ETV Bharat / state

ಈಟಿವಿ ಭಾರತ ಫಲಶೃತಿ: ನಾಮಪತ್ರ ಹಿಂತೆಗೆಯದೇ ಚುನಾವಣಾ ಕಣದಲ್ಲಿ ಉಳಿದ ಅಭ್ಯರ್ಥಿಗಳು

ಆಂಜನೇಯ ದೇವಸ್ಥಾನದ ಜೀರ್ಣೋದ್ಧಾರದ ವಿಚಾರವಾಗಿ 35 ಲಕ್ಷಕ್ಕೆ ನಗರಸಭೆ ಸದಸ್ಯ ಸ್ಥಾನ ಹರಾಜಿಗೆ ಇಡಲಾಗಿತ್ತು. ಈ ಕುರಿತಂತೆ ಈಟಿವಿ ಭಾರತ ಸುದ್ದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸುವ ತೀರ್ಮಾನಕ್ಕೆ ಬಂದಿದ್ದಾರೆ.

Doddaballapur
ದೊಡ್ಡಬಳ್ಳಾಪುರ
author img

By

Published : Aug 26, 2021, 10:57 PM IST

ದೊಡ್ಡಬಳ್ಳಾಪುರ: ಆಂಜನೇಯ ದೇವಸ್ಥಾನದ ಜೀರ್ಣೋದ್ಧಾರದ ವಿಚಾರವಾಗಿ 35 ಲಕ್ಷಕ್ಕೆ ನಗರಸಭೆ ಸದಸ್ಯ ಸ್ಥಾನ ಹರಾಜಿಗೆ ಇಡಲಾಗಿತ್ತು. ಈ ಕುರಿತು ಈಟಿವಿ ಭಾರತ ಸುದ್ದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಚುನಾವಣಾ ಕಣದಲ್ಲಿ ಇಬ್ಬರು ಅಭ್ಯರ್ಥಿಗಳಿದ್ದು, ಸೆ.3 ರಂದು ನಗರಸಭೆ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ನಗರದ ಮುತ್ಸಂದ್ರ ವಾರ್ಡ್ -3 ರ ಸದಸ್ಯ ಸ್ಥಾನಕ್ಕಾಗಿ ಕಾಂಗ್ರೆಸ್​​​ನಿಂದ ದೀಪಾ ಕೃಷ್ಣಮೂರ್ತಿ, ಬಿಜೆಪಿಯಿಂದ ಸುಮಿತ್ರಾ ಆನಂದ್ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಶೋಭಾ ಶಶಿಧರ್ ಚುನಾವಣಾ ಕಣದಲ್ಲಿದ್ದರು. ನಿನ್ನೆ ರಾತ್ರಿ ಸಭೆ ಸೇರಿದ ವಾರ್ಡ್​ನ ಕೆಲವು ಮುಖಂಡರು ಆಂಜನೇಯ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸದಸ್ಯ ಸ್ಥಾನ ಹರಾಜು ಇಟ್ಟಿದ್ದರು.

ದೇವಸ್ಥಾನದ ಜೀರ್ಣೋದ್ಧಾರಕ್ಕೆ ಅತಿ ಹೆಚ್ಚು ಹಣ ಕೊಡುವ ಅಭ್ಯರ್ಥಿಯನ್ನು ಆಯ್ಕೆ ಮಾಡುವ ತೀರ್ಮಾನಕ್ಕೆ ಬರಲಾಗಿತ್ತು. 35 ಲಕ್ಷ ಕೊಟ್ಟು ಸದಸ್ಯ ಸ್ಥಾನ ಖರೀದಿ ಮಾಡಲು ಕಣದಲ್ಲಿರುವ ಅಭ್ಯರ್ಥಿ ಮುಂದೆ ಬಂದಿದ್ದರು. ಇನ್ನುಳಿದ ಇಬ್ಬರು ನಾಮಪತ್ರ ವಾಪಸ್ ಪಡೆಯುವ ತೀರ್ಮಾನಕ್ಕೆ ಬಂದಿದ್ದರು.

ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ ಸದಸ್ಯ ಸ್ಥಾನ ಹರಾಜಿಗೆ ಇಟ್ಟಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು. ಸದಸ್ಯ ಸ್ಥಾನ ಹರಾಜಿಟ್ಟಿರುವ ಬಗ್ಗೆ ಈಟಿವಿ ಭಾರತ ಸುದ್ದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಚುನಾವಣಾ ವೀಕ್ಷಕರು ಸ್ಥಳಕ್ಕೆ ಭೇಟಿ ನೀಡಿ ಸದಸ್ಯ ಸ್ಥಾನ ಹರಾಜಿಟ್ಟಿರುವ ಬಗ್ಗೆ ಎಚ್ಚರಿಕೆ ನೀಡುವುದರ ಜತೆ ಅರಿವು ಮೂಡಿಸಿದ್ದಾರೆ.

ಇಂದು ನಾಮಪತ್ರ ಹಿಂತೆಗೆಯಲು ಕೊನೆಯ ದಿನವಾಗಿದ್ದು, ಪಕ್ಷೇತರ ಅಭ್ಯರ್ಥಿಯಾದ ಶೋಭಾ ಶಶಿಧರ್ ನಾಮಪತ್ರ ಹಿಂತೆಗೆದುಕೊಂಡಿದ್ದಾರೆ. ಕಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ದೀಪಾ ಕೃಷ್ಣಮೂರ್ತಿ ಮತ್ತು ಬಿಜೆಪಿ ಅಭ್ಯರ್ಥಿ ಸುಮಿತ್ರಾ ಆನಂದ್ ಚುನಾವಣೆ ಎದುರಿಸುವ ತೀರ್ಮಾನಕ್ಕೆ ಬಂದಿದ್ದಾರೆ.

ಓದಿ: ದೇವಸ್ಥಾನದ ಜೀರ್ಣೋದ್ಧಾರಕ್ಕೆ ದೊಡ್ಡಬಳ್ಳಾಪುರ ನಗರಸಭೆ ಸದಸ್ಯ ಸ್ಥಾನ 35 ಲಕ್ಷ ರೂ. ಗೆ ಹರಾಜು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.