ETV Bharat / state

ನಿರ್ವಿಘ್ನ ಬಜೆಟ್​ ಮಂಡನೆಗೆ ವಿಶೇಷ ಹೋಮ,ಹವನ: ಸಿಎಂ ಬಿಎಸ್​ವೈ ಭಾಗಿ - ಬಜೆಟ್​ ಹಿನ್ನೆಲೆ ಬೆಂಗಳೂರಿನಲ್ಲಿ ವಿಶೇಷ ಪೂಜೆ

ಉತ್ತರಹಳ್ಳಿ ಪೂರ್ಣ ಪ್ರಜ್ಞಾ ಲೇಔಟ್‌ನಲ್ಲಿರುವ ರಾಘವೇಂದ್ರ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಹೋಮ ಮತ್ತು ಪೂಜಾ ಕಾರ್ಯಕ್ರಮದಲ್ಲಿ ಸಿಎಂ ಬಿ.ಎಸ್​ ಯಡಿಯೂರಪ್ಪ ಪಾಲ್ಗೊಂಡರು.

CM BSY attended special pooja at Bengaluru
ಹೋಮ-ಹವನದಲ್ಲಿ ಭಾಗಿಯಾದ ಸಿಎಂ ಬಿಎಸ್​ವೈ
author img

By

Published : Mar 2, 2021, 5:20 PM IST

ಬೆಂಗಳೂರು: ಈ ಬಾರಿಯ ಬಜೆಟ್ ಮಂಡನೆ ಸರಾಗವಾಗಿ ನೆರವೇರಲಿ ಎಂದು ಆಶಿಸಿ ಉತ್ತರಹಳ್ಳಿ ಪೂರ್ಣ ಪ್ರಜ್ಞಾ ಲೇಔಟ್‌ನಲ್ಲಿರುವ ರಾಘವೇಂದ್ರ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಹೋಮ ಮತ್ತು ಪೂಜಾ ಕಾರ್ಯಕ್ರಮದಲ್ಲಿ ಸಿಎಂ ಬಿ.ಎಸ್​ ಯಡಿಯೂರಪ್ಪ ಭಾಗಿಯಾಗಿದ್ದರು.

ಇದಕ್ಕೂ ಮುನ್ನ ಸಿಎಂಗೆ ಮಂಗಳ ವಾದ್ಯಗಳೊಂದಿಗೆ ಆರತಿ ಬೆಳಗಿ ಸ್ವಾಗತ ಕೋರಲಾಯಿತು. ಬಳಿಕ ಮಠದ ವತಿಯಿಂದ ಆಯೋಜಿಸಲಾಗಿದ್ದ ನರಸಿಂಹ ಮಂತ್ರ ಹೋಮ‌ ಮತ್ತು ದುರ್ಗಾ ಮಂತ್ರ ಹೋಮದ ಪೂರ್ಣಾಹುತಿಯಲ್ಲಿ ಅವರು ಭಾಗಿಯಾಗಿದರು. ಅರಿಷ್ಟ ನಿವಾರಕ ಮತ್ತು ಜಯ ಪ್ರಾಪ್ತಿಗಾಗಿ ಈ ಎರಡು ಹೋಮಗಳನ್ನು ನೆರವೇರಿಸಲಾಯಿತು. ಸಚಿವ ಆರ್. ಅಶೋಕ್, ಶಾಸಕರಾದ ರಾಜು ಗೌಡ ಮತ್ತು ಎಂ. ಕೃಷ್ಣಪ್ಪ ಈ ವೇಳೆ ಉಪಸ್ಥಿತರಿದ್ದರು.

ಹೋಮ-ಹವನದಲ್ಲಿ ಭಾಗಿಯಾದ ಸಿಎಂ ಬಿಎಸ್​ವೈ

ಇದನ್ನೂ ಓದಿ : ನಾಳೆ ಇಲ್ಲ, ನಾಡಿದ್ದು ಕೋವಿಡ್​ ಲಸಿಕೆ ಹಾಕಿಸಿಕೊಳ್ಳುತ್ತೇನೆ: ಸಿಎಂ ಯಡಿಯೂರಪ್ಪ

ಕಾರ್ಯಕ್ರಮದ ನಂತರ ಮಾತನಾಡಿದ ಯಡಿಯೂರಪ್ಪ, ರಾಯರ ಸ್ಮರಣೆ ಮಾಡದೆ ಒಂದು ದಿನವೂ ನಾನು ಕಳೆದಿಲ್ಲ‌. ಅವರ ಆಶೀರ್ವಾದದಿಂದ ನಾನು ಈ ಸ್ಥಾನದಲ್ಲಿದ್ದೇನೆ.‌ ರಾಜ್ಯದ ಜನತೆಗಾಗಿ ಮಾರ್ಚ್ 8 ರಂದು ಬಜೆಟ್ ಮಂಡಿಸುತ್ತಿದ್ದೇನೆ. ಪ್ರಧಾನಿ ಮೋದಿಯವರು‌ ಮಂಡಿಸಿದ ಬಜೆಟ್​ನಂತೆ ಎಲ್ಲಾ ವರ್ಗದವರಿಗೂ ಅನುಕೂಲವಾಗುವಂತೆ ಬಜೆಟ್ ಮಂಡಿಸುತ್ತೇನೆ.

ಈ ಹಿಂದೆ ವಿಜಯರಾಯರ ಸನ್ನಿಧಿಯಲ್ಲಿ 20 ದಿನಗಳ ಕಾಲ ಹಗಲು ರಾತ್ರಿ ಸೇವೆ ಮಾಡಿದ್ದೆ. ಅಲ್ಲಿಂದ ರಾಘವೇಂದ್ರ ಸನ್ನಿಧಿಯಲ್ಲಿ ನಾನು, ನನ್ನ ಶ್ರೀಮತಿ ಕೆಲವು ದಿನ ಇದ್ದು ಪೂಜೆ ಮಾಡಿ ಬಂದಿದ್ದವು. ನಂತರ ಹುಟ್ಟಿದ ಇಬ್ಬರು ಮಕ್ಕಳಿಗೆ ರಾಘವೇಂದ್ರ ಮತ್ತು ವಿಜಯೇಂದ್ರ ಎಂದು ಹೆಸರಿಟ್ಟೆವು ಎಂದು ಅವರು ಸ್ಮರಿಸಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.