ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಪಕ್ಷ ಬಿಡಲ್ಲ ಅನ್ನೋ ವಿಶ್ವಾಸ ನನಗಿದೆ. ಅವನು ಎಲ್ಲೇ ಇದ್ರೂ ನನ್ನ ಸ್ನೇಹಿತ, ಪಕ್ಷ ಬಿಟ್ಟರೂ ನನ್ನ ಸ್ನೇಹಿತ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ಅವನು ಪಕ್ಷ ಬಿಟ್ಟರೂ ನಾನು ಅವನ ಮನೆಗೆ ಹೋಗ್ತೇನೆ. ರಾಜಕೀಯ ಬೇರೆ, ವೈಯಕ್ತಿಕ ಬೇರೆ. ಅವನಿಗೆ ಕೋಪ ಕಡಿಮೆ ಆದ ಮೇಲೆ ಹೋಗಿ ಮಾತಾಡ್ತೇನೆ. ಅವನು ಎಲ್ಲೇ ಇದ್ದರು ನನ್ನ ಸ್ನೇಹಿತ. ಅವನು ಬೇರೆ ಪಕ್ಷಕ್ಕೆ ಹೋದರೂ ನನಗೆ ಸ್ನೇಹಿತನಾಗೇ ಇರುತ್ತಾನೆ. ಅವನು ಕಾಂಗ್ರೆಸ್ ಬಿಡಲ್ಲ ಎಂಬ ನಂಬಿಕೆ ಇದೆ ಎಂದರು.
ಪೆನ್ನಾರ್ ಕಾವೇರಿ ನದಿ ಜೋಡಣೆ ವಿಚಾರ ನಾಳೆ ಮಾತಾಡ್ತೀನಿ. ನಾಳೆ ಮಾಧ್ಯಮಗೋಷ್ಟಿ ಕರೆದಿದ್ದೇನೆ. ಶುಕ್ರವಾರ ಬೆಳಗ್ಗೆ ಹಿಜಾಬ್ ವಿಚಾರ ಕೂಡ ಮಾತನಾಡುತ್ತೇನೆ. ವಿಷಯ ತಿಳಿಯದೇ ಏನು ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ಎಲ್ಲವನ್ನೂ ವಿವರವಾಗಿ ಮಾತನಾಡುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಇದನ್ನೂ ಓದಿ: ಪರಿಷತ್ ಸದಸ್ಯರಿಗೆ ತರಬೇತಿ ಶಿಬಿರ: ನಗೆ ಚಟಾಕಿಯೊಂದಿಗೆ ಸಿದ್ದರಾಮಯ್ಯ ಮೇಷ್ಟ್ರು ನೀತಿ ಪಾಠ