ETV Bharat / state

ವಹಿವಾಟು ಪಾಲುದಾರರಿಂದ ಕೋಟ್ಯಂತರ ರೂಪಾಯಿ ವಂಚನೆ - ಕೋಟ್ಯಂತರ ರೂಪಾಯಿ ವಂಚನೆ

ಚೆಕ್ ಮೌಲ್ಯ ಮಾರ್ಪಾಡುಗೊಳಿಸಿ ಉದ್ಯಮಿಯೊಬ್ಬರಿಗೆ ಅವರ ಪಾಲುದಾರರೇ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿರುವ ಪ್ರಕರಣ ನಗರದ ವೈಟ್ ಫೀಲ್ಡ್​​ನಲ್ಲಿ ಬೆಳಕಿಗೆ ಬಂದಿದೆ.

Crores of rupees fraud by business partners
ಕೋಟ್ಯಂತರ ರೂಪಾಯಿ ವಂಚನೆ
author img

By

Published : Jul 31, 2020, 10:34 PM IST

ಬೆಂಗಳೂರು: ಚೆಕ್ ಮೌಲ್ಯ ಮಾರ್ಪಾಡುಗೊಳಿಸಿ ಉದ್ಯಮಿಯೊಬ್ಬರಿಗೆ ಅವರ ಪಾಲುದಾರರೇ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿರುವ ಪ್ರಕರಣ ನಗರದ ವೈಟ್ ಫೀಲ್ಡ್​​ನಲ್ಲಿ ಬೆಳಕಿಗೆ ಬಂದಿದೆ.

ಬೆಂಗಳೂರಿನ ರಾಜಶೇಖರ ರೆಡ್ಡಿ ಎಂಬ ಉದ್ಯಮಿಗೆ ಅವರ ಬಿಸ್ನೆಸ್‌ ಪಾರ್ಟ್​​ನರ್ ಭಾಸ್ಕರ ರೆಡ್ಡಿ, ವೆಂಕಟರಮಣ ರೆಡ್ಡಿ ಹಾಗೂ ಸುದರ್ಶನ ಗಾಲಿ ಎಂಬುವವರು 6 ಕೋಟಿ 30 ಲಕ್ಷ ರೂಪಾಯಿ ವಂಚಿಸಿದ್ದಾರೆ.

ಇವರೆಲ್ಲರೂ ಸೇರಿಕೊಂಡು ರಾಜಶೇಖರ ರೆಡ್ಡಿ ಜತೆ ಖಾಸಗಿ ಕಂಪನಿಯ ಸಹಭಾಗಿತ್ವ ಹೊಂದಿದ್ದ ಆರೋಪಿಗಳು. ರಾಜಶೇಖರ ರೆಡ್ಡಿ ನೀಡಿದ್ದ 8 ಲಕ್ಷದ 7 ಚೆಕ್​ಗಳನ್ನ 80 ಲಕ್ಷಕ್ಕೆ ಮತ್ತು 7 ಲಕ್ಷದ ಒಂದು ಚೆಕ್‌ ಅನ್ನು 70 ಲಕ್ಷವೆಂದು ಬದಲಿಸಿ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ.

ಒಂದು ವರ್ಷದ ಹಿಂದೆ ನಡೆದ ಈ ಮೋಸ ಆಡಿಟ್ ವೇಳೆ ವಿಚಾರ ಬಯಲಿಗೆ ಬಂದಿದೆ. ಈ ವಿಚಾರ ತಿಳಿಯತ್ತಿದ್ದಂತೆ 1 ಕೋಟಿ 60 ಸಾವಿರ ರೂ.ಗಳನ್ನು ಆರೋಪಿಗಳು ವಾಪಸ್‌ ಮಾಡಿದ್ದಾರೆ. ಆದರೆ ಉಳಿದ ಹಣ ವಾಪಸ್ ಮಾಡದೆ ಸತಾಯಿಸುತ್ತಿದ್ದಾರೆ. ಇದರಿಂದ ರೋಸತ್ತು ಹೋಗಿರುವ ರಾಜಶೇಖರ್‌ ರೆಡ್ಡಿ ವೈಟ್ ಫೀಲ್ಡ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.