ಆನೇಕಲ್: ಮಹಿಷಾಸುರ ಚರಿತ್ರೆಯನ್ನು ಸಮಾಜಕ್ಕೆ ಪರಿಚಯಿಸಬೇಕು. ಮಹಿಷ ರಾಕ್ಷಸನಲ್ಲ, ಮೈಸೂರ ಪ್ರಾಂತ್ಯ ಕಟ್ಟಿ ಆಳಿದವರು ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ವಾದ) ಮುಖಂಡ ಎಂಸಿ ಹಳ್ಳಿವೇಣು ಹೇಳಿದ್ದಾರೆ.
ಇಲ್ಲಿನ ಸರ್ಜಾಪುರದಲ್ಲಿ ಮಹಿಷ ದಸರಾ ಅಂಗವಾಗಿ ಬೈಕ್ ಜಾಥಾ ಹಮ್ಮಿಕೊಂಡ ಕಾರ್ಯಕ್ರದಲ್ಲಿ ಅವರು ಮಾತನಾಡಿದರು. ಮೈಸೂರಿನಲ್ಲಿ ನಡೆದ ಮಹಿಷ ದಸರಾವನ್ನು ಸಂಸದ ಪ್ರತಾಪ್ ಸಿಂಹ ತಡೆದಿದ್ದಾರೆ. ಕೋಮು ಗಲಭೆ ಸೃಷ್ಟಿಸುವ, ಉಗ್ರಗಾಮಿಯಂತೆ ಸಂಸದರು ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಬೌದ್ದ ಬಾವುಟ ಹಿಡಿದು ಮಹಿಷಾಸುರ ವೇಷಧಾರಿಯೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.