ಬೆಂಗಳೂರು: ಬೆಂಗಳೂರಿನ ಜಯನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಅಲ್ಪ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕೇವಲ 160 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ರಾಮಮೂರ್ತಿ ವಿರುದ್ಧ ಜಯಭೇರಿಯಾಗಿದ್ದಾರೆ.
ಈ ಹಿನ್ನೆಲೆ ಜಯನಗರದ ಎಸ್ಎಸ್ಆರ್ವಿ ಕಾಲೇಜಿನ ಮುಂದೆ ವಿಜಯದ ಕೇಕೆ ಹಾಕಿ ನೃತ್ಯ, ಜೈಕಾರ ಮತ್ತು ಪಟಾಕಿಗಳನ್ನು ಸಿಡಿಸುವ ಮೂಲಕ ಬೆಂಬಲಿಗರು ಸಂಭ್ರಮಾಚರಣೆ ಮಾಡುತ್ತಿದ್ದಾರೆ.
ಕೇವಲ 160 ಮತಗಳ ಅಂತರದಲ್ಲಿ ಸೌಮ್ಯ ರೆಡ್ಡಿ ಗೆದ್ದ ಹಿನ್ನೆಲೆ ಮತ್ತೆ ಮರು ಮತ ಎಣಿಕೆ ಮಾಡುವಂತೆ ಬಿಜೆಪಿ ಅಭ್ಯರ್ಥಿ ಸಿ ಕೆ ರಾಮಮೂರ್ತಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ. ಮೊದಲ ಮನವಿ ಪರಿಗಣಿಸದ ಹಿನ್ನೆಲೆ ಸಂಸದ ತೇಜಸ್ವಿ ಸೂರ್ಯ ಸೂಚನೆ ಮೇರೆಗೆ ಎರಡನೇ ಬಾರಿಗೆ ರೀ ಕೌಂಟಿಂಗ್ ನಡೆಸುವಂತೆ ಮನವಿ ಮಾಡಿದ್ದಾರೆ. ಇನ್ನು ರೀ ಕೌಂಟಿಂಗ್ ಸಾಧ್ಯತೆ ಹಿನ್ನೆಲೆಯಲ್ಲಿ ಮತ ಎಣಿಕೆ ಕೇಂದ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ದೌಡಾಯಿಸಿದ್ದಾರೆ.
ಇದನ್ನೂ ಓದಿ:ಸುಳ್ಯದಲ್ಲಿ ಭಾಗೀರಥಿ ಮುರುಳ್ಯಗೆ ಭರ್ಜರಿ ಗೆಲುವು: 35 ವರ್ಷಗಳ ನಂತರ ಸುಳ್ಯಕ್ಕೆ ಮಹಿಳಾ ಶಾಸಕಿ