ಬೆಂಗಳೂರು : ಆರೋಗ್ಯ ಇಲಾಖೆಯಿಂದ ಖಾಸಗಿ ಆಸ್ಪತ್ರೆಗಳಿಗೆ ನಿರ್ಬಂಧ ಹೇರಿದ್ದು, ಖಾಸಗಿ ಆಸ್ಪತ್ರೆಗಳು ಒಮ್ಮೆ ತೆರೆದ ಲಸಿಕಾ ಬಾಟಲ್ಗಳನ್ನು ಮರುಬಳಕೆ ಮಾಡುವಂತಿಲ್ಲ ಎಂದು ಸೂಚಿಸಲಾಗಿದೆ.
ಒಮ್ಮೆ ಲಸಿಕಾ ಬಾಟಲ್ ತೆರೆದ ನಂತರ, ಬಾಟಲಿಯನ್ನು 4 ಗಂಟೆಗಳ ಒಳಗೆ ಬಳಸಬೇಕು. ಲಸಿಕೆ ಸೀಸೆ ಮಾನಿಟರ್ ಇಲ್ಲದಿದ್ದಲ್ಲಿ ಗುಣಮಟ್ಟದ ಖಚಿತಪಡಿಸಿಕೊಳ್ಳಲು ಸಾಧ್ಯವಾಗದ ಕಾರಣ, ಕೋವಾಕ್ಸಿನ್ ಲಸಿಕೆಗೆ ಓಪನ್-ವೈಯಲ್ ನೀತಿಯನ್ನು ಅನುಮತಿಸಲಾಗುವುದಿಲ್ಲ ಎಂದು ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಸ್ಪಷ್ಟನೆ ನೀಡಿದೆ. ಈ ಹಿನ್ನೆಲೆ ತೆರೆದ ಬಾಟಲಿ ನೀತಿ ಅನುಸರಿಸದಂತೆ ಖಾಸಗಿ ಆಸ್ಪತ್ರೆಗಳಗೆ ನಿರ್ಬಂಧ ಹೇರಲಾಗಿದೆ.
ಈ ಹಿಂದೆ ಕೋವಾಕ್ಸಿನ್ ತಯಾರಕ ಕಂಪನಿ ಭಾರತ್ ಬಯೋಟೆಕ್ ಓಪನ್ ಬಾಟಲ್ ಸ್ಥಿರತೆ ಹಾಗು ಬಳಕೆ ಕುರಿತು ಗೈಡ್ ಲೈನ್ಸ್ ನೀಡಿತ್ತು. ಒಮ್ಮೆ ತೆರೆದ ಕೋವಾಕ್ಸಿನ್ ಬಾಟಲುಗಳನ್ನು 2-8 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸಂಗ್ರಹಿಸಿದರೆ 28 ದಿನಗಳವರೆಗೆ ಬಳಸಬಹುದು ಅಂತಾ ತಿಳಿಸಿತ್ತು.
ತಕ್ಷಣ ಅಥವಾ ಪ್ರತಿರಕ್ಷಣೆ ಅವಧಿಯ ಕೊನೆಯಲ್ಲಿ ತಿರಸ್ಕರಿಸಬೇಕಾಗಿಲ್ಲ ಅಂತಾ ಭಾರತ್ ಬಯೋಟೆಕ್ ಹೇಳಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆಯು ಕೇಂದ್ರ ಆರೋಗ್ಯ ಇಲಾಖೆಗೆ ಸ್ಪಷ್ಟನೆ ಕೇಳಿತ್ತು. ಕೇಂದ್ರವೂ, ಲಸಿಕೆ ಸೀಸೆ ಮಾನಿಟರ್ ಇಲ್ಲದಿದ್ದಲ್ಲಿ ಗುಣಮಟ್ಟದ ಖಚಿತಪಡಿಸಿಕೊಳ್ಳಲು ಸಾಧ್ಯವಿಲ್ಲ ಅಂತ ಸ್ಪಷ್ಟನೆ ನೀಡಿತ್ತು. ಹೀಗಾಗಿ ತೆರೆದ ಬಾಟಲಿ ನೀತಿ ಅನುಸರಿಸದಂತೆ ಖಾಸಗಿ ಆಸ್ಪತ್ರೆಗಳಿಗೆ ಸುತ್ತೋಲೆ ಹೊರಡಿಸಲಾಗಿದೆ.