ETV Bharat / state

ಆಂಧ್ರದಿಂದ ಖೋಟಾ ನೋಟು ತಂದು ಬೆಂಗಳೂರಿನಲ್ಲಿ ಚಲಾವಣೆ ಯತ್ನ; ಮಹಿಳೆ ಸೇರಿ ಇಬ್ಬರು ಸೆರೆ - ಈಟಿವಿ ಭಾರತ ಕನ್ನಡ

ಒಂದು ಪ್ರಕರಣದಲ್ಲಿ ಖೋಟಾ ನೋಟು ವ್ಯವಹಾರ ಜಾಲವನ್ನು ಪೊಲೀಸರು ಪತ್ತೆ ಹಚ್ಚಿದರೆ, ಇನ್ನೊಂದೆಡೆ ಬಾರ್‌ನಲ್ಲಿ ಕುಡಿದು ಗಲಾಟೆ ಎಬ್ಬಿಸಿದ ವ್ಯಕ್ತಿಗೆ ಸಿಬ್ಬಂದಿ ಥಳಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಈ ಎರಡು ಅಪರಾಧ ಸುದ್ದಿಗಳ ವಿವರ ಇಲ್ಲಿದೆ.

fake notes
ಖೋಟಾ ನೋಟು
author img

By

Published : Jan 23, 2023, 7:08 AM IST

ಬೆಂಗಳೂರು: ಆಂಧ್ರ ಪ್ರದೇಶದಿಂದ ನಕಲಿ ಕರೆನ್ಸಿ ನೋಟು ತಂದು ನಗರದಲ್ಲಿ ಚಲಾವಣೆಗೆ ಪ್ರಯತ್ನಿಸುತ್ತಿದ್ದಾಗ ಮಹಿಳೆ ಸೇರಿ ಇಬ್ಬರು ಸುಬ್ರಮಣ್ಯಪುರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಆಂಧ್ರದ ಕಡಪ ಜಿಲ್ಲೆಯ ಬಿ.ಚರಣ್ ಸಿಂಗ್ (47) ಮತ್ತು ರಜಪುತ್ರ ರಜನಿ (38) ಬಂಧಿತರು. ಇವರಿಂದ 500 ರೂಪಾಯಿ ಮುಖ ಬೆಲೆಯ 40 ಲಕ್ಷ ರೂ. ಮೌಲ್ಯದ ಖೋಟಾ ನೋಟು ಮತ್ತು ಕೃತ್ಯಕ್ಕೆ ಬಳಸಿದ್ದ ಕಾರನ್ನು ಜಪ್ತಿ ಮಾಡಲಾಗಿದೆ.

"ಆಂಧ್ರ ಮೂಲದ ಚರಣ್ ಮತ್ತು ರಜಿನಿ, ಅನಂತಪುರದಲ್ಲಿ ಪರಿಚಯಸ್ಥರಿಂದ ನಕಲಿ ನೋಟನ್ನು ಕಡಿಮೆ ಬೆಲೆಗೆ ತಂದು ಬೆಂಗಳೂರಿನಲ್ಲಿ ಚಲಾವಣೆಗೆ ಪ್ರಯತ್ನಿಸುತ್ತಿದ್ದರು. ಜ.19 ರಂದು ಮಧ್ಯಾಹ್ನ 1.30ರ ಹೊತ್ತಿಗೆ ಉತ್ತರಹಳ್ಳಿ-ಕೆಂಗೇರಿ ಮುಖ್ಯರಸ್ತೆಯ ಪೂರ್ಣ ಪ್ರಜ್ಞಾ ಲೇಔಟ್‌ನ ಸಾಧನಾ ಕಾಲೇಜು ಹತ್ತಿರ ಬೊಲೆರೊ ಜೀಪ್‌ನಲ್ಲಿ ಚರಣ್ ಮತ್ತು ರಜಿನಿ ನಕಲಿ ನೋಟು ತಂದಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಇದರ ಆಧಾರದಲ್ಲಿ ಮಫ್ತಿಯಲ್ಲಿದ್ದು ಕಾರ್ಯಾಚರಣೆ ಕೈಗೊಂಡು ಬೊಲೆರೋ ಜೀಪ್ ಬಳಿಗೆ ಹೋದಾಗ ಚರಣ್ ಹೊರಗೆ ನಿಂತು ಗಿರಾಕಿಗಳಿಗೆ ಕಾಯುತ್ತಿರುವುದು ಗೊತ್ತಾಗಿದೆ."

"ತಕ್ಷಣವೇ ಸ್ಥಳಕ್ಕೆ ಹೋಗಿ ಚರಣ್‌ನನ್ನು ವಶಕ್ಕೆ ಪಡೆದು ಕಾರು ಪರಿಶೀಲಿಲಿಸಿದಾಗ ರಜನಿ ಮತ್ತು 500 ರೂ. ಮುಖಬೆಲೆಯ 8 ಬಂಡಲ್ ನೋಟುಗಳು ದೊರೆತಿವೆ. ಆರೋಪಿಗಳನ್ನು ಠಾಣೆಗೆ ತಂದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ. ಇವರಿಗೆ ನಕಲಿ ನೋಟು ಕೊಟ್ಟವರು ಮತ್ತು ಇವರಿಂದ ಪಡೆಯಲು ಬಂದಿದ್ದವರ ಪತ್ತೆಗೂ ಬಲೆಬೀಸಲಾಗಿದೆ" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸುಬ್ರಮಣ್ಯಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ವಿವಾಹೇತರ ಸಂಬಂಧ : ಮಹಿಳೆಯೊಂದಿಗೆ ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದ ವ್ಯಕ್ತಿಯನ್ನು ಹೊಡೆದು‌ ಕೊಂದ ಮಹಿಳೆಯ ಸಂಬಂಧಿಕರು

ಬಾರ್​ನಲ್ಲಿ ಕುಡಿದು ಗಲಾಟೆ: ಮದ್ಯದ ಅಮಲಿನಲ್ಲಿ ಬಾರ್​​ನಲ್ಲಿ ಗಲಾಟೆ ಮಾಡಿದ ಯುವಕನಿಗೆ ಬಾರ್​ನ ಸಿಬ್ಬಂದಿ ಥಳಿಸಿರುವ ಘಟನೆ ಬಸವೇಶ್ವರನಗರದ ಮಂಜುನಾಥ ನಗರದಲ್ಲಿ ನಡೆದಿದೆ. ಬಸವೇಶ್ವರನಗರದ ನಿವಾಸಿ ಪೆರುಮಾಳ್ (26) ಹಲ್ಲೆಗೊಳಗಾದವ. ಬಸವೇಶ್ವರ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬೀರಪ್ಪ ಮತ್ತು ಗಣೇಶ್ ಸೇರಿ ಐವರನ್ನು ವಶಕ್ಕೆ ಪಡೆದಿದ್ದಾರೆ.

ಪೀಣ್ಯದ ಕಾರ್ಖಾನೆಯೊಂದರ ಸಿಬ್ಬಂದಿಯಾಗಿರುವ ಪೆರುಮಾಳ್ ಶನಿವಾರ ರಾತ್ರಿ ಮಂಜುನಾಥ ನಗರದ ತಿಮ್ಮಯ್ಯ ರಸ್ತೆಯಲ್ಲಿರುವ ವೆಂಕಟಗಿರಿ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೆ ಮದ್ಯ ಸೇವಿಸಲು ಹೋಗಿದ್ದ. ಬಾರ್‌ನಲ್ಲಿ ಕೂರಲು ಸ್ಥಳ ಇರಲಿಲ್ಲ. ಇದರಿಂದ ಕೋಪಗೊಂಡ ಪೆರುಮಾಳ್ ಬಾರ್ ಸಪ್ಲೆಯರ್‌ಗಳು ಸರಿಯಾಗಿ ಸ್ಪಂದಿಸಲಿಲ್ಲ ಎಂದು ಕೂಗಾಡಿ ಗಲಾಟೆ ನಡೆಸಿದ್ದಾನೆ. ನಂತರ ಆತನಿಗೆ ಮದ್ಯ ಸೇವಿಸಲು ಸ್ಥಳ ನೀಡಲಾಗಿದೆ. ತಡರಾತ್ರಿ 12.30 ರವರೆಗೂ ಮದ್ಯ ಸೇವಿಸಿದ ಪೆರುಮಾಳ್​ ಹೊರಬಂದ ಕೂಡಲೇ ಬಾರ್‌ನ 5 ಮಂದಿ ಸಿಬ್ಬಂದಿ ದೊಣ್ಣೆಯಿಂದ ಆತನ ಮೇಲೆ ಹಲ್ಲೆ ನಡೆಸಿದ್ದಾರೆ.

ಗಾಯಗೊಂಡ ಪೆರುಮಾಳ್ ತನ್ನ ಸ್ನೇಹಿತನಿಗೆ ಕರೆ ಮಾಡಿ ವಿಷಯ ತಿಳಿಸಿ, ಆತನನ್ನು ಸ್ಥಳಕ್ಕೆ ಕರೆಸಿಕೊಂಡು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾನೆ. ನಂತರ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಐವರನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಸಿನಿಮೀಯ ಶೈಲಿಯಲ್ಲಿ ಹತ್ಯೆ.. ಹಾಡಹಗಲೇ ರಸ್ತೆ ಮಧ್ಯೆ ವ್ಯಕ್ತಿ ಕೊಚ್ಚಿ ಕೊಂದ ಕಿರಾತಕರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.