ETV Bharat / state

ಜಿಮ್ಸ್‌ನ 24/7 ಟೆಲಿ ಐಸಿಯುಗೆ ಚಾಲನೆ ನೀಡಿದ ಡಿಸಿಎಂ ಅಶ್ವತ್ಥ್‌ ನಾರಾಯಣ - ಗುಲ್ಬರ್ಗ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್

ರಾಜ್ಯದಲ್ಲಿ ಮೊದಲ ಟೆಲಿ ಐಸಿಯು ಸೌಲಭ್ಯ ಪಡೆದದ್ದು ರಾಮನಗರದ ಜಿಲ್ಲಾ ಆಸ್ಪತ್ರೆ. ಜಿಮ್ಸ್‌ ಈ ಸೇವೆ ಪಡೆಯುತ್ತಿರುವ ರಾಜ್ಯದ 2ನೇ ಆಸ್ಪತ್ರೆಯಾಗಿದೆ.

DCM Ashwaththanarayana
ಡಿಸಿಎಂ ಅಶ್ವತ್ಥನಾರಾಯಣ
author img

By

Published : Jun 15, 2020, 8:12 PM IST

ಬೆಂಗಳೂರು : ಗುಲ್ಬರ್ಗ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌(ಜಿಮ್ಸ್‌)ನಲ್ಲಿ ಕರ್ನಾಟಕದ 2ನೇ 24/7 ಟೆಲಿ ಐಸಿಯು ಸೇವೆಗೆ ಡಿಸಿಎಂ ಅಶ್ವತ್ಥ್‌ ನಾರಾಯಣ ಅವರು ವಿಕಾಸಸೌಧದ ತಮ್ಮ ಕಚೇರಿಯಿಂದಲೇ ಆನ್‌ಲೈನ್‌ ಮೂಲಕ ಇಂದು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಎಸಿಟಿ (ಆ್ಯಕ್ಷನ್‌ ಕೋವಿಡ್‌-19 ಟೀಮ್‌) ಗ್ರಾಂಟ್ಸ್‌ ನೆರವಿನೊಂದಿಗೆ ಕರ್ನಾಟಕ ಸರ್ಕಾರ ಜಿಮ್ಸ್‌ನಲ್ಲಿ ಕರ್ನಾಟಕದ 2ನೇ 24/7 ಟೆಲಿ ಐಸಿಯು ಸೇವೆ ಆರಂಭಿಸಿದೆ. ರಾಜ್ಯಾದ್ಯಂತ ಆಸ್ಪತ್ರೆಗಳಲ್ಲಿ ಕ್ಲೌಡ್‌ಫಿಸಿಷಿಯನ್‌ನ ಸೇವೆ ಬಳಸಿಕೊಳ್ಳುವುದರಿಂದ ಗರಿಷ್ಠ ಸಂಖ್ಯೆಯ ರೋಗಿಗಳಿಗೆ ಐಸಿಯು ಚಿಕಿತ್ಸೆ ಸೌಲಭ್ಯ ದೊರೆಯಲು ಸಾಧ್ಯ ಎಂದರು.

DCM Ashwaththanarayana
ಡಿಸಿಎಂ ಅಶ್ವತ್ಥ್‌ ನಾರಾಯಣ

ರಾಜ್ಯದಲ್ಲಿ ಮೊದಲ ಟೆಲಿ ಐಸಿಯು ಸೌಲಭ್ಯ ಪಡೆದದ್ದು ರಾಮನಗರದ ಜಿಲ್ಲಾ ಆಸ್ಪತ್ರೆ. ಜಿಮ್ಸ್‌ ಈ ಸೇವೆ ಪಡೆಯುತ್ತಿರುವ ರಾಜ್ಯದ 2ನೇ ಆಸ್ಪತ್ರೆಯಾಗಿದೆ. ಜಿಮ್ಸ್‌ನ 70 ಹಾಸಿಗೆಗಳ ಪೈಕಿ 26 ಹಾಸಿಗೆಗಳನ್ನು ವಿಶೇಷ ತರಬೇತಿ ಪಡೆದ ತೀವ್ರ ನಿಗಾ ಘಟಕದ ತಜ್ಞರು ಮತ್ತು ದಾದಿಯರನ್ನೊಳಗೊಂಡ 10 ಜನರ ತಂಡ 24/7 ನಿಗಾವಹಿಸಲಿದೆ. ಆರೋಗ್ಯ-ತಂತ್ರಜ್ಞಾನ ವೇದಿಕೆ ಮತ್ತು ಆಸ್ಪತ್ರೆಗಳ ನಡುವೆ ಸಮನ್ವಯತೆ ಸಾಧಿಸಿ ಗುಣಮಟ್ಟದ ಸೇವೆ ಒದಗಿಸಲು ಡಾ.ತ್ರಿಲೋಕ್ ಚಂದ್ರ ನೇತೃತ್ವದ ತಂಡ ಬದ್ಧವಾಗಿದೆ ಎಂದರು.

ಟೆಲಿ ಐಸಿಯು ನಿರ್ವಹಣೆ ತೀವ್ರ ನಿಗಾ ಘಟಕದ ಇಎಂಆರ್, ಆಡಿಯೊ-ದೃಶ್ಯ ಮತ್ತು ಎಚ್ಚರಿಕೆ ವ್ಯವಸ್ಥೆಗಳನ್ನು ಬಳಸಿ ಗಂಭೀರ ಸ್ಥಿತಿಯಲ್ಲಿರುವ ಕೋವಿಡ್‌-19 ರೋಗಿಗಳ ಬಗ್ಗೆ ನಿಗಾವಹಿಸುವ ಕ್ಲೌಡ್‌ಫಿಸಿಷಿಯನ್ ಚಿಕಿತ್ಸೆಗೆ ಸೂಕ್ತ ಮಾರ್ಗದರ್ಶನ ನೀಡುವರು. ಸಿಸಿಟಿವಿ, ಇಂಟರ್ನೆಟ್‌ ಸಂಪರ್ಕಿತ ಸೆನ್ಸಾರ್‌ಗಳ ಮೂಲಕ ರೋಗಿಯ ಸ್ಥಿತಿಗತಿಯ ಬಗ್ಗೆ ರಿಯಲ್‌ ಟೈಮ್‌ ಮಾಹಿತಿ ಪಡೆಯುವ ತೀವ್ರ ನಿಗಾ ಘಟಕದ ತಜ್ಞರು ಹಾಗೂ ದಾದಿಯರು, ಈ ಸಂಬಂಧ ಆಸ್ಪತ್ರೆಯ ವೈದ್ಯ ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ನೀಡುವರು. ಕೊರೊನಾ ಸೋಂಕಿತರ ಸಾವಿನ ಸಂಖ್ಯೆ ತಗ್ಗಿಸಲು ಈ ವಿಶಿಷ್ಟ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಅಗತ್ಯ ಇರುವ ಕಡೆಗಳಲ್ಲಿ ಟೆಲಿ ಐಸಿಯು ಸೇವೆ ಒದಗಿಸಲು ಎಸಿಟಿ ಬದ್ಧ ಎಂದರು.

DCM Ashwaththanarayana
ಡಿಸಿಎಂ ಅಶ್ವತ್ಥನಾರಾಯಣ

ಏನಿದು ಎಸಿಟಿ ಗ್ರಾಂಟ್ಸ್ : ಕೊರೊನಾ ವಿರುದ್ಧದ ಹೋರಾಟದಲ್ಲಿ ಪ್ರಬಲ ಪರಿಣಾಮ ಬೀರಬಲ್ಲ ವಿಷಯಗಳ ಬಗ್ಗೆ ವಿಶಿಷ್ಟ ಮಾಹಿತಿ ಒದಗಿಸುವ ಜೊತಗೆ ಅಗತ್ಯ ಸೌಕರ್ಯ ಕಲ್ಪಿಸಲು ನೆರವಾಗುವ ಸ್ಟಾರ್ಟ್‌ಅಪ್‌ ಸಮೂಹದ 100 ಕೋಟಿ ಅನುದಾನವೇ ಎಸಿಟಿ (ಆ್ಯಕ್ಷನ್‌ ಕೋವಿಡ್‌-19 ಟೀಮ್‌) ಗ್ರಾಂಟ್ಸ್‌.

ಕೊರೊನಾ ಹರಡದಂತೆ ಎಚ್ಚರವಹಿಸುವ, ಸೋಂಕು ಪತ್ತೆ ಪರೀಕ್ಷೆ ನಡೆಸುವ, ಆರೋಗ್ಯ ಕಾರ್ಯಕರ್ತರು ಮತ್ತು ಆಸ್ಪತ್ರೆಗಳಿಗೆ ಅಗತ್ಯ ಬೆಂಬಲ ಒದಗಿಸಿ, ಗಂಭೀರ ಸ್ಥಿತಿಯ ರೋಗಿಗಳನ್ನ ನಿರ್ವಹಿಸಿ ಮಾನಸಿಕ ಸ್ಥೈರ್ಯ ನೀಡುವ ತಂಡಗಳು ಮತ್ತು ಸ್ಟಾರ್ಟ್‌ಅಪ್‌ಗಳನ್ನು ಎಸಿಟಿ ಬೆಂಬಲಿಸುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.