ಬೆಂಗಳೂರು: ಸಾಲ ನೀಡಿ ಅಧಿಕ ಬಡ್ಡಿ ವಸೂಲಿ ಮಾಡುತ್ತಿದ್ದ ಆರೋಪಿ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.
ನಾಗರಾಜ್ ಶೆಟ್ಟಿ ಬಂಧಿತ ಆರೋಪಿ. ಮೂಲತಃ ಶಿವಮೊಗ್ಗದವನಾದ ಈತ ಬೆಂಗಳೂರಿನ ವೈಯಾಲಿಕಾವಲ್ನಲ್ಲಿ ಬಾಲಾಜಿ ಫಿನಾನ್ಸ್ ನಡೆಸುತ್ತಿದ್ದ. ಮೃತ ಕಪಾಲಿ ಮೋಹನ್ ಆಪ್ತನಾಗಿದ್ದ ನಾಗರಾಜ್, ವೈಯಾಲಿಕಾವಲ್, ಮಲ್ಲೇಶ್ವರಂ ಸುತ್ತಮುತ್ತಲಿನ ಉದ್ಯಮಿಗಳು ಮತ್ತು ವ್ಯಾಪಾರಸ್ಥರಿಗೆ ಸಾಲ ನೀಡಿದ್ದ. ದಿನದ ಲೆಕ್ಕದಲ್ಲಿ ಹೆಚ್ಚು ಬಡ್ಡಿ ವಸೂಲಿ ಮಾಡುತ್ತಿದ್ದು, ಒಂದು ವರ್ಷಕ್ಕೆ ತಾನು ಕೊಟ್ಟ ಸಾಲಕ್ಕೆ ಸುಮಾರು ಶೇ.60ರಷ್ಟು ಬಡ್ಡಿ ಪಡೆಯುತ್ತಿದ್ದ ಎನ್ನಲಾಗ್ತಿದೆ. ಅಲ್ಲದೇ ಕನ್ನಡದ ಕೆಲ ಸಿನಿಮಾಗಳಲ್ಲಿ ನಾಗರಾಜ್ ನಟನೆ ಮಾಡಿರುವುದಾಗಿ ತಿಳಿದು ಬಂದಿದೆ.
ಬಂಧಿತನಿಂದ 164 ಚೆಕ್, 84 ಪ್ರಾಮಿಸರಿ ನೋಟ್ಸ್, ಆಸ್ತಿ ದಾಖಲೆಗಳು ಹಾಗೂ 22 ಲಕ್ಷ ರೂ. ಜಪ್ತಿ ಮಾಡಲಾಗಿದೆ. ಈತನನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.