ETV Bharat / state

ಶೋಚನೀಯ ಸ್ಥಿತಿಗೆ ತಲುಪಿದೆಯಾ ಬಿಎಂಟಿಸಿ: ಸಂಬಳ ನಂಬಿಕೊಂಡು ಬದುಕೋರ ಸ್ಥಿತಿ ಅಯೋಮಯ! - ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಕ್ಷರಶಃ ಮುಳುಗುವ ಹಡಗಿನಂತಾಗಿದೆ

ತಿಂಗಳ ಮೊದಲ ವಾರದಲ್ಲಿ ಕಾರ್ಮಿಕರಿಗೆ ಸಂಬಳ ಭತ್ಯೆ ಸಿಗುತ್ತಿದ್ದ ಪರಿಸ್ಥಿತಿ ಈಗ ಇಲ್ಲವಾಗಿದೆ. ಕಳೆದ ಕೆಲ ತಿಂಗಳಿಂದ ಕಾರ್ಮಿಕರಿಗೆ ಭತ್ಯೆ ಇಲ್ಲ. ತಿಂಗಳ ಸಂಬಳ ನಿಯಮಿತವಾಗಿ ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಸಂಪ್ರದಾಯ ಜೂನ್ ತಿಂಗಳು ಸಹ ಮುಂದುವರೆಯಲಿದೆ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಗಳು ತಿಳಿಸಿದ್ದಾರೆ.

ಶೋಚನೀಯ ಸ್ಥಿತಿಗೆ ತಲುಪಿದೆಯಾ ಬಿಎಂಟಿಸಿ
ಶೋಚನೀಯ ಸ್ಥಿತಿಗೆ ತಲುಪಿದೆಯಾ ಬಿಎಂಟಿಸಿ
author img

By

Published : Jun 3, 2022, 7:29 PM IST

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಕ್ಷರಶಃ ಮುಳುಗುವ ಹಡಗಿನಂತಾಗಿದೆ. 2 ಸಾವಿರ ಕೋಟಿ ಸಾಲದ ಸುಳಿಯಲ್ಲಿ ಸಿಲುಕಿದೆ. ಸರ್ಕಾರ ದೊಡ್ಡ ಮನಸ್ಸು ಮಾಡಿ ನೆರವಿಗೆ ಧಾವಿಸದಿದ್ದರೆ ಬಿಎಂಟಿಸಿ ಪರಿಸ್ಥಿತಿ ಶೋಚನೀಯವಾಗಲಿದೆ ಎಂದು ತಿಳಿದುಬಂದಿದೆ.

ಖಾಸಗೀಕರಣ ಅಥವಾ ಮುಚ್ಚುವ ಭೀತಿಗೆ ಸಿಲುಕುವುದರಲ್ಲಿ ಅನುಮಾನವೇ ಇಲ್ಲ. ಇದರ ದುಷ್ಪರಿಣಾಮಕ್ಕೆ ಕಾರ್ಮಿಕರು ತುತ್ತಾಗುತ್ತಿರುವುದು ವಿಪರ್ಯಾಸ ಎನ್ನಲಾಗುತ್ತಿದೆ. ತಿಂಗಳ ಮೊದಲ ವಾರದಲ್ಲಿ ಕಾರ್ಮಿಕರಿಗೆ ಸಂಬಳ ಭತ್ಯೆ ಸಿಗುತ್ತಿದ್ದ ಪರಿಸ್ತಿತಿ ಈಗ ಇಲ್ಲವಾಗಿದೆ. ಕಳೆದ ಕೆಲ ತಿಂಗಳಿಂದ ಕಾರ್ಮಿಕರಿಗೆ ಭತ್ಯೆ ಇಲ್ಲ. ತಿಂಗಳ ಸಂಬಳ ನಿಯಮಿತವಾಗಿ ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಸಂಪ್ರದಾಯ ಜೂನ್ ತಿಂಗಳು ಸಹ ಮುಂದುವರೆಯಲಿದೆ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಗಳು ತಿಳಿಸಿದ್ದಾರೆ.

ಖಜಾನೆಯಲ್ಲಿ ದುಡ್ಡಿಲ್ಲ: ಆಡಳಿತ ಮಂಡಳಿಯೇ ಈ ಬಾರಿ ಬಿಎಂಟಿಸಿ ಕಾರ್ಮಿಕರಿಗೆ ಸಂಬಳ ಕೊಡುವುದಕ್ಕೆ ಖಜಾನೆಯಲ್ಲಿ ದುಡ್ಡಿಲ್ಲ ಎನ್ನುವ ಅಸಹಾಯಕತೆ ತೋಡಿಕೊಂಡಿದೆ. ದಿನಂಪ್ರತಿ ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣಿಸುತ್ತಿರುವ ಪ್ಯಾಸೆಂಜರ್ಸ್​​​ಗಳ ಸಂಖ್ಯೆ ಕ್ರಮೇಣ ಸುಧಾರಣೆಯಾಗುತ್ತಿದೆ. ಬಿಎಂಟಿಸಿಗಳಿಕೆಯೂ ಹಳಿಗೆ ಬರುತ್ತಿದೆ. ಎಲ್ಲವೂ ಸರಿಯಾಗಿರುವಾಗ ಸಂಬಳ ಕೊಡುವುದಕ್ಕೆ ಏನು ತೊಂದರೆ ಎಂದು ಸಿಬ್ಬಂದಿ ಕೇಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಆರ್ಥಿಕ ಅಶಿಸ್ತಿನ ಪ್ರಭಾವ: ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದ ಅವ್ಯವಸ್ಥೆಯ ಪರಿಣಾಮವಾಗಿ 'ಆರ್ಥಿಕ ಅಶಿಸ್ತಿ'ನ ಪ್ರಭಾವ ಈಗಲೂ ಮುಂದುವರೆದುಕೊಂಡು ಬಂದಿದೆ. ಹಾಗಾಗಿ ಎಲ್ಲವೂ ಸರಿಯಾಗುತ್ತಿರುವಾಗಲೇ ಆರ್ಥಿಕ ಹೊಡೆತದ ಕಾರಣಕ್ಕೆ ಸಂಬಳದ ದಿನಾಂಕದಲ್ಲೂ ಏರುಪೇರಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಶೇಕಡಾ 65 ರಷ್ಟು ವರಮಾನ ಇಂಧನಕ್ಕೆ: ಕಾರ್ಮಿಕರಿಗೆ ಕೊಡುವುದಕ್ಕೆ ಖಜಾನೆಯಲ್ಲಿ ಹಣವೇ ಇಲ್ಲ. ಗಳಿಕೆಯ ಶೇಕಡಾ 65 ರಷ್ಟು ಪ್ರಮಾಣ ಇಂಧನಕ್ಕೆ ಹೋಗುತ್ತಿದೆ. ಮಾಡಿಕೊಂಡಿರುವ ಸಾಲಕ್ಕೆ ಬಡ್ಡಿ ಕಟ್ಟುವುದಕ್ಕೆ ಮತ್ತೊಂದಿಷ್ಟು ಹಣ ಖರ್ಚಾಗುತ್ತಿದೆ. ಉಳಿದಿದ್ದರಲ್ಲಿ ಬಸ್​​ಗಳ ನಿರ್ವಹಣೆ ಹಾಗೂ ಇತರ ಖರ್ಚುಗಳನ್ನು ನೋಡಿಕೊಳ್ಳಬೇಕಾಗಿದೆ. ಈ ಬಾರಿಯೇ 50 ಕೋಟಿಗೂ ಹೆಚ್ಚು ಹಣದ ಕೊರತೆ ಎದುರಾಗಿರುವುದರಿಂದ ಸಂಬಳ ಹೇಗೆ ಕೊಡೋದಪ್ಪ ಎಂದು ತಲೆ ಮೇಲೆ ಕೈ ಹೊತ್ತು ಕೂತಿದ್ದೇವೆ ಎನ್ನುತ್ತಾರೆ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು.

2 ಸಾವಿರ ಕೋಟಿಯಷ್ಟು ಸಾಲ : ಸಂಸ್ಥೆ ಆರ್ಥಿಕ ನಷ್ಟದಲ್ಲಿದೆ. ಸುಮಾರು 2 ಸಾವಿರ ಕೋಟಿಯಷ್ಟು ಸಾಲ ಸಂಸ್ಥೆಯ ಮೇಲಿದೆ. ಮಾಡಿಕೊಂಡಿರುವ ಸಾಲಕ್ಕೆ ಅಸಲಿನ ಮಾತು ಒತ್ತಟ್ಟಿಗಿರಲಿ ಬಡ್ಡಿ ಕಟ್ಟುವುದಕ್ಕೆ ಸಾಧ್ಯವಾಗುತ್ತಿಲ್ಲ. ಸರ್ಕಾರದಿಂದ ನೆರವು ಕೇಳಿದ್ದೇವೆ. ಅವರಿಂದ ಸಹಾಯ ಸಿಗದ ಹೊರತು ಸಂಸ್ಥೆ ನಡೆಸೋದು ಕಷ್ಟವಾಗಲಿದೆ. ಸಾಲ ತೀರಿಸದೇ ಬೇರೆ ವಿಧಿಯಿಲ್ಲ. ಗಳಿಕೆಯಲ್ಲಿ ಸುಧಾರಣೆಯಾಗುತ್ತಿದ್ದರೂ ಹಳೆಯ ಸಾಲದ ಹೊಡೆತಗಳು ಈಗ ಬಾಧಿಸಲಾರಂಭಿಸಿವೆಯಂತೆ.

ಇವತ್ತು, ನಾಳೆ ಸಂಬಳ ಆಗಬಹುದು ಎಂದು ಕಾದು ಕೂತಿರುವ ಸಾರಿಗೆ ಕಾರ್ಮಿಕರು ಹಾಗೂ ಕುಟುಂಬಗಳಿಗೆ ಇದು ಆಘಾತಕಾರಿಯಾಗಿ ಪರಿಣಮಿಸಿದರೂ ಆಶ್ಚರ್ಯವಿಲ್ಲ. 2 ಸಾವಿರ ಕೋಟಿಯಷ್ಟು ಸಾಲದ ಹೊರೆಗೆ ಕುಗ್ಗಿ ಹೋಗಿರುವ ಬಿಎಂಟಿಸಿಯನ್ನು ಕೈ ಹಿಡಿದು ಎತ್ತದಿದ್ದರೆ ಕೆಲವೇ ದಿನಗಳಲ್ಲಿ ಸಂಸ್ಥೆ ಶಾಶ್ವತವಾಗಿ ಬೀಗ ಜಡಿದುಕೊಳ್ಳುವುದರಲ್ಲಿ ಅನುಮಾನವಿಲ್ಲ.

ಇದನ್ನೂ ಓದಿ: ಸೋನಿಯಾ ಗಾಂಧಿ ಬೆನ್ನಲ್ಲೇ ಪ್ರಿಯಾಂಕಾ ವಾದ್ರಾಗೂ ಕೋವಿಡ್​ ಪಾಸಿಟಿವ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.