ETV Bharat / state

ಬೆಂಗಳೂರು, ಬೆಳಗಾವಿಯಲ್ಲಿ ಡ್ರೈ ರನ್ ವಿಳಂಬ.. ಚೆನ್ನೈನಲ್ಲಿ ವ್ಯಾಕ್ಸಿನ್​ ಡ್ರೈ ರನ್ ಪರಿಶೀಲಿಸಿದ ಕೇಂದ್ರ ಆರೋಗ್ಯ ಸಚಿವ - Union Health Minister Dr Harsh Vardhan review the dry run

ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ ವರ್ಧನ್ ಅವರು ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಗೆ ಭೇಟಿ ನೀಡಿ ವ್ಯಾಕ್ಸಿನ್​ ಡ್ರೈ ರನ್​ ಪರಿಶೀಲಿಸಿದರು.

Corona vaccine dry run
ಡ್ರೈ ರನ್
author img

By

Published : Jan 8, 2021, 10:16 AM IST

Updated : Jan 8, 2021, 12:13 PM IST

ಬೆಂಗಳೂರು/ಬೆಳಗಾವಿ/ಚೆನ್ನೈ: ಕೋವಿಡ್ ವ್ಯಾಕ್ಸಿನೇಷನ್ ಸುಸೂತ್ರವಾಗಿ ನಡೆಯಬೇಕೆಂಬ ಕಾರಣವಾಗಿ ಡ್ರೈ ರನ್ ಮಾಡಲಾಗುತ್ತಿದೆ. ಆದರೆ ಡ್ರೈ ರನ್ ಕೂಡಾ ಗೊಂದಲದಿಂದ ಕೂಡಿದ್ದು, ಸಮಯಕ್ಕೆ ಸರಿಯಾಗಿ ಆರಂಭವಾಗಿಲ್ಲ. ಸರ್ಕಾರದಿಂದ ನಿನ್ನೆ ಸಂಜೆ 3 ಗಂಟೆಗೆ ಸೂಚನೆ ಬಂದ ಹಿನ್ನೆಲೆ ಸಿದ್ಧತೆ ನಡೆದಿಲ್ಲ.

ಬೆಂಗಲೂರಿನಲ್ಲಿ ಡ್ರೈ ರನ್ ವಿಳಂಬ

ನಗರದ ಹಲಸೂರು, ಸಪ್ತಗಿರಿ‌ ಮೆಡಿಕಲ್ ಕಾಲೇಜ್, ಕಿಮ್ಸ್ ನಲ್ಲಿ ಡ್ರೈ ರನ್ ನಲ್ಲಿ ತೀವ್ರ ವಿಳಂಬವಾಗುತ್ತಿದೆ. ಡ್ರೈ ರನ್ ಗೆ ಫಲಾನುಭವಿಗಳು ಸಿದ್ಧವಿದ್ದರೂ, ತಾಂತ್ರಿಕ ದೋಷದ ಕಾರಣ ಇನ್ನು ಡ್ರೈ ರನ್ ಆರಂಭವಾಗಿಲ್ಲ. ಪೋರ್ಟಲ್ ಲಾಗ್ ಇನ್ ಆಗಿಲ್ಲ ಎಂದು ತಡಮಾಡಲಾಗಿದೆ.

ಮೊದಲನೇ ಡ್ರೈ ರನ್ ನಲ್ಲೂ ಟೆಕ್ನಿಕಲ್ ಸಮಸ್ಯೆ ಎದುರಾಗಿತ್ತು. ನೋಂದಣಿಯಾದವರಿಗೆ ಒಟಿಪಿ ಬಂದ ಬಳಿಕವಷ್ಟೇ ವ್ಯಾಕ್ಸಿನ್ ಡ್ರೈ ರನ್​ ನಡೆಸಲಾಗುತ್ತಿತ್ತು. ಆದರೆ ಒಟಿಪಿ ಜನರೇಟ್ ಆಗದೆ ಕೈಕೊಟ್ಟಿತ್ತು. ಎರಡನೇ ಡ್ರೈ ರನ್ ರಲ್ಲೂ ಟೆಕ್ನಿಕಲ್ ಸಮಸ್ಯೆಯಿಂದ ವಿಳಂಬವಾಗಿದೆ.

ಬೆಳಗಾವಿಯಲ್ಲೂ ಕೊರೊನಾ ಡ್ರೈ ರನ್ ವಿಳಂಬ

ಬೆಳಗಾವಿ: ಇಂದು ಬೆಳಗಾವಿ ಜಿಲ್ಲೆಯ 7 ಕಡೆ ಕೊರೊನಾ ಲಸಿಕೆಯ ಡ್ರೈರನ್ ನಡೆಯುತ್ತಿದೆ. ಬೆಳಗಾವಿ ಜಿಲ್ಲಾ ಆರೋಗ್ಯ ಇಲಾಖೆ, ಬಿಮ್ಸ್ ಆಸ್ಪತ್ರೆ ಸಿಬ್ಬಂದಿ ಬೇಜವಾಬ್ದಾರಿಯಿಂದಾಗಿ ಡ್ರೈ ರನ್​ ವಿಳಂಬವಾಗಿದೆ ಎಂದು ಆರೋಪಿಸಲಾಗಿದೆ. ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಇದುವರೆಗೆ ಡ್ರೈ ರನ್​ ನಡೆಸಲು ಯಾವುದೇ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ.

ಬೆಳಗಾವಿಯಲ್ಲಿ ಡ್ರೈ ರನ್ ವಿಳಂಬ

ಇದನ್ನೂ ಓದಿ: ರಾಜ್ಯ, ದೇಶಾದ್ಯಂತ ಇಂದು ಕೊರೊನಾ ಲಸಿಕೆ ಡ್ರೈ ರನ್‌

ಬಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಯಾವ ಕೋಣೆಯಲ್ಲಿ ಡ್ರೈ ರನ್ ಮಾಡಲಾಗುತ್ತೆ ಎಂಬ ಬಗ್ಗೆ ಇನ್ನೂ ನಿರ್ಧಾರವೇ ಆಗಿಲ್ಲ. ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಡ್ರೈ ರನ್ ಎಲ್ಲಿ ಮಾಡುತ್ತಾರೆಂಬ ಮಾಹಿತಿ ಇಲ್ಲ. ಇದರಿಂದಾಗಿ ಫಲಾನುಭವಿಗಳು

ವ್ಯಾಕ್ಸಿನ್​ ಡ್ರೈ ರನ್ ಪರಿಶೀಲಿಸಿದ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ ವರ್ಧನ್

Corona vaccine dry run
ಚೆನ್ನೈನಲ್ಲಿ ವ್ಯಾಕ್ಸಿನ್​ ಡ್ರೈ ರನ್ ಪರಿಶೀಲಿಸಿದ ಕೇಂದ್ರ ಆರೋಗ್ಯ ಸಚಿವ

ಚೆನ್ನೈ: ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಗೆ ಭೇಟಿ ನೀಡಿ ವ್ಯಾಕ್ಸಿನ್​ ಡ್ರೈ ರನ್​ ಅನ್ನು ಪರಿಶೀಲಿಸಿದರು. ಇದೇ ವೇಳೆ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ ವರ್ಧನ್, ಅಲ್ಪಾವಧಿಯಲ್ಲಿ, ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಭಾರತವು ಉತ್ತಮ ಸಾಧನೆ ಮಾಡಿದೆ. ಮುಂದಿನ ದಿನಗಳಲ್ಲಿ, ನಾವು ಈ ಲಸಿಕೆಗಳನ್ನು ನಮ್ಮ ದೇಶವಾಸಿಗಳಿಗೆ ನೀಡಲು ಸಾಧ್ಯವಾಗುತ್ತದೆ. ಜನವರಿ 2 ರಂದು, ನಾವು ದೇಶದ ಸುಮಾರು 125 ಜಿಲ್ಲೆಗಳಲ್ಲಿ ಡ್ರೈ ರನ್ ಮಾಡಿದ್ದೇವೆ. ಇಂದು ದೇಶಾದ್ಯಂತ ಡ್ರೈ ರನ್​ ಮಾಡುತ್ತಿದ್ದೇವೆ ಎಂದು ಹೇಳಿದರು.

Last Updated : Jan 8, 2021, 12:13 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.