ETV Bharat / state

ಸರಗಳ್ಳತನ ಎಸಗಿದ ಖದೀಮ: ಪೊಲೀಸರ ಭಯದಿಂದ ಚಿನ್ನ ನುಂಗಿಯೇ ಬಿಟ್ಟ - Bengaluru

ರಸ್ತೆಯಲ್ಲಿ ನಡೆದುಕೊಂಡು ಹೋಗುವ ಮಹಿಳೆಯ ಸರಗಳ್ಳತನ ಎಸಗಿ, ಪೊಲೀಸರಿಗೆ ಸಿಕ್ಕಿಬೀಳುವ ಭೀತಿಯಿಂದ ಚಿನ್ನವನ್ನು ಖದೀಮನೋರ್ವ ನುಂಗಿರುವ ಪ್ರಕರಣ ನಗರದಲ್ಲಿ ನಡೆದಿದೆ.

Bengaluru
ಸರ ಕದ್ದು ನುಂಗಿದ ವಿಜಯ್
author img

By

Published : Aug 23, 2021, 2:29 PM IST

ಬೆಂಗಳೂರು: ಸರಗಳ್ಳತನ ಎಸಗಿ ಪೊಲೀಸರಿಗೆ ಸಿಕ್ಕಿಬೀಳುವ ಭೀತಿಯಿಂದ ಖದೀಮನೋರ್ವ 7.5 ಗ್ರಾಂ ಚಿನ್ನವನ್ನು ನುಂಗಿರುವ ಘಟನೆ ಬೆಳಕಿಗೆ ಬಂದಿದೆ. ವಿಜಯ್ ಸರ ಕದ್ದು ನುಂಗಿದ ಖದೀಮ. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವಿಜಯ್​ಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ‌‌. ಮತ್ತೋರ್ವ ಆರೋಪಿ ಸಂಜಯ್​ನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ‌.

ಘಟನೆ ವಿವರ: ಇತ್ತೀಚೆಗೆ ರಕ್ಷಾ ಬಂಧನ ಹಿನ್ನೆಲೆಯಲ್ಲಿ ರಾಖಿ ತೆಗೆದುಕೊಂಡು ಚಿಕ್ಕಪೇಟೆಯ ಎಂಟಿ ಸ್ಟ್ರೀಟ್ ಬಳಿ ಮಹಿಳೆಯೋರ್ವರು ನಡೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಸರಗಳ್ಳತನ ಮಾಡಲು ಸಂಜಯ್, ವಿಜಯ್ ಹಾಗೂ ಹೇಮಂತ್ ಎಂಬವರು ಸಂಚು ರೂಪಿಸಿದ್ದಾರೆ.‌ ಇದರಂತೆ ಹಿಂಬದಿಯಿಂದ ಹೋಗಿ ಮಹಿಳೆಯ 80 ಗ್ರಾಂ ಮಾಂಗಲ್ಯ ಸರವನ್ನು ಕಸಿಯಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆ ಜೋರಾಗಿ ಕಿರುಚಿಕೊಂಡಿದ್ದಾರೆ. ಸ್ಥಳಕ್ಕೆ ಸಹಾಯಕ್ಕೆಂದು ಬಂದ ಸಾರ್ವಜನಿಕರು ಖದೀಮರನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ಸಂದರ್ಭದಲ್ಲಿ ಹೇಮಂತ್ ಎಸ್ಕೇಪ್ ಆಗಿದ್ದಾನೆ.

ಇನ್ನು ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಮಾರ್ಕೆಟ್ ಠಾಣಾ ಪೊಲೀಸರನ್ನು ಕಂಡ ವಿಜಯ್​ ಕೈಯಲ್ಲಿದ್ದ ತುಂಡು ಸರವನ್ನು ನುಂಗಿದ್ದಾನೆ. ಪೊಲೀಸರು ಖದೀಮರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಸರದ ತುಂಡು ಎಲ್ಲಿದೆ ಎಂಬುದರ ಬಗ್ಗೆ ಮಾಹಿತಿ ನೀಡಿರಲಿಲ್ಲ. ಹೀಗಾಗಿ ಆಸ್ಪತ್ರೆಗೆ ಸೇರಿಸಿ ಎಕ್ಸ್ ರೇ ಮಾಡಿಸಲಾಗಿದೆ. ಆ ಸಂದರ್ಭದಲ್ಲಿ ಹೊಟ್ಟೆಯಲ್ಲಿ ಸರದ ರೂಪದಲ್ಲಿ ಯಾವುದೋ ವಸ್ತು ಇರುವುದು ಪತ್ತೆಯಾಗಿತ್ತು. ಈ ಬಗ್ಗೆ ಪ್ರಶ್ನಿಸಿದ ಪೊಲೀಸರಿಗೆ, ಹೊಟ್ಟೆಯಲ್ಲಿರುವುದು ಸರವಲ್ಲ. ಊಟ ಮಾಡಿದಾಗ ಮೂಳೆ ನುಂಗಿರುವುದಾಗಿ ಹೇಳಿಕೆ ನೀಡಿದ್ದಾನೆ‌. ಇದರಿಂದ ಅನುಮಾನಗೊಂಡು ಪೊಲೀಸರು ಮತ್ತಷ್ಟು ವಿಚಾರಣೆ ನಡೆಸಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ‌.

ಸದ್ಯ ವಿಜಯ್​ಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.