಾಕ್ಸ್ ರಿಟರ್ನ್ ಮರ್ಜ್ ಮಾಡಿದ್ದಾರೆ. ಕೆಲವುಗಳಿಗೆ ಎಸ್ಐಟಿ ಇರಬಹುದು ಕೆಲವೊಂದು ಎಕ್ಸ್ ಪರ್ಟ್ ಇರಬಹುದು ತನಿಖೆಗೆ ಬೇಕಾಗುತ್ತದೆ. ಕೆಲವೊಂದಕ್ಕೆ ಅಪರ ಮುಖ್ಯ ಕಾರ್ಯದರ್ಶಿ ಮಟ್ಟದಲ್ಲಿ ತನಿಖಾ ತಂಡದ ಅವಶ್ಯಕತೆ ಇದೆ. ಸಿಎಂ ಇದರ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ. ಸಿಐಡಿ, ಸಿಬಿಐಗೆ ಅಂದರೆ ಕಳ್ಳನ ಕೈಗೆ ಕೀ ಕೊಟ್ಟಂತಾಗುತ್ತದೆ. ಹಾಗಾಗಿ ನೋಡಿಕೊಂಡೇ ತನಿಖೆ ಮಾಡಬೇಕಾಗುತ್ತದೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ: Manipur Violence: ಹಿಂಸಾಚಾರ ಪೀಡಿತ ಮಣಿಪುರಕ್ಕೆ ಜೂನ್ 29-30ರಂದು ರಾಹುಲ್ ಗಾಂಧಿ ಭೇಟಿ

Last Updated : Jun 28, 2023, 2:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.