ಬೆಂಗಳೂರು : ಹೆಲ್ಮೆಟ್ ಹಾಕಲ್ಲ, ಪ್ರಾಣದ ಭಯವಿಲ್ಲ, ಡೇಂಜರಸ್ ವ್ಹೀಲಿಂಗ್ ಮಾಡೋದೇ ಕಾಯಕ ಎನ್ನುವಂತಿದೆ ಈ ಕಾಲೇಜು ಹುಡುಗರ ಕಥೆ.
ಇವರ ಅಕ್ಕಪಕ್ಕ ಹೋದವರು ಹೊಗೆ ಹಾಕಿಸಿಕೊಳ್ಳೋದು ಪಕ್ಕ ಎನ್ನುವಂತೆ ವ್ಹೀಲಿಂಗ್ ಮಾಡ್ತಾರೆ ಇವರು. ಕಾಲೇಜ್ ವಿದ್ಯಾರ್ಥಿಗಳ ಕ್ರೇಜ್ ಇತರರಿಗೆ ತೊಂದರೆ ಉಂಟು ಮಾಡುತ್ತಿದೆ. ಇದನ್ನ ಮನಗಂಡು ವೆಸ್ಟ್ ಆಫ್ ಕಾರ್ಡ್ ರೋಡ್‌ನಲ್ಲೇ ವ್ಹೀಲಿಂಗ್ ಮಾಡೋ ಭೂಪರನ್ನು ರಾಜಾಜಿನಗರ ಸಂಚಾರಿ ಪೊಲೀಸರು ಬಂಧಿಸಿದ್ದಾರೆ.
ಶಿವನಹಳ್ಳಿ ನಿವಾಸಿ ಮನೋಜ್, ಕಾಮಾಕ್ಷಿಪಾಳ್ಯ ನಿವಾಸಿ ನಂದಕುಮಾರ್ ಬಂಧಿತರಾಗಿದ್ದಾರೆ. ಆರೋಪಿಗಳ ಮೊಬೈಲ್ನಲ್ಲಿ ವ್ಹೀಲಿಂಗ್ ಮಾಡೋ ವಿಡಿಯೋಗಳಿದ್ದವು. ವ್ಹೀಲಿಂಗ್ ಕ್ರೇಜ್‌ನಲ್ಲಿ ಸ್ವಲ್ಪ ಯಾಮಾರಿದರೂ ಪ್ರಾಣಕ್ಕೆ ಕುತ್ತು ಬರುತಿತ್ತು. ಈಗ ವ್ಹೀಲಿಂಗ್ ಮಾಡೋ ಪುಂಡರಿಗೆ ಕಠಿಣ ಶಿಕ್ಷೆ ನೀಡಲು ಪೊಲೀಸರು ಮುಂದಾಗಿದ್ದಾರೆ.
ಸಿಆರ್‌ಪಿಸಿ 107 ಅಡಿ ಶ್ಯೂರಿಟಿ ಬಾಂಡ್ ಪಡೆಯಲಿರುವ ಪೊಲೀಸರು, ಆರೋಪಿಗಳು ಮತ್ತೊಮ್ಮೆ ವ್ಹೀಲಿಂಗ್ ಮಾಡಿದ್ರೆ ಶ್ಯೂರಿಟಿ ಹಣ ಮುಟ್ಟುಗೋಲು ಹಾಕಿಕೊಳ್ಳಲು ಕ್ರಮ ಕೈಗೊಂಡಿದ್ದಾರೆ.