ETV Bharat / state

ಬ್ಲ್ಯಾಕ್ ಫಂಗಸ್​ಗೆ ಕರುನಾಡು ತತ್ತರ; 3,000ಕ್ಕೂ ಅಧಿಕ ಜನರಲ್ಲಿದೆ ಈ ಸೋಂಕು

author img

By

Published : Jun 28, 2021, 9:35 AM IST

Updated : Jun 28, 2021, 12:03 PM IST

ಕೋವಿಡ್ ಎರಡನೇ ಅಲೆ ತಣ್ಣಗಾಗುತ್ತಿದ್ದಂತೆ ರಾಜ್ಯಾದ್ಯಂತ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಉಲ್ಬಣಗೊಳ್ಳುತ್ತಿವೆ. ಹಾಗಾಗಿ, ಮತ್ತೊಂದು ಆರೋಗ್ಯ ಸವಾಲು ಎದುರಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

Black Fungus increases
ಬ್ಲ್ಯಾಕ್ ಫಂಗಸ್ ಹೆಚ್ಚಳ

ಬೆಂಗಳೂರು: ಕೊರೊನಾ ಸೋಂಕಿತರು ಹಾಗೂ ಡಯಾಬಿಟಿಸ್ ರೋಗಿಗಳನ್ನು ಕಾಡುವ ಶಿಲೀಂಧ್ರ ಸೋಂಕು (ಬ್ಲ್ಯಾಕ್ ಫಂಗಸ್) ಪ್ರಕರಣಗಳು ದಿನೇ ದಿನೇ ಹೆಚ್ಚಳವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಈ ರೋಗ ಕಾಲಿಟ್ಟಿದೆ.

ಪ್ರಸ್ತುತ ರಾಜ್ಯಾದ್ಯಂತ 3,232 ಜನರಿಗೆ ಬ್ಲ್ಯಾಕ್ ಅಥವಾ ಮ್ಯುಕೊರ್ಮೈಕೋಸಿಸ್ (Mucormycosis) ಸೋಂಕು ಇರುವುದು ಪತ್ತೆಯಾಗಿದೆ. ಸೋಂಕಿತ 2,967 ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 262 ಮಂದಿ ಅಸುನೀಗಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ 1,039 ಜನರಿಗೆ ಸೋಂಕು ಇರುವುದು ವರದಿಯಾಗಿದೆ. 81 ಜನರು ಮೃತಪಟ್ಟಿದ್ದಾರೆ.‌ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 200, ಬೌರಿಂಗ್ ಆಸ್ಪತ್ರೆಯಲ್ಲಿ 277, ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಇಬ್ಬರಿಗೆ ಚಿಕಿತ್ಸೆ ನೀಡಲಾಗ್ತಿದೆ. 855 ಜನರು‌ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಮಾರು 156 ಸೋಂಕಿತರು ಚಿಕಿತ್ಸೆ ನಡುವೆಯೂ ಡಿಸ್ಜಾರ್ಜ್ (ಡಿಸ್ಜಾರ್ಜ್ ಅಗೈನೆಸ್ಟ್ ಮೆಡಿಕಲ್ ಅಡ್ವೈಸ್ (DAMA) ಆಗಿದ್ದಾರೆ. ಅಲ್ಲದೆ ರಾಜ್ಯಾದ್ಯಂತ ಇಲ್ಲಿವರೆಗೆ 387 ಜನರು ಚೇತರಿಸಿಕೊಂಡಿದ್ದಾರೆ.

100ರ ಗಡಿದಾಟಿದ ಜಿಲ್ಲೆಗಳು:

ಬಾಗಲಕೋಟೆ - 118

ಬಳ್ಳಾರಿ - 127

ಬೆಳಗಾವಿ - 159

ಚಿತ್ರದುರ್ಗ - 131

ದಾವಣಗೆರೆ - 104

ಧಾರವಾಡ - 267

ಕಲಬುರಗಿ - 183

ಮೈಸೂರು - 112

ರಾಯಚೂರು - 114

ವಿಜಯಪುರ - 190

ಕಡಿಮೆ ಪ್ರಕರಣವಿರುವ ಜಿಲ್ಲೆಗಳು:

ಯಾದಗಿರಿ - 3

ಉತ್ತರಕನ್ನಡ - 8

ರಾಮನಗರ - 9

ಕೊಡುಗು - 1

ಚಿಕ್ಕಮಗಳೂರು - 5

ನೂರರ ಸಮೀಪವಿರುವ ಜಿಲ್ಲೆಗಳು:

ಕೋಲಾರ - 93

ದಕ್ಷಿಣ ಕನ್ನಡ - 89

ಬೆಂಗಳೂರು ಗ್ರಾಮಾಂತರ - 65

ಗದಗ - 65

ಹಾವೇರಿ -60

ಶಿವಮೊಗ್ಗ - 56

ತುಮಕೂರು - 46

ಕೊಪ್ಪಳ - 38

ಹಾಸನ -36

ಬೀದರ್ - 30

ಉಡುಪಿ - 30

ಮಂಡ್ಯ - 21

ಚಿಕ್ಕಬಳ್ಳಾಪುರ - 21

ಚಾಮರಾಜನಗರ - 12

ಇದನ್ನೂ ಓದಿ: Black Fungus: ಹುಬ್ಬಳ್ಳಿ ಕಿಮ್ಸ್​ನಲ್ಲಿ 120 ಜನರಿಗೆ ಆಪರೇಷನ್: ಕೆಲವರಿಗೆ ಶಾಶ್ವತ ದೃಷ್ಟಿಹೀನತೆ!

Last Updated : Jun 28, 2021, 12:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.