ETV Bharat / state

ಸಿಸಿಬಿಯಿಂದ ನಟಿ ರಾಗಿಣಿಗೆ ನೋಟಿಸ್: ಕಾನೂನು ತಜ್ಞರ ಮೊರೆ ಹೋದ ತುಪ್ಪದ ಬೆಡಗಿ

author img

By

Published : Sep 3, 2020, 10:28 AM IST

ಸ್ಯಾಂಡಲ್​ವುಡ್​ಗೆ ಡ್ರಗ್ಸ್​​ ಜಾಲದ ನಂಟು ಇರುವ ಆರೋಪಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ದ್ವಿವೇದಿಗೆ ಸಿಸಿಬಿ ನೋಟಿಸ್​ ನೀಡಿದೆ. ಈ ಹಿನ್ನೆಲೆ ಸದ್ಯ ತುಪ್ಪದ ಬೆಡಗಿ ರಾಗಿಣಿ ಕಾನೂನು ತಜ್ಞರ ಮೊರೆ ಹೋಗಿದ್ದಾರೆ.

ActActor Ragini or Ragini
ಕಾನೂನು ತಜ್ಞರ ಮೊರೆ ಹೋದ ರಾಗಿಣಿ

ಬೆಂಗಳೂರು: ಡ್ರಗ್ಸ್​ ಮಾಫಿಯಾ ತನಿಖೆಯನ್ನು ಸಿಸಿಬಿ ಚುರುಕುಗೊಳಿಸಿದೆ. ಸಿಸಿಬಿಯಿಂದ ನಟಿ ರಾಗಿಣಿಗೆ ನೋಟಿಸ್ ನೀಡಿರುವ ಹಿನ್ನೆಲೆ ಸದ್ಯ ಅವರು ಕಾನೂನು ತಜ್ಞರ ಮೊರೆ ಹೋಗಿದ್ದಾರೆ. ನೋಟಿಸ್ ತಲುಪಿದ ಕೂಡಲೇ ತಮ್ಮ ವಕೀಲರನ್ನು ದ್ವಿವೇದಿ ಸಂಪರ್ಕಿಸಿರುವ ಮಾಹಿತಿ ಲಭ್ಯವಾಗಿದೆ.

ವಕೀಲರ ಜೊತೆ ತಡರಾತ್ರಿಯೇ ಚರ್ಚೆ ನಡೆಸಿರುವ ರಾಗಿಣಿ ಅವರು ಸಿಸಿಬಿ ಪೊಲೀಸರ ವಿಚಾರಣೆಯಲ್ಲಿ ಏನು ಹೇಳಬೇಕು. ಯಾವ ರೀತಿಯ ಪ್ರಶ್ನೆಗಳು ಉದ್ಭವಿಸಬಹುದು ಎನ್ನುವುದು ಹೀಗೆ ನಾನಾ ಪ್ರಶ್ನೆಗಳಿಗೆ ವಕೀಲರ ಜೊತೆ ತಡ ರಾತ್ರಿವರೆಗೂ ರಾಗಿಣಿ ಚರ್ಚೆ ನಡೆಸಿದ್ದಾರೆ. ಸದ್ಯ ರಾಗಿಣಿ ಆಪ್ತ ರವಿಶಂಕರ್ ಅವರನ್ನ ವಶಕ್ಕೆ ಪಡೆದಿದ್ದು, ರವಿಶಂಕರ್ ಸಿಸಿಬಿ ಪೊಲೀಸರ ಬಳಿ ಹೇಳಿದ ಹೇಳಿಕೆಯಿಂದ ದೂರ ಉಳಿಯಬೇಕಾ, ಬೇಡ್ವಾ ಅನ್ನೋದರ ಬಗ್ಗೆಯೂ ಚರ್ಚೆ ನಡೆಸಿದ್ದಾರೆಂಬ ಮಾಹಿತಿ ಸಿಕ್ಕಿದೆ.

ಮತ್ತೊಂದೆಡೆ ನಟಿ ರಾಗಿಣಿ ಬೆಂಗಳೂರು ಬಿಟ್ಟು ಹೋಗಿದ್ದಾರೆಂಬ ಊಹಾಪೋಹಗಳು ಕೇಳಿಬಂದಿದ್ದವು. ಆದ್ರೆ ರಾಗಿಣಿ ದ್ವಿವೇದಿ ಬೆಂಗಳೂರಲ್ಲೇ ಇದ್ದಾರೆ ಅನ್ನೋ ವಿಚಾರ ಕೂಡ ಬೆಳಕಿಗೆ ಬಂದಿದೆ. ಅವರ ಮೊಬೈಲ್ ಟವರ್ ಲೋಕೇಷನ್ ಯಲಹಂಕದ ಜ್ಯುಡಿಷಿಯಲ್ ಲೇಔಟ್​​ನಲ್ಲಿ ಕಂಡು ಬರುತ್ತಿದೆ ಎಂದು ಸಿಸಿಬಿಯ ಮೂಲಗಳು ತಿಳಿಸಿವೆ.

ರಾಗಿಣಿ ಬೆಂಗಳೂರಲ್ಲಿ ಎರಡು ಮನೆ ಹೊಂದಿದ್ದು, ಹೆಚ್​​ಎಸ್​​ಆರ್ ಲೇಔಟ್ ನಲ್ಲಿ ಒಂದು ಫ್ಲ್ಯಾಟ್ ಹಾಗೂ ಯಲಹಂಕದ ಜ್ಯುಡಿಷಿಯಲ್ ‌ಲೇಔಟ್​​ನಲ್ಲಿರುವ ಒಂದು ಮನೆ ಹೊಂದಿದ್ದು, ಅಲ್ಲೇ ಇದ್ದಾರೆ ಎನ್ನಲಾಗ್ತಿದೆ. ಸದ್ಯಕ್ಕೆ ತನ್ನ ವಕೀಲರನ್ನು ಭೇಟಿಯಾಗಿ ಸಿಸಿಬಿ ಪೊಲೀಸರು ಕೊಟ್ಟ ಸಮಯಕ್ಕೆ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.