ಬೆಂಗಳೂರು: ಬಂಧಿಸಿದ ಆರೋಪಿಗೆ ಕೊರೊನಾ ಸೋಂಕು ಅಂಟಿದ್ದು, ಆತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಬನಶಂಕರಿ ಪೊಲೀಸ್ ಠಾಣೆಯ 20ಕ್ಕೂ ಹೆಚ್ಚು ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
ಭದ್ರುಲ್ ನಸ್ಕರ್ ಎಂಬ ಆರೋಪಿಯನ್ನು ಬಂಧಿಸಿದ ಬಳಿಕ ಕೊರೊನಾ ಪರೀಕ್ಷೆಗೆ ಒಳಪಡಿಸಲಾಯಿತು. ಇದೀಗ ವರದಿ ಬಂದಿದ್ದು, ಅದರಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಆರೋಪಿಯನ್ನು ಬಂಧಿಸಿದ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್, ಕಾನ್ಸ್‌ಟೇಬಲ್ ಸೋಂಕು ತಗಲುವ ಆತಂಕದಲ್ಲಿದ್ದಾರೆ. ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ.
ಕಾಮಾಕ್ಷಿಪಾಳ್ಯ ಠಾಣೆ ಎಎಸ್ಐ ಪರದಾಟ
ಸೋಂಕು ತಗುಲಿದ್ದ ಕಾಮಾಕ್ಷಿಪಾಳ್ಯ ಠಾಣೆ ಇನ್ಸ್ಪೆಕ್ಟರ್ ಸಂಪರ್ಕದಲ್ಲಿದ್ದ ಎಎಸ್ಐಗೆ ಕೊರೊನಾ ದೃಢವಾಗಿದೆ. ಠಾಣೆ ಮುಂದೆಯೇ ಹೊಯ್ಸಳದಲ್ಲಿ ಕುಳಿತು ಆ್ಯಂಬುಲೆನ್ಸ್ಗಾಗಿ ಕಾಯುತ್ತಿದ್ದು, ಆ್ಯಂಬುಲೆನ್ಸ್ ಇಲ್ಲದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ.
![Kamakshipalya Station](https://etvbharatimages.akamaized.net/etvbharat/prod-images/kn-bng-10-positve-corona-7204498_08072020145211_0807f_1594200131_478.jpg)
ಕೋವಿಡ್ ಭೀತಿಯಲ್ಲೇ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಸೋಂಕು ವಿಪರೀತವಾಗಿ ಹರಡುತ್ತಿದೆ. ಅಲ್ಲದೆ ಬಂಧನಕ್ಕೆ ಒಳಗಾಗುತ್ತಿರುವ ಆರೋಪಿಗಳಲ್ಲೂ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಮತ್ತಷ್ಟು ಆತಂಕ್ಕೆ ಕಾರಣವಾಗಿದೆ.