ETV Bharat / state

ಕೋವಿಡ್ ನಡುವೆ ಚಿಕುನ್ ಗುನ್ಯಾ ಜ್ವರ: ಸಿಲಿಕಾನ್​ ಸಿಟಿಯಲ್ಲಿ 100 ಪ್ರಕರಣ ಬೆಳಕಿಗೆ

ಸಾಂಕ್ರಾಮಿಕ ರೋಗಗಳ ಹರಡುವಿಕೆ ಕಡಿಮೆ ಇದ್ದರೂ ಅನೇಕ ಜನರಿಗೆ ಚಿಕುನ್ ಗುನ್ಯಾ, ಡೆಂಗ್ಯೂ, ಕಾಲರಾ, ಶೀತಜ್ವರ, ಟೈಫಾಯ್ಡ್ ಜ್ವರಗಳು ಬಾಧಿಸಿವೆ.

chicken-gunya-infects-100-people-in-bangalore
ಕೋವಿಡ್ ನಡುವೆ ಚಿಕುನ್ ಗುನ್ಯಾ ಜ್ವರ
author img

By

Published : Oct 1, 2020, 9:23 AM IST

ಬೆಂಗಳೂರು: ಕೋವಿಡ್ ಮಹಾಮಾರಿಯಿಂದ ಲಕ್ಷಾಂತರ ಜನರಿಗೆ ಸೋಂಕು ಹರಡಿದ್ದು, ಸಾವಿರಾರು ಮಂದಿ ಸಾವು-ನೋವಿಗೆ ಬಲಿಯಾಗಿದ್ದಾರೆ.

ಈ ಮಧ್ಯೆ ಸಾಂಕ್ರಾಮಿಕ ರೋಗಗಳ ಹರಡುವಿಕೆ ಕಡಿಮೆ ಇದ್ದರೂ ಅನೇಕ ಜನರಿಗೆ ಚಿಕುನ್ ಗುನ್ಯಾ, ಡೆಂಗ್ಯೂ, ಕಾಲರಾ, ಶೀತಜ್ವರ, ಟೈಫಾಯ್ಡ್ ಜ್ವರಗಳು ಬಾಧಿಸಿವೆ.

ಈಡೀಸ್​ ಈಜಿಪ್ಟಿ ಸೊಳ್ಳೆಯಿಂದ ಹರಡುವ ವೈರಲ್ ಸೋಂಕು ಚಿಕುನ್ ಗುನ್ಯಾ. 2010ರಿಂದ 2016ರವರೆಗೆ ದೇಶದಲ್ಲಿ ಚಿಕುನ್ ಗುನ್ಯಾ ವ್ಯಾಪಕವಾಗಿ ಹರಡಿತ್ತು. ಸೋಂಕಿತ ಸೊಳ್ಳೆ ಮತ್ತೊಬ್ಬರಿಗೆ ಕಚ್ಚುವುದರಿಂದ ಸೊಳ್ಳೆ ಮೂಲಕ ಈ ರೋಗ ಹರಡುತ್ತದೆ. ಈ ಬಾರಿ ಕೋವಿಡ್ ಮಧ್ಯೆಯೂ 2020 ಜನವರಿಯಿಂದ ಸಪ್ಟೆಂಬರ್ 2ರವರೆಗೆ 100 ಜನರಲ್ಲಿ ಚಿಕುನ್ ಗುನ್ಯಾ ಪ್ರಕರಣ ಬೆಳಕಿಗೆ ಬಂದಿದೆ. 2018ರಲ್ಲಿ 99, 2019ರಲ್ಲಿ 210 ಇದ್ದ ಪ್ರಕರಣ ಈ ಬಾರಿ 100 ಜನರಲ್ಲಿ ಕಾಣಿಸಿಕೊಂಡಿದೆ.

ಕೋವಿಡ್ ನಡುವೆ ಚಿಕುನ್ ಗುನ್ಯಾ ಜ್ವರ

ಅದೇ ರೀತಿ 1295 ಡೆಂಗ್ಯೂ, 6 ಮಂದಿಯಲ್ಲಿ ಮೆದುಳಿನ ಉರಿಯೂತ (ಜಪಾನೀಸ್ ಎನ್ಸೆಫಾಲಿಟಿಸ್), 141 ಟೈಫಾಯ್ಡ್ , 34 ಯಕೃತ್ತಿನ ಸೋಂಕು (ವೈರಲ್ ಹೆಪಟೈಟಿಸ್), 467 ಕಾಲರಾ ಹಾಗೂ 635 ಶೀತಜ್ವರದ ಪ್ರಕರಣಗಳು ಈ ವರ್ಷದಲ್ಲಿ ಕಂಡು ಬಂದಿವೆ. ಕಳೆದ ವರ್ಷ 7273 ಇದ್ದ ಡೆಂಗ್ಯೂ ಪ್ರಕರಣ ಈ ಬಾರಿ 1295 ಬರುವ ಮೂಲಕ ಗಣನೀಯವಾಗಿ ಇಳಿಕೆಯಾಗಿದೆ. ಟೈಫಾಯ್ಡ್ 285ರಿಂದ 141, ಶೀತಜ್ವರ 1101ರಿಂದ 635ಕ್ಕೆ ಇಳಿಕೆಯಾಗಿದ್ದು, ಕಾಲರಾ ಮಾತ್ರ 4ರಿಂದ 467ಕ್ಕೆ ಏರಿಕೆಯಾಗಿದೆ.

ಈ ಬಗ್ಗೆ ಈಟಿವಿ ಭಾರತ್ ಜೊತೆ ಮಾತನಾಡಿದ ಬಿಬಿಎಂಪಿ ಸಾರ್ವಜನಿಕ ಆರೋಗ್ಯ ಮುಖ್ಯ ಆರೋಗ್ಯಾಧಿಕಾರಿ ವಿಜಯೇಂದ್ರ, ಈ ಬಾರಿ ಸಾಂಕ್ರಾಮಿಕ ರೋಗಗಳು ಗಮನಾರ್ಹವಾಗಿ ಕಡಿಮೆ ಆಗಿವೆ. ಇದಕ್ಕೆ ಕಾರಣ ಕೋವಿಡ್ ಹಿನ್ನೆಲೆ ಜನರು ಸ್ವಚ್ಛತೆ ಕಾಪಾಡುತ್ತಿದ್ದಾರೆ. ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಹಾಗೇ ಎಲ್ಲಾ ಕಡೆ ಸ್ಯಾನಿಟೈಸ್ ಮಾಡಿರುವ ಹಿನ್ನೆಲೆ ಎಲ್ಲಾ ಸಾಂಕ್ರಾಮಿಕ ರೋಗಗಳ ಪ್ರಮಾಣ ಕಡಿಮೆ ಆಗಿದೆ ಎಂದರು.

ಚಿಕುನ್ ಗುನ್ಯಾ ಜ್ವರದ ಲಕ್ಷಣಗಳು: ಚಿಕುನ್ ಗುನ್ಯಾ ಬಂದಿದ್ದರೆ ಜ್ವರ, ಕೆಮ್ಮು, ನೆಗಡಿ, ಮೈ-ಕೈ ನೋವು, ಅದರಲ್ಲೂ ಪ್ರಮುಖವಾಗಿ ಎಲ್ಲಾ ಮೂಳೆಗಳ ಸಂದಿಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. 20-30 ಪ್ರಮಾಣದಲ್ಲಿ ಮೂಳೆ ಸಂದಿಗಳ ನೋವುಗಳು 2ರಿಂದ 3 ತಿಂಗಳವರೆಗೂ ಮುಂದುವರೆಯುತ್ತವೆ. ವಾತಾವರಣ ತಂಪಾದಾಗ ಈ ನೋವು ಕಾಣಿಸಿಕೊಳ್ಳುತ್ತದೆ. ಒಂದು ಬಾರಿ ವಾಸಿ ಆದ್ರೆ ಮತ್ತೆ ಈ ನೋವು ಕಾಣಿಸಿಕೊಳ್ಳುವುದಿಲ್ಲ ಎಂದರು.

ಪಾಲಿಕೆಯ ಎಲ್ಲಾ 141 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಪರೀಕ್ಷೆ ನಡೆಸಲಾಗುತ್ತಿದೆ. ಜೊತೆಗೆ ಮೊಬೈಲ್ ವಾಹನ, ಫಿವರ್ ಕ್ಲಿನಿಕ್ ಗಳಲ್ಲೂ ಟೆಸ್ಟಿಂಗ್ ಮಾಡಿಸಲಾಗುತ್ತದೆ. ಒಂದು ವೇಳೆ ಕೋವಿಡ್ ನೆಗೆಟಿವ್ ಬಂದೂ ಜ್ವರ ಮುಂದುವರೆದಿದ್ದರೆ ಚಿಕುನ್ ಗುನ್ಯಾ, ಡೆಂಗ್ಯೂ ಟೆಸ್ಟ್ ಮಾಡಿಸಲಾಗುತ್ತದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.