ETV Bharat / state

ಸ್ಯಾಂಡಲ್​ವುಡ್ ಡ್ರಗ್ಸ್ ಕೇಸ್: ಮತ್ತೊಬ್ಬ ಆರೋಪಿ ವಶಕ್ಕೆ ​ - Another accused in Sandalwood Drugs case arrested

ರಾಗಿಣಿ ಮತ್ತು ರವಿಶಂಕರ್ ಭಾಗವಹಿಸಿದ ಎಲ್ಲಾ ಪಾರ್ಟಿಯಲ್ಲಿ ಯಾವಾಗಲೂ ಇರುತ್ತಿದ್ದ ಎಂಬ ಮಾಹಿತಿ ಮೇರೆಗೆ ಶಾಂತ್ ರಂಕಾ ಎಂಬಾತನನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

dfsdsd
ಸ್ಯಾಂಡಲ್​ವುಡ್ ಡ್ರಗ್ಸ್ ಕೇಸ್​ನಲ್ಲಿ ಮತ್ತೊಬ್ಬ ಆರೋಪಿ ಬಂಧನ
author img

By

Published : Sep 6, 2020, 1:43 PM IST

Updated : Sep 6, 2020, 1:52 PM IST

ಬೆಂಗಳೂರು: ಸ್ಯಾಂಡಲ್​ವುಡ್ ಡ್ರಗ್ಸ್ ಕೇಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ನಗರದ ಇಂದಿರಾ ನಗರದಲ್ಲಿ ವಾಸಿಸುತ್ತಿದ್ದ ರಾಜಸ್ಥಾನ ಮೂಲದ ಪ್ರಶಾಂತ್ ರಂಕಾ ಎಂಬಾತನನ್ನು ವಶಕ್ಕೆ‌ ಪಡೆದಿದ್ದಾರೆ.

ಪ್ರೈವೇಟ್ ಫೈನಾನ್ಷಿಯಲ್ ಕಂಪನಿಯಲ್ಲಿ ಕಾರ್ ಸೀಜರ್ ಆಗಿ ಕೆಲಸ ಮಾಡುತ್ತಿದ್ದ ಈತ, ನಟಿ ರಾಗಿಣಿ ಸ್ನೇಹಿತ ರವಿಶಂಕರ್​ಗೆ ಅತ್ಯಂತ ಆಪ್ತನಾಗಿದ್ದ. ರಂಕಾ ಡ್ರಗ್ಸ್ ಪೂರೈಕೆ ಮತ್ತು ಡ್ರಗ್ಸ್ ಸೇವಿಸುತ್ತಿದ್ದ ಎನ್ನುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ‌ದೆಹಲಿಯಲ್ಲಿ ಸಿಸಿಬಿ ಪೊಲೀಸರಿಂದ ಬಂಧನಕ್ಕೆ‌ ಒಳಗಾಗಿದ್ದ ಡ್ರಗ್ ಡೀಲರ್ ವಿರೇನ್ ಖನ್ನಾ ಮೇಲೆ ಅವಧಿ ಮೀರಿ ಪಾರ್ಟಿ ಮಾಡಿದ್ದಕ್ಕೆ 2018 ರ ಆಗಸ್ಟ್ 8 ರಂದು ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಸಿಸಿಬಿಗೆ ಭೇಟಿ ನೀಡಿದ್ದ ರಾಗಿಣಿ ಸಿಬ್ಬಂದಿಯೊಂದಿಗೆ ರಾಗಿಣಿ ತೆಗೆಸಿಕೊಂಡಿದ್ದ ಫೋಟೋ ವೈರಲ್ ಆಗಿದೆ. ‌ಕೊರೊನಾ ವಾರಿಯರ್ಸ್‌ ಆಗಿ ಸಿಸಿಬಿ ಪೊಲೀಸರು ಸಹ ಕರ್ತವ್ಯ ನಿರ್ವಹಿಸಿದ್ದ ವೇಳೆ ಅಧಿಕಾರಿಗಳು ಮತ್ತು ರಾಗಿಣಿ ಸೌಹಾರ್ದಯುತ ಭೇಟಿಯಾಗಿದ್ದರು ಎನ್ನಲಾಗ್ತಿದೆ.

Last Updated : Sep 6, 2020, 1:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.