ETV Bharat / state

ಇನ್ನೆರಡು‌ ದಿನದಲ್ಲಿ‌ ಕೋವಿಡ್-19 ಪ್ಯಾಕೇಜ್​ಗೆ ಮತ್ತಷ್ಟು ವರ್ಗ ಸೇರ್ಪಡೆ.. ಸಿಎಂ ಬಿಎಸ್​ವೈ

ಜಿಲ್ಲಾವಾರು ಕೋವಿಡ್-19 ನಿಯಂತ್ರಣದಲ್ಲಿ ಏನಾದರು ತೊಂದರೆಯಾದರೆ ಕೂಡಲೇ ಕರೆ‌ ಮಾಡಿ ತಿಳಿಸಬೇಕು. ಸರ್ಕಾರದ ಕಾರ್ಯಕ್ರಮಗಳು ಮನೆ ಮನೆಗೂ ಮುಟ್ಟುವಂತೆ‌ ಮಾಡುವ ಜವಾಬ್ದಾರಿ ನಿಮ್ಮ‌ ಮೇಲೆ ಇದೆ ಎಂದು ಜಿಲ್ಲಾ ಘಟಕಗಳಿಗೆ ಸಿಎಂ ತಿಳಿಸಿದರು.

Yediyurappa
ಬಿ.ಎಸ್.ಯಡಿಯೂರಪ್ಪ
author img

By

Published : May 10, 2020, 7:44 PM IST

ಬೆಂಗಳೂರು : ಕೋವಿಡ್-19 ವಿಶೇಷ ಆರ್ಥಿಕ ಪ್ಯಾಕೇಜ್‌ನಲ್ಲಿ ಬಿಟ್ಟು ಹೋಗಿರುವ ಕೆಲ ವರ್ಗಗಳನ್ನು ಇನ್ನೆರಡು ದಿನದಲ್ಲಿ ಸೇರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಮುಖ್ಯಮಂತ್ರಿ ತಮ್ಮ ಅಧಿಕೃತ ನಿವಾಸ ಕಾವೇರಿಯಿಂದ ರಾಜ್ಯ ಬಿಜೆಪಿಯ ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರ ಜೊತೆ ವಿಡಿಯೋ ಕಾನ್ಫರೆನ್ಸ್ ಮುಖಾಂತರ ಮಾತನಾಡಿದ ಅವರು, ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಘೋಷಣೆ ‌ಮಾಡಿದ ಆರ್ಥಿಕ ಪ್ಯಾಕೇಜ್​ಗೆ ಅಭಿನಂದನೆ ‌ಸಲ್ಲಿಸಿದರು. ಇದರ ಜೊತೆ ಬಿಟ್ಟು ಹೋಗಿರೋ ಕೆಲ ವರ್ಗಗಳಿಗೂ ಆದಷ್ಟು ಬೇಗ ಪ್ಯಾಕೇಜ್ ಘೋಷಣೆ ಮಾಡುವಂತೆ ಒತ್ತಾಯ ಮಾಡಲಾಯಿತು.

ರಾಜ್ಯ ಬಿಜೆಪಿ‌ ಘಟಕದ ಪರವಾಗಿ ಬಂದ ಒತ್ತಾಯಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಇನ್ನೆರಡು‌ ದಿನಗಳಲ್ಲಿ ಬಿಟ್ಟುಹೋಗಿರುವ ವರ್ಗಗಳನ್ನು ಪ್ಯಾಕೇಜ್‌ನಲ್ಲಿ ಘೋಷಣೆ ‌ಮಾಡಲಾಗುವುದು ಎಂದು ಭರವಸೆ ನೀಡಿದರು. ವಿಡಿಯೋ ಕಾನ್ಫರೆನ್ಸ್​ನಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಆದ್ಯತೆ ಮೇರೆಗೆ ಪರಿಗಣಿಸಲಾಗುತ್ತದೆ. ಜಿಲ್ಲಾವಾರು ಕೋವಿಡ್-19 ನಿಯಂತ್ರಣದಲ್ಲಿ ಏನಾದರು ತೊಂದರೆಯಾದರೆ ಕೂಡಲೇ ಕರೆ‌ ಮಾಡಿ ತಿಳಿಸಬೇಕು. ಸರ್ಕಾರದ ಕಾರ್ಯಕ್ರಮಗಳು ಮನೆ ಮನೆಗೂ ಮುಟ್ಟುವಂತೆ‌ ಮಾಡುವ ಜವಾಬ್ದಾರಿ ನಿಮ್ಮ‌ ಮೇಲೆ ಇದೆ ಎಂದು ಜಿಲ್ಲಾ ಘಟಕಗಳಿಗೆ ಸಿಎಂ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.