ಬೆಂಗಳೂರು: ಅನರ್ಹತೆ ಭೀತಿಯಲ್ಲಿರುವ ಶಾಸಕರು ಭಯಪಡುವ ಅಗತ್ಯವಿಲ್ಲ, ಸುಪ್ರೀಂಕೋರ್ಟ್‌ಗೆ ಅನರ್ಹತೆ ರದ್ದು ಮಾಡುವ ಅಧಿಕಾರವಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ರು.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಹೋಗುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕರನ್ನು ಸ್ಫೀಕರ್ ಅನರ್ಹತೆಗೊಳಿಸಿದ್ರೆ ಒಂದು ಗಂಟೆಯಲ್ಲೇ ಅರ್ನಹತೆ ರದ್ದು ಮಾಡುವ ಅಧಿಕಾರ ಸುಪ್ರೀಂಕೋರ್ಟ್‌ಗೆ ಇದೆ ಎಂದು ಹೇಳಿದ್ರು.
ಸ್ಫೀಕರ್ ಕರ್ನಾಟಕ ವಿಧಾನಸಭೆಗೆ ಸುಪ್ರೀಂ, ಆದ್ರೆ ಸುಪ್ರೀಂಕೋರ್ಟ್ ದೇಶಕ್ಕೆ ಸುಪ್ರೀಂ. ನಾವು ಮೂರು ಜನ ಕರ್ನಾಟಕ ಸ್ಪೀಕರ್ ಮಾಡಿದ್ದ ಅನರ್ಹತೆಯನ್ನು ತಪ್ಪು ಅಂತ ಸುಪ್ರಿಂಕೋರ್ಟ್‌ನಲ್ಲಿ ರದ್ದುಪಡಿಸಿಕೊಂಡು ಬಂದಿದ್ವಿ. ಸ್ವೀಕರ್ ಅನರ್ಹತೆ ಮಾಡಿದ್ರೆ ಮಂತ್ರಿಯಾಗುವ ಹಾಗಿಲ್ಲ. ಶಾಸಕರಾಗುವ ಹಾಗೂ ಇಲ್ಲ ಎಂಬುದು ನನ್ನ ಪ್ರಕಾರ ಸುಳ್ಳು. 2 ವರ್ಷ ಕೋರ್ಟ್‌ನಲ್ಲಿ ಶಿಕ್ಷೆಯಾಗಿದ್ರೆ ಮಾತ್ರ ಅನರ್ಹತೆಯಾಗುತ್ತೆ, ಇಲ್ಲವಾದಲ್ಲಿ ಸುಪ್ರಿಂಕೋರ್ಟ್‌ನಲ್ಲಿ ಅದನ್ನು ಪ್ರಶ್ನಿಸಿ ಗೆಲ್ಲಬಹುದು. ಯಾವುದೇ ಶಾಸಕರು ಅನರ್ಹತೆ ಕುರಿತಾಗಿ ಭಯಪಡುವ ಅಗತ್ಯವಿಲ್ಲ ಅಂತ ಶಾಸಕರಿಗೆ ಬಾಲಚಂದ್ರ ಜಾರಕಿಹೊಳಿ ಅಭಯ ನೀಡಿದ್ರು.