ETV Bharat / state

ಶಾಸಕ ಎಸ್ ಆರ್ ವಿಶ್ವನಾಥ್ ಕೊಲೆಗೆ ಸಂಚು ಪ್ರಕರಣ: ಕುಳ್ಳ ದೇವರಾಜ್ ಬಂಧನ - mla s r vishvanath murder Conspiracy

ಶಾಸಕ ಎಸ್‌ ಆರ್‌ ವಿಶ್ವನಾಥ್​ ಅವರ ಕೊಲೆಗೆ ಸಂಚು ಪ್ರಕರಣದಲ್ಲಿ ಪೊಲೀಸರು ಪ್ರಕರಣದ ಆರೋಪಿ ಕುಳ್ಳ ದೇವರಾಜ್ ಎಂಬವರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

kn_bng_
ಶಾಸಕ ಎಸ್​ ಆರ್​ ವಿಶ್ವನಾಥ್​
author img

By

Published : Dec 5, 2022, 6:38 PM IST

ಯಲಹಂಕ: ವರ್ಷದ ಹಿಂದೆ ಸದ್ದು ಮಾಡಿದ್ದ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಕೊಲೆಗೆ ಸಂಚು ಪ್ರಕರಣ ಆ ಬಳಿಕ ಮರೆಯಾಗಿತ್ತು. ಇದೀಗ ಕೋರ್ಟ್ ಪಿಸಿಆರ್ ಮೇಲೆ ಮತ್ತೆ ಪ್ರಕರಣ ದಾಖಲಾಗಿದೆ. ಆರೋಪಿ ಕುಳ್ಳ ದೇವರಾಜ್​ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು ಆತನ ಪತ್ತೆಗಾಗಿ ಹುಡುಕಾಟ ನಡೆಯುತ್ತಿದೆ.

ಕಳೆದ ವರ್ಷ ಡಿಸೆಂಬರ್​ನಲ್ಲಿ ವಿಶ್ವನಾಥ್ ಕೊಲೆಗೆ ಸಂಚು ರೂಪಿಸಿದ ಕಾರಣಕ್ಕೆ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಗಳಾದ ಗೋಪಾಲಕೃಷ್ಣ ಮತ್ತು ಕುಳ್ಳದೇವರಾಜ್ ಎಂಬುವವರನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಬಳಿಕ ಕೋರ್ಟ್​ನಲ್ಲಿ ಪ್ರಕರಣ ರದ್ದಾಗಿತ್ತು. ಆದರೆ, ವಿಶ್ವನಾಥ್ ಅವರು ತನ್ನ ಕೊಲೆಗೆ ಸಂಚು ನಡೆಸಿದವರ ವಿರುದ್ಧ ತನಿಖೆ ನಡೆಸುವಂತೆ ಕೋರಿ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು,​ 2ನೇ ಎಸಿಜೆಎಂ ಕೋರ್ಟ್​ನ ಪಿಸಿಆರ್ ಮೇಲೆ ಮತ್ತೆ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಯ ಪತ್ತೆಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.

ಇದನ್ನೂ ಓದಿ: ಉದ್ಯಮಿ ಪುತ್ರ ನಾಪತ್ತೆ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​: ಮಗನ ಕೊಲೆಗೆ ತಂದೆಯಿಂದಲೇ ಸುಪಾರಿ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.