ETV Bharat / state

ಪಂಜಿನ‌ ಮೆರವಣಿಗೆಯಲ್ಲಿ ಎಡವಟ್ಟು: ಪಂಜಿನ ಬಿಸಿ ಎಣ್ಣೆ ಬಿದ್ದು ಕೈ ನಾಯಕರ ಮೈಮೇಲೆ ಬೊಬ್ಬೆ! - procession in bengaluru

ಹಥ್ರಾಸ್​ ಘಟನೆ ಖಂಡಿಸಿ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ನಡೆದ ಪಂಜಿನ ಮೆರವಣಿಗೆ ವೇಳೆ ಪಂಜಿನಿಂದ ಬಿಸಿ ಎಣ್ಣೆ ಚೆಲ್ಲಿ ಕಾಂಗ್ರೆಸ್ ನಾಯಕರಿಗೆ ಸುಟ್ಟ ಗಾಯಗಳಾಗಿವೆ.

congress leaders injured in procession in bengaluru
ಪಂಜಿನ ಮೆರವಣಿಗೆ
author img

By

Published : Oct 2, 2020, 2:13 PM IST

ಬೆಂಗಳೂರು: ಗುರುವಾರ ರಾತ್ರಿ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ನಡೆದ ಪಂಜಿನ ಮೆರವಣಿಗೆಯಲ್ಲಿ ಬಿಸಿ ಎಣ್ಣೆ ಬಿದ್ದು ಕಾಂಗ್ರೆಸ್​ ನಾಯಕರಿಗೆ ಸುಟ್ಟ ಗಾಯಗಳಾದ ಘಟನೆ ನಡೆದಿದೆ.

ಕೈ ನಾಯಕರ ಮೈಮೇಲೆ ಬೊಬ್ಬೆ
ನಿನ್ನೆ ರೇಸ್ ಕೋರ್ಸ್ ರಸ್ತೆಯ ಆನಂದ ರಾವ್ ವೃತ್ತದಿಂದ ನಡೆದ ಪಂಜಿನ ಮೆರವಣಿಗೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಹಾಗೂ 4-5 ಪೊಲೀಸರಿಗೆ ಬಿಸಿ ಎಣ್ಣೆ ಬಿದ್ದು ಗಾಯಗಳಾಗಿವೆ. ಡಿ.ಕೆ. ಶಿವಕುಮಾರ್ ಭುಜ, ಸಿದ್ದರಾಮಯ್ಯ ಕೈ ಹಾಗೂ ಕುತ್ತಿಗೆ ಭಾಗದಲ್ಲಿ ಹಾಗೂ 5ಕ್ಕೂ ಹೆಚ್ಚು ಪೊಲೀಸರಿಗೆ ಸಣ್ಣ ಪ್ರಮಾಣದ ಸುಟ್ಟ ಗಾಯಗಳಾಗಿವೆ. ರಾತ್ರಿ ಪಂಜಿನ ಮೆರವಣಿಗೆಯಲ್ಲಿ ಪಂಜು ಹಿಡಿದು ನಡೆಯುವಾಗ ಕೈ ಹಾಗೂ ಮೈಗೆ ಪಂಜಿನ ಬಿಸಿ ಎಣ್ಣೆ ತಾಗಿದೆ. ನಿನ್ನೆ ಬಿಸಿ ಎಣ್ಣೆ ಬಿದ್ದ ಹಿನ್ನೆಲೆ ಇಂದು ಬೆಳಗ್ಗೆ ಸಿದ್ದರಾಮಯ್ಯ ಕೈ ಹಾಗೂ ಡಿಕೆಶಿ ಭುಜದ ಮೇಲೆ ಬೊಬ್ಬೆ ಬಂದಿವೆ.
congress leaders injured in procession in bengaluru
ಕೈ ನಾಯಕರ ಮೈಮೇಲೆ ಬೊಬ್ಬೆ
ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಆ್ಯಂಡ್​ ಟೀಂ ಮೆರವಣಿಗೆಗೆ ಪಂಜು ತಂದಿದ್ದರು. ಪಂಜು ಕೂಡಿದ ಕಾರಣ ಅದರಿಂದ ಬಿಸಿ ಎಣ್ಣೆ ನಾಯಕರ ಮೈ ಮೇಲೆ ಬಿದ್ದು ಈ ಎಡವಟ್ಟು ಸಂಭವಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.