ಬೆಂಗಳೂರು: ಮೊಬೈಲ್ ಸುಲಿಗೆ, ಕಳ್ಳತನ ಮಾಡಿ ಅದನ್ನ ಮಾರಟ ಮಾಡುತ್ತಿದ್ದ ಅಂತರರಾಜ್ಯ ಆರೋಪಿಗಳ ಜಾಲ ಪತ್ತೆ ಮಾಡುವಲ್ಲಿ ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಟೀಂ ಯಶಸ್ವಿಯಾಗಿದ್ದಾರೆ.
ಕಿಜರ್ ಪಾಷಾ, ಆಸಿಫ್ ಖಾನ್, ಆರಿಫ್ ಖಾನ್ , ನವಾಜ್ ಶರಿಫ್, ಅಫ್ಜಲ್ ಶರೀಫ್, ಅಸ್ಲಾಂ ಬಿನ್, ಕಲೀಂ ಬಿಮ್, ಸಲ್ಮಾನ್ ಬಿನ್, ಸೈಯದ್ ಅಕ್ಬರ್ ಬಂಧಿತ ಆರೋಪಿಗಳು.
ಸಿಲಿಕಾನ್ ಸಿಟಿಯಲ್ಲಿ ಕಳೆದ ಕೆಲವು ವರ್ಷಗಳಿಂದ ನಗರದ ವಿವಿಧ ಕಡೆಗಳಲ್ಲಿ ಈ ತಂಡ ರಸ್ತೆಯಲ್ಲಿ ಓಡಾಡುವ ಸಾರ್ವವಜನಿಕರ ಮೊಬೈಲ್ ಗಳನ್ನ ಟಾರ್ಗೆಟ್ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ, ಹಾಗೆ ಮೈಂಡ್ ಡೈವರ್ಟ್ ಮಾಡಿ ಕಳ್ಳತನ ಮಾಡಿರುತ್ತಾರೆ. ಈ ವಿಚಾರ ಪತ್ತೆ ಮಾಡಲು ಕೇಂದ್ರ ವಿಭಾಗದ ಡಿಸಿಪಿ ಪೊಲೀಸ್ ಇನ್ಸ್ಪೆಕ್ಟರ್ಗಳಾದ ರಫೀಕ್ ಕೆ.ಎಂ, ತನ್ವೀರ್, ಜಗದೀಶ್ ಸೇರಿದಂತೆ ಒಟ್ಟು 13ಪಿಎಸ್ಐಗಳ 45 ತಂಡ ರಚನೆ ಮಾಡಿ ಆರೋಪಿಗಳ ಪತ್ತೆ ಮಾಡಿದ್ದಾರೆ.
ಆರೋಪಿಗಳು ಆ್ಯಪಲ್ ಕಂಪನಿ, ಸ್ಯಾಮಸಂಗ್, ಎಂಐ, ವಿವೋ, ಓಪ್ಪೋ, ನೋಕಿಯಾ, ಹೆಚ್ಟಿಸಿ, ಒನ್ ಪ್ಲಸ್, ರೆಡ್ ಮಿ, ಹಾನರ್, ಲಿನೋವೋ, ಮೈಕ್ರೋಮ್ಯಾಕ್ಸ್ ಹಾಗೂ ಇತರೆ ಕಂಪನಿಯ ಒಟ್ಟು 563 ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳಾದ ಕಿಜರ್ ಪಾಷ, ನವಾಜ್ ಷರೀಫ್ , ಕಲೀಂ ಸಲ್ಮಾನ್ ನಗರದ ಹಲವೆಡೆ ಮೋಟಾರ್ ಸೈಕಲ್ ಮತ್ತು ಆಟೋ ರಿಕ್ಷಾ ಬಳಸಿ ಸಾರ್ವಜನಿಕರಿಂದ ಮೊಬೈಲ್ ಸುಲಿಗೆ ಮತ್ತು ಕಳ್ಳತನ ಮಾಡಿ ಉಳಿದ ಆರೋಪಿಗಳಾದ ಆರಿಫ್ ಖಾನ್, ಆಸಿಫ್ ಖಾನ್, ಅಸ್ಲಾಮ್ ಹಾಗೂ ಸೈಯದ್ ಅಕ್ಬರ್ ಅವರಿಗೆ ಕಡಿಮೆ ಬೆಲೆಗೆ ಮಾರಟ ಮಾಡಿದ್ರು. ನಂತ್ರ ಈ ಆರೋಪಿಗಳು ಮೊಬೈಲ್ ಡೇಟಾವನ್ನು ಫ್ಲಾಶ್ ಮಾಡಿ ನಂತ್ರ ಮಾತ್ತೊಬ್ಬ ಆರೋಪಿ ಜಮೀರ್ ಖಾನ್ ಹೈದಾರಬಾದ್ ನಲ್ಲಿರೋನಿಗೆ ಮಾರಾಟಮಾಡುತ್ತಿದ್ದು ಸದ್ಯ ಕೇಂದ್ರ ವಿಭಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಅಪರಾಧಿತರ ಹಿನ್ನೆಲೆ : ಆರೋಪಿಗಳ ಪೈಕಿ ಅಸ್ಲಾಂ ಗಿರಿನಗರ ,ಮಾರತ್ ಹಳ್ಳಿ, ಜೆ.ಜೆನಗರ, ಎಸ್. ಆರ್ ನಗರ ಪೊಲೀಸ್ ಠಾಣೆಯಲ್ಲಿ ಸುಲಿಗೆ, ಕಳವು ಪ್ರಕರಣ, ಮಟಕಾ, ಜೂಜಾಟ, ಗಾಂಜಾ ಹೀಗೆ ಹಲವಾರು ಪ್ರಕರಣದಲ್ಲಿ ಭಾಗಿಯಾಗಿದ್ದ. ಉಳಿದ ಆರೋಪಿಗಳು ಮೊಬೈಲ್ ಹಾಗೂ ಸುಳಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದರು ಅನ್ನೋದು ತಿಳಿದು ಬಂದಿದ್ದು, ವಿಚಾರಣೆ ಮುಂದುವರೆದಿದೆ.