ಬೆಂಗಳೂರು : ಕಾಂಗ್ರೆಸ್ ಪಕ್ಷದವರು ಮೇಕೆದಾಟು ಪಾದಯಾತ್ರೆ ಯಾಕೆ ಮಾಡುತ್ತಿದಾರೆ ಎಂಬುದು ಜಗತ್ತಿಗೇ ಗೊತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 'ಕೈ' ನಾಯಕರ ಪಾದಯಾತ್ರೆಗೆ ತಿರುಗೇಟು ನೀಡಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಸಿಎಂ, ಒಂದನೇ ಹಂತದ ಪಾದಯಾತ್ರೆ ಯಾಕೆ ಆಯಿತು ಎಂದು ಗೊತ್ತಿದೆ. ಎರಡನೇ ಪಾದಯಾತ್ರೆ ಯಾಕೆ ನಡೆಯುತ್ತಿದೆ ಎಂಬುದೂ ಗೊತ್ತಿದೆ. ಮೊದಲು ಕಾಂಗ್ರೆಸ್ನವರು ಕೋವಿಡ್ ನಿಯಮಗಳನ್ನು ಪಾಲನೆ ಮಾಡಲಿ ಎಂದು ಹೇಳಿದರು.
ಇದನ್ನೂ ಓದಿ: ನಾಳೆ ರಾಮನಗರದಿಂದ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಎರಡನೇ ಹಂತ ಆರಂಭ
ರಾಜಕೀಯಕ್ಕಾಗಿ ಅಧಿವೇಶನ ಹಾಳು ಮಾಡಿದ ಕಾಂಗ್ರೆಸ್ ಪಕ್ಷದವರು, ಸದನದ ಒಳಗೂ ಪ್ರತಿಭಟನೆ ಮಾಡಿದ್ರು, ಈಗ ಹೊರಗಡೆ ಮಾಡುತ್ತಿದ್ದಾರೆ ಎಂದು ಕುಟುಕಿದರು.