ETV Bharat / state

ಬಸ್​ ಹೇಗ್​ ಓಡಿಸಿದರೂ ಕಷ್ಟ.. ನಿಗಮಗಳ ಚಾಲಕರಿಗೆ ಬಿಎಂಟಿಸಿ ನೋಟಿಸ್ ಅಸ್ತ್ರ..!

ಆಮೆಗತಿಯಲ್ಲಿ ಬಸ್​ ಓಡಿಸಿದರೂ ಕಷ್ಟ, ಮೊಲದ ರೀತಿ ಓಡಿಸಿದರೂ ಸಂಕಷ್ಟ ಎಂಬ ಸ್ಥಿತಿ ನಿರ್ಮಾಣವಾಗಿದೆ‌.‌ ಯಾಕಂದ್ರೆ ಇಷ್ಟು ದಿನ ಬ್ರೇಕ್ ಹಾಕಿದ್ದಕ್ಕೆ ನೋಟಿಸ್ ಕೊಟ್ಟಿದ್ದ ನಿಗಮ ಈಗ ಬಸ್ ನಿಧಾನವಾಗಿ ಓಡಿಸಿದ್ರೂ ನೋಟಿಸ್​ ನೀಡೋಕೆ ಶುರುಮಾಡಿದೆ ಎಂಬ ಆರೋಪಗಳು ಕೇಳಿಬಂದಿವೆ.

bmtc-issued-notice-to-drivers-in-bengaluru
ಬಿಎಂಟಿಸಿ ಉಪಾಧ್ಯಕ್ಷ ಎಂ. ಆರ್ ವೆಂಕಟೇಶ್
author img

By

Published : Mar 1, 2022, 8:44 PM IST

ಬೆಂಗಳೂರು: ನಗರದಲ್ಲಿ ರಸ್ತೆಗಿಳಿದರೆ ಸಾಕು ಸಂಚಾರ ದಟ್ಟಣೆ ನೋಡಿಯೇ ಸಾಕಪ್ಪಾ ಸಹವಾಸ ಅನ್ನಿಸುತ್ತೆ. ಇಂತಹ ಟ್ರಾಫಿಕ್​ನಲ್ಲಿ ಬಸ್ ಓಡಿಸೋದೆ ದೊಡ್ಡ ಸವಾಲು. ಅದರಲ್ಲೂ ಬಿಎಂಟಿಸಿ ಬಸ್ ಓಡಿಸಬೇಕಾದ್ರೆ ಒಂದು ಹೆಜ್ಜೆ ಮುಂದೆ ಇರಬೇಕು. ಇಂತಹ ಬಿಎಂಟಿಸಿ ಡ್ರೈವರ್​​ಗಳಿಗೆ ನಿಗಮವೂ ಶಾಕಿಂಗ್ ಸುದ್ದಿಯನ್ನ ನೀಡ್ತಿದೆ.

ಆಮೆಗತಿಯಲ್ಲಿ ಬಸ್​ ಓಡಿಸಿದರೂ ಕಷ್ಟ, ಮೊಲದ ರೀತಿ ಓಡಿಸಿದರೂ ಸಂಕಷ್ಟ ಎಂಬ ಸ್ಥಿತಿ ನಿರ್ಮಾಣವಾಗಿದೆ‌.‌ ಯಾಕಂದ್ರೆ ಇಷ್ಟು ದಿನ ಬ್ರೇಕ್ ಹಾಕಿದ್ದಕ್ಕೆ ನೋಟಿಸ್ ಕೊಟ್ಟಿದ್ದ ನಿಗಮ ಈಗ ಬಸ್ ನಿಧಾನವಾಗಿ ಓಡಿಸಿದ್ರೂ ನೋಟಿಸ್​ ನೀಡೋಕೆ ಶುರುಮಾಡಿದೆ ಎಂಬ ಆರೋಪಗಳು ಕೇಳಿಬಂದಿವೆ.

ಬಿಎಂಟಿಸಿ ಉಪಾಧ್ಯಕ್ಷ ಎಂ. ಆರ್ ವೆಂಕಟೇಶ್ ಮಾತನಾಡಿದರು

ಶಿಸ್ತುಕ್ರಮದ ಎಚ್ಚರಿಕೆ.. ಹೌದು, ಈ ಮೊದಲು ಡ್ರೈವರ್ ಹೆಚ್ಚು ಬ್ರೇಕ್ ಹಿಡಿದ ಅನ್ನೋ ಕಾರಣಕ್ಕೆ ನಿಗಮ ನೋಟಿಸ್​ ನೀಡಿತ್ತು. ಈಗ ಒಂದು ಹೆಜ್ಜೆ ಮುಂದೆ ಹೋಗಿ ನಗರದಲ್ಲಿ ಬಸ್ ನಿಧಾನವಾಗಿ ಓಡಿಸಿದ್ದಕ್ಕೆ ಡ್ರೈವರ್​ಗಳಿಗೆ ನೋಟಿಸ್​ ನೀಡಿದೆ. ಬಸ್ ನಿಧಾನಗತಿಯ ಚಾಲನೆ ಎಂಬ ಕಾರಣ ನೀಡಿ ಅನೇಕ ಡ್ರೈವರ್​​ಗಳಿಗೆ ನಿಗಮ ಶಿಸ್ತುಕ್ರಮದ ಎಚ್ಚರಿಕೆ ನೀಡಿ ನೋಟಿಸ್​ ಕಳಿಸಿದೆಯಂತೆ.

ಚಾಲಕರಿಗೆ ಸಂಕಷ್ಟ.. ನಿಗಮದ ಈ ವರ್ತನೆಗೆ ಡ್ರೈವರ್​ಗಳು ಈ ಕೆಲಸವೇ ಸಾಕಪ್ಪ ಅನ್ನೋ ಹಂತಕ್ಕೆ ಬಂದಿದ್ದಾರೆ. ನಗರದ ಟ್ರಾಫಿಕ್ ನಡುವೆ ಬಸ್​ನ್ನು ಸ್ಪೀಡಾಗಿ ಓಡಿಸೋದಾದ್ರೂ ಹೇಗೆ?. ಅದೂ ಅಲ್ಲದೇ ಬಸ್ ವೇಗವಾಗಿ ಓಡಿಸಿ ಅಪಘಾತವಾದ್ರೆ ಯಾರು ಹೊಣೆ. ನಿಗಮ ಯಾಕೀತರ ಬೇಜವಾಬ್ದಾರಿತನದಿಂದ ನಡೆದುಕೊಳ್ತಿದೆ ಅಂತ ಬಿಎಂಟಿಸಿ ಡ್ರೈವರ್​ಗಳು ಕಂಗಾಲಾಗಿ ಹೋಗಿದ್ದಾರೆ.

ನಗರದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹಳೆಯ ಬಸ್​ಗಳಿವೆ. ಈ ಬಸ್​ಗಳೆಲ್ಲ 9 ರಿಂದ 10 ಲಕ್ಷ ಕಿಲೋಮೀಟರ್ ಓಡಿ ಡಕೋಟಾ ಎಕ್ಸ್​ಪ್ರೆಸ್​ನಂತಾಗಿವೆ. ಈ ಬಸ್​ಗಳಲ್ಲಿ ಯಾವಾಗ ಬ್ರೇಕ್ ಕೈಕೊಡುತ್ತೋ, ಯಾವಾಗ ಕೆಟ್ಟು ನಿಲ್ಲುತ್ತೋ ಗೊತ್ತಿಲ್ಲವಂತೆ.

ಡ್ರೈವರ್ ಮೇಲೆ ಕೇಸ್.. ಹೀಗಿದ್ದಾಗ ಬಸ್ ವೇಗದ ಚಾಲನೆ ಹೇಗೆ? ಒಂದು ವೇಳೆ ಕಂಡೀಷನ್​ನಲ್ಲಿ ಇಲ್ಲದ ಬಸ್​ಗಳನ್ನು ವೇಗವಾಗಿ ಓಡಿಸಿ ಅಪಘಾತ ಸಂಭವಿಸಿದ್ರೆ ಮತ್ತೆ ಡ್ರೈವರ್ ಮೇಲೆ ಕೇಸ್ ಹಾಕಲಾಗುತ್ತೆ. ಅಲ್ಲದೇ, ಬೇರೆಯವರ ಪ್ರಾಣಕ್ಕೂ ಅಪಾಯ ಬಂದೊದಗುತ್ತೆ. ಹೀಗಾಗಿ, ನಿಗಮ ಯಾಕೀತರ ಅವೈಜ್ಞಾನಿಕವಾಗಿ ನೋಟಿಸ್ ನೀಡ್ತಿದೆ ಅನ್ನೋದು ಅರ್ಥವಾಗದ್ದಾಗಿದೆ ಅಂತಾರೆ ಚಾಲಕರು.

ಆದರೆ, ಈ ಬಗ್ಗೆ ಬಿಎಂಟಿಸಿ ಆಡಳಿತ ಮಂಡಳಿಯನ್ನ ಕೇಳಿದರೆ ಹೇಳೋದು, ಡಿಪೋದಿಂದ ಯಾವುದೇ ಬಸ್ಸು ರಸ್ತೆಗಿಳಿಯುವ ಮುನ್ನ‌ ಕನಿಷ್ಠ ತಪಾಸಣೆ ಬಳಿಕವೇ ಓಡಿಸುವುದು. ಎಲ್ಲ ಟ್ರಿಪ್​ನಲ್ಲೂ ಪ್ರತಿ ಬಸ್​ ಇಷ್ಟೇ ಟ್ರಿಪ್ ಹಾಗೂ ಇಷ್ಟೇ ಕಿ.ಮೀ. ಓಡಿಸಬೇಕೆಂಬ ನಿಯಮ ಇದೆ. ಕೆಲವು ಕಾರಣದಿಂದ ಕೆಲ ಚಾಲಕರು ಟ್ರಿಪ್ ಗಳನ್ನ ಮುಗಿಸದ ಕಾರಣಕ್ಕೆ ಇಂತಹ ದೂರುಗಳು ಬಂದಿರಬಹುದು.

ಯಾವುದೇ ಸಿಬ್ಬಂದಿಗೆ ಕಿರುಕುಳವನ್ನ ಕೊಡ್ತಿಲ್ಲ. ನೋಟಿಸ್ ನೀಡುವ ಕೆಲಸವನ್ನ ಅಧಿಕಾರಿಗಳು ಮಾಡುವುದಿಲ್ಲ. ಕರ್ತವ್ಯಲೋಪ ಎಸಗಿದ್ದರೆ ಕಾರಣ ಕೇಳಿ ನೋಟಿಸ್ ಕೊಡುವುದು ಈ ಹಿಂದಿನಿಂದಲೂ ಬಂದಿದೆ ಅಂತ ಬಿಎಂಟಿಸಿ ಉಪಾಧ್ಯಕ್ಷ ವೆಂಕಟೇಶ್ ತಿಳಿಸಿದ್ದಾರೆ.

ಯಾವುದೇ ದುರುದ್ದೇಶ ಇರೋದಿಲ್ಲ.. ಕೋವಿಡ್​ನಿಂದಾಗಿ ಸಂಸ್ಥೆ ಆರ್ಥಿಕ ಸಂಕಷ್ಟದಲ್ಲಿದ್ದು, ಚಾಲಕರು ಓಡಿಸುವ ನಿರ್ದಿಷ್ಟ ಮಾರ್ಗದಲ್ಲಿ ರೆವಿನ್ಯೂ ಬರಬೇಕು. ಅದು ಬರದೇ ಇದ್ದಾಗ, ಕಮ್ಮಿ ಆದಾಗ ಅಧಿಕಾರಿಗಳು ಪ್ರಶ್ನೆ ಮಾಡುತ್ತಾರೆ. ಇದರಿಂದ ಯಾವುದೇ ದುರುದ್ದೇಶ ಇರೋದಿಲ್ಲ ಎಂದು ಸ್ಪಷ್ಟಪಡಿಸಿದರು.

ಒಟ್ಟಾರೆ, ಯಾರಾದ್ರೂ ವಾಹನ ಚಲಾಯಿಸಬೇಕಾದ್ರೆ ನಿಧಾನವಾಗಿ ಓಡಿಸಪ್ಪ ಅನ್ನೋದು ರೂಢಿ. ಆದರೆ, ಬಿಎಂಟಿಸಿಯಲ್ಲಿ ಮಾತ್ರ ಹಾಗಿಲ್ಲ. ನಿಧಾನವಾಗಿ ಚಲಾಯಿಸಿದ್ರೆ ನಿಗಮ ವಿಧಿಸೋ ಶಿಸ್ತುಕ್ರಮವನ್ನ ಎದುರಿಸಬೇಕು. ವೇಗವಾಗಿ ಓಡಿಸಿ ಅಪಾಯವಾದ್ರೂ ಶಿಕ್ಷೆಗೆ ರೆಡಿಯಾಗಿರಬೇಕು. ಹೀಗಾಗಿ, ಬಿಎಂಟಿಸಿಯ ಸ್ಟಾಂಡರ್ಡ್ ಡ್ರೈವಿಂಗ್ ನಿಯಮ ಅರ್ಥವಾಗದೇ ನಿಗಮದ ಸಿಬ್ಬಂದಿ ತಲೆಕೆಡಿಸಿಕೊಂಡಿದ್ದಾರೆ.

ಓದಿ: ಮೇಕೆದಾಟು ಪಾದಯಾತ್ರೆ ಹಿಂದೆ ರಾಜಕೀಯ ಉದ್ದೇಶ ಇಲ್ಲ: ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.